ಬಿಗ್​​ಬಾಸ್​​ ಮನೆಯ ಲಕ್ಕಿ ಕಂಟೆಸ್ಟೆಂಟ್ ಶಮಂತ್​​ ಕೈಗೆ ‘ಚೊಂಬು’!

ಬಿಗ್​​ಬಾಸ್​​ ಮನೆಯ ಲಕ್ಕಿ ಕಂಟೆಸ್ಟೆಂಟ್ ಶಮಂತ್​​ ಕೈಗೆ ‘ಚೊಂಬು’!

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯಾವ ಯಾವ ಕಂಟೆಸ್ಟೆಂಟ್​ಗಳು ಎಷ್ಟು ಚೇಂಚ್​ ಆಗಿದ್ದಾರೆ. ಯಾವ ವಿಷಯದಲ್ಲಿ ಚೇಂಚ್​ ಆಗಿದ್ದಾರೆ ಅಂತಾ ಹೇಳಿ ಎಂದು ಸುದೀಪ್​.. ಚಕ್ರವರ್ತಿ ಚಂದ್ರಕೂಡ್​ ಬಳಿ ಕೇಳಿದ್ರು.. ಚಕ್ರವರ್ತಿ ಅವರು ಪ್ರತಿಯೊಬ್ಬರ ಬಗ್ಗೆಯೂ ಕಾರಣಗಳನ್ನು ನೀಡುತ್ತಾ ಮಾತನಾಡಿದ್ರು.

ಇನ್ನೂ ಮುಂದಿನ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಚಾಲೆಂಜರ್ಸ್​ ತಂಡ ಭಾಗವಹಿಸಿದ್ದು, ಶಮಂತ್​ ದಿವ್ಯಾ ಉರುಡುಗಾ, ಮಂಜು, ಅರವಿಂದ್​, ರಘು, ಪ್ರಿಯಾಂಕಾ​ ತಿಮ್ಮೆಶ್ ಭಾಗವಹಿಸುತ್ತಾರೆ. ಆ ಟಾಸ್ಕ್​ನಲ್ಲಿ ಮಂಜು ವಿಜೇತರಾಗಿ ಕ್ಯಾಪ್ಟನ್​ ಆಗಿ ಆಯ್ಕೆ ಆಗುತ್ತಾರೆ.

ಬಿಸ್​ಬಾಸ್​ ನೀಡಿದ ವಸ್ತುಗಳಲ್ಲಿ ಚೊಂಬು ಕೂಡಾ ಒಂದು. ಕಿಚ್ಚ ಸುದೀಪ್​ ಮೊದಲಿಗೇ ಆ ಚೊಂಬನ್ನು ಯಾರಿಗೆ ಕೊಡಲು ಬಯಸುತ್ತಿರಾ ಜೊತೆಗೆ ಯಾಕೆ ಎಂದು ಕಾರಣ ನೀಡಿ ರಘು ಅವರಿಗೆ ಮೊದಲು ಕೇಳಿದ್ರು..

 

ರಘು.. ಶಮಂತ್​ ಹೆಸರನ್ನು ಆಯ್ಕೆ ಮಾಡಿ ಕಾರಣವನ್ನು ಹೇಳಿದ್ರು.. ಬಳಿಕ ಶಮಂತ್​ ಚಕ್ರವರ್ತಿ ಅವರ ಹೆಸರು ಚ್ಯೂಸ್ ಮಾಡಿ ಅವರಿಗೆ ಚಂಬನ್ನು ನೀಡಿದ್ರು.. ಹೀಗೇ ಒಬ್ಬರಿಂದ ಒಬ್ಬರಿಗೇ ಚೊಂಬು ಪಾಸ್ ಆಯ್ತು. ಕೊನೆಗೆ ಹೆಚ್ಚಿನ ಸ್ಪರ್ಧಿಗಳು ಚೊಂಬನ್ನ ಶಮಂತ್​​ಗೆ ನೀಡಲು ಇಷ್ಟಪಟ್ಟಿದ್ದರಿಂದ ಕಿಚ್ಚ ಸುದೀಪ್.. ಬಿಗ್​ಬಾಸ್​ನ ಮುಂದಿನ ಆದೇಶದವರೆಗೂ ಚೊಂಬನ್ನ ಇಟ್ಟುಕೊಂಡು ಇರುವಂತೆ ಶಮಂತ್​ಗೆ ಹೇಳಿದ್ರು. ಜೊತೆಗೆ ಟ್ಯುಬ್ಲೆಟ್​ ಕೂಡ ತಾವೇ ಇಟ್ಟುಕೊಂಡಿದ್ದರಿಂದ ಚೊಂಬು ಮತ್ತು ಟ್ಯುಬ್ಲೆಟ್​ ಅನ್ನ ಒಟ್ಟಿಗೆ ಹಿಡಿದುಕೊಂಡು ತಿರುಗಾಡು ಪರಿಸ್ಥಿತಿ ಶಮಂತ್​ಗೆ ಬಂದಿದೆ.

ಕೊನೆಯಲ್ಲಿ ಕಿಚ್ಚ ಸ್ಪರ್ಧಿಗಳ ಮೇಲೆ ಕೋಪಗೊಂಡ್ರು, ಅದೂ ಕೂಡಾ ಒಬ್ಬರು ಮಾತನಾಡುವಾಗ ಇನ್ನೊಬ್ಬರು ಅಲ್ಲಲ್ಲಯೇ ಮಾತನಾಡೋದು ಸರಿಯಲ್ಲ. ಅದೂ ಸ್ಟೇಜ್ ಮೇಲೆ ನಿಂತವರಿಗೆ ಶೋಭೆ ತರಲ್ಲ ಅಂತಾ ಕವಿ ಮಾತು ಹೇಳಿದ್ರು.

The post ಬಿಗ್​​ಬಾಸ್​​ ಮನೆಯ ಲಕ್ಕಿ ಕಂಟೆಸ್ಟೆಂಟ್ ಶಮಂತ್​​ ಕೈಗೆ ‘ಚೊಂಬು’! appeared first on News First Kannada.

Source: newsfirstlive.com

Source link