ಈ ವಾರ ಬಿಗ್​ಬಾಸ್​​ ಮನೆಯಿಂದ ರಾಜೀವ್​​​ ಹೊರಬಂದಿದ್ದಾರೆ. ​ಬಿಗ್​ಬಾಸ್​​​​ ಸೀಜನ್​​-8ರಲ್ಲಿ ಎಲಿಮಿನೇಟ್​​ ಆದ ಎಂಟನೇ ಸ್ಪರ್ಧಿಯಾಗಿ ರಾಜೀವ್​ ಹೊರಬಿದ್ದಿದ್ದಾರೆ.

ಬಿಗ್​ಬಾಸ್​​ ಅಂದ್ರೆ ಎಕ್ಸ್​ಪೆಕ್ಟ್​ದ ಅನ್​ಎಕ್ಸ್​ಪೆಕ್ಟ್​ ಅಂತಾ ಹೇಳ್ತಾರೆ, ಅದು ಮತ್ತೊಮ್ಮೆ ಸಾಬಿತಾಗಿದೆ. ರಾಜೀವ್​​ ಮೇಲೆ ಎಲ್ಲರಿಗೂ ಸ್ಟ್ರಾಂಗ್​​ ಕಂಟೆಸ್ಟೆಂಟ್​ ಎಂಬ​ ಅಭಿಪ್ರಾಯವಿತ್ತು. ಜೊತೆಗೆ ಬಿಗ್​ಬಾಸ್​​ ಫಿನಾಲೆಯಲ್ಲಿ ರಾಜೀವ್​ರನ್ನ ನೋಡ್ತೀವಿ ಅನ್ನೊ ಮಾತುಗಳು ಕೂಡಾ ವೀಕ್ಷಕರಿಂದ ಕೇಳಿ ಬರ್ತಾಯಿದ್ದವು. ಆದ್ರೆ ಈ ವಾರ ಬಿಗ್​ ಬಾಸ್​ ಮನೆಯಿಂದ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದ್ದು, 8ನೇ ಎಲಿಮಿನೇಟೆಡ್​ ಸ್ಪರ್ಧಿಯಾಗಿ ಹೊರಬಂದಿದ್ದಾರೆ.

ಕಳೆದ ವಾರದ​ ಟಾಸ್ಕ್​ನಲ್ಲಿ ಸಿಕ್ಕ ಗೋಲ್ಡನ್​​ ಪಾಸ್​ಅನ್ನು ಬಳಸಿ ನಾಮಿನೇಷನ್​ನಿಂದ ಹೊರಬರುತ್ತೀರಾ ಎಂದು ಬಿಗ್​ಬಾಸ್​​ ಕೇಳಿದಾಗ ರಾಜೀವ್​​ ಇಲ್ಲ, ನಾನು ಬಳಸೋದಿಲ್ಲಾ ಎಂದು ಸ್ಪಷ್ಟವಾಗಿ ಉತ್ತರ ನೀಡಿದ್ದರು. ಅದನ್ನ ಗಮನಿಸಿದ್ರೆ ರಾಜೀವ್​ ಅವರಿಗೂ ಸ್ವತಃ ತಾವು​​ ಈ ವಾರ ಎಲಿಮಿನೇಟ್​​​ ಆಗಲ್ಲಾ ಅನ್ನೊ ಕಾನ್ಫಿಡೆನ್ಸ್​​​ ತುಂಬಾನೆ ಇತ್ತು ಅನ್ನೋದು ಗೊತ್ತಾಗುತ್ತದೆ.

ಇನ್ನೂ ಈ ವಾರ ನಾಮಿನೇಷನ್​​ ವೇಳೆ ಅತಿ ಹೆಚ್ಚು ವೋಟ್​ಗಳನ್ನು ಪಡೆದು​ ದಿವ್ಯಾ ಸುರೇಶ್​​, ಲ್ಯಾಗ್​​ ಮಂಜು, ಪ್ರಶಾಂತ್​​ ಸಂಬರಗಿ, ವೈಷ್ಣವಿ ಹಾಗೂ ರಘು  ನಾಮಿನೇಟ್​​ ಆಗಿದ್ದರು. ಕೊನೆಯಲ್ಲಿ ಬಿಗ್​​ ಬಾಸ್​​ ಕ್ಯಾಪ್ಟನ್​​ ಅರವಿಂದ್​ ಬಳಿ ನೇರವಾಗಿ ಯಾರನ್ನಾದರು ನಾಮಿನೇಟ್​​ ಮಾಡಿ ಸೂಕ್ತ ಕಾರಣಗಳನ್ನ ತಿಳಿಸಬೇಕು ಎಂದು ಹೇಳಿದ್ದರು. ಆಗ ಅರವಿಂದ್​​ ರಾಜೀವ್​​ ಅವರ ಹೆಸರು ಸೂಚಿಸಿ ನನಗೆ ಅವರು ಕಾಂಪಿಟೇಟರ್​​ ಹಾಗೂ ಟಾಸ್ಕ್​ನಲ್ಲಿ ಫೇವರಿಸಮ್​ ಮಾಡ್ತಾರೆ ಎಂಬ ಕಾರಣಗಳನ್ನು ನೀಡಿದ್ದರು. ಈ ವಾರ ರಾಜೀವ್​​ ಎಲಿಮಿನೇಟ್​​ ಆಗಲು ಅರವಿಂದ್​​ ಮಾಡಿದ ನಾಮಿನೇಷನ್​ ಕಾರಣ​ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಒಟ್ಟಾರೆ ಈ ವಾರ ನಾಮಿನೇಟ್​ ಆಗಿದ್ದ 6 ಜನರ ಪೈಕಿ ಈಗ ರಾಜೀವ್​ ಮನೆಯಿಂದ ಹೊರಬಂದಿದ್ದಾರೆ.

ಏನಿದು ಗೋಲ್ಡನ್​ ಪಾಸ್?
ಬಿಗ್​ಬಾಸ್​​ ಟಾಸ್ಕ್​​ ಮೂಲಕ ಗೋಲ್ಡ​ನ್​​​ ಪಾಸ್​​ ಒಂದನ್ನು ನೀಡ್ತಾರೆ. ಸದಸ್ಯರು ಸ್ಪರ್ಧೆಯಲ್ಲಿ ಗೆದ್ದು ಆ ಪಾಸ್​​ ತಮ್ಮದಾಗಿಸಿಕೊಳ್ಳಬೇಕು. ಈ ಪಾಸ್​​ ಮೂಲಕ ಮನೆಯ ಸದಸ್ಯರು ನಾಮಿನೇಟ್​​​ ಆದಾಗ ಸೇವ್ ​ಆಗಲು ಬಳಸಬಹುದು. ಹಾಗೂ ಇಡೀ ಸೀಸನ್​ನಲ್ಲಿ ಯಾವಾಗ ಬೇಕಾದರೂ ಒಂದು ಸಲ ಆ ಗೋಲ್ಡನ್​​ ಪಾಸ್​ ಬಳಸಬಹುದು. ಪಾಸ್​​ ದೊರೆತ ಸದಸ್ಯ ಆ ಪಾಸನ್ನ ತುಂಬಾ ಸೇಫ್​​ ಆಗಿ ಇಟ್ಟುಕೊಳ್ಳಬೇಕು. ಬೇರೆ ಸದಸ್ಯ ಆ ಪಾಸನ್ನ ತಮ್ಮದಾಗಿಸಿಕೊಂಡರೆ, ಅವರು ಕೂಡಾ ಅದನ್ನು ಬಳಸಬಹುದು.

The post ಬಿಗ್​ಬಾಸ್ ಮನೆಯಿಂದ ಹೊರಬಿದ್ದ ರಾಜೀವ್ appeared first on News First Kannada.

Source: News First Kannada
Read More