ಬಿಗ್​​ಬಾಸ್​​ ಮನೆಯ ಕ್ಯಾಪ್ಟನ್​ ಆಗಿ ದಿವ್ಯಾ ಉರುಡುಗ ಆಯ್ಕೆಯಾಗಿದ್ದೆ ತಡ ಗಂಡೈಕಳನ್ನು ಅಡುಗೆ ಮನೆ ಸೇರಿಸಿಬಿಟ್ಟಿದ್ದಾರೆ. ಇದರಲ್ಲಿ ಏನು ವಿಶೇಷ ಅಂತಿರಾ. ಇಲ್ಲೆ ಇರೋದು ಇಂಟರೆಸ್ಟಿಂಗ್ ಮ್ಯಾಟರ್.

ಅದೇನಪ್ಪ ಅಂದ್ರೇ ಹೆಣ್ಮಕ್ಕಳು ಅಡುಗೆ ಮಾಡುವಾಗ ಅದು ಚೆನ್ನಾಗಿಲ್ಲ, ಇದಕ್ಕೆನೋ ಕಡಿಮೆ ಇದೆ. ಇವತ್ತು ಅದೇ ತಿಂಡಿನಾ? ಅವರಿಗೆ ಊಟ ಕಡಿಮೆ ಬಂತು ಅಂತಾ ರಾಗಾ ಏಳೀತಿದ್ದ ಬಿಗ್​ ಮನೆಯ ಪುರುಷ ಸ್ಪರ್ಧಿಗಳಿಗೆ ದಿವ್ಯಾ ಉರುಡುಗ ಅಡುಗೆ ಮನೆಯ ಡಿಪಾರ್ಟ್​ಮೆಂಟ್​ ವಹಿಸಿಕೊಟ್ಟಿದ್ದಾರೆ.

ಹುಡುಗರು ಸಿಕ್ಕಿದ್ದೇ ಚಾನ್ಸು ಅಂತಾ ಅಡುಗೆ ಮನೆಯನ್ನ ಅಲ್ಲೋಲ ಕಲ್ಲೋಲ ಮಾಡಿ ಬಿಟ್ರು. ಮೂರು ಹೊತ್ತು ಚಿತ್ರಾನ್ನ, ಚಿತ್ರಾನ್ನ ಅಂತಾ ಜಪಾನೂ ಮಾಡಿದ್ರು. ಇನ್ನೂ ಹುಡುಗಿಯರು ಕೇಳ್ಬೇಕಾ ಕಾಲ್​ ಏಳದಿದ್ದೆ ಏಳದಿದ್ದು.. ಅದ್ರಲ್ಲೂ ವೈಷ್ಣವಿ ಅವರಂತೂ ಮಂಜು ಅವರನ್ನ ರೇಗಿಸಿದ್ದೆ ರೇಗಿಸಿದ್ದು..

ಇದ್ರಿಂದ ಎಲ್ರಿಗೂ ಒಂದಿಷ್ಟು ಎಂಟರ್ಟೈನ್ಮೆಂಟ್ ಸಿಕ್ತು. ಹಾಗೇ ಹೊಟ್ಟೆ ಮೇಲೆ ತಣ್ಣೀರ ಬಟ್ಟೆನೂ ಬಿತ್ತು. ಇದನ್ನೆಲ್ಲಾ ಒಂದು ಕಡೆ ಇಟ್ಟು ನೋಡೊದಾದ್ರೇ ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು ಒಬ್ಬರ ಮುಖ ಇನ್ನೊಬ್ಬರು ನೋಡದ ಸ್ಥಿತಿ ಕೂಡ ಉಂಟಾಗಿತ್ತು. ಆದೇ ಹುಡುಗರು ಅಡುಗೆ ಮಾಡಿ ಬಡಿಸುವಾಗ ಮನೆ ಲವಲವಿಕೆಯ ಚಿಲುಮೆಯಾಗಿತ್ತು. ಏನೂ ನಡೆದೇ ಇಲ್ಲವೇನೂ ಅನ್ನುವಷ್ಟು ಎಲ್ರೂ ಖುಷಿಯಲ್ಲಿ ತೇಲಿದ್ರು.

ಇದನ್ನೆಲ್ಲಾ ನೋಡಿದ ಫ್ಯಾನ್ಸ್ ಸಖತ್ತಾಗೆ ಎಂಜಾಯ್​ ಮಾಡಿದ್ರು. ದಿವ್ಯಾ ಒಳ್ಳೆ ಕೆಲಸನೇ ಕೊಟ್ಟಿದ್ದಾರೆ ಬಿಡಿ. ಇನ್ನೂ ಗಂಡ್ಮಕ್ಕಳ್ಳು ಅಡುಗೆ ಮನೆಯಲ್ಲಿ ಅದೇನೂ ವೆರೈಟಿ ಅಡುಗೆ ಮಾಡ್ತಾರೋ ನೋಡೋಣ.

The post ಬಿಗ್​​ಬಾಸ್​ ಹುಡುಗರ ಬಾಳು ಚಿತ್ರಾನ್ನ.. ಮಸ್ತ್​ ಆಗಿದೆ ವಾರದ ‘ಕಿಚನ್ ಕಹಾನಿ’ appeared first on News First Kannada.

Source: newsfirstlive.com

Source link