ಕಿಚ್ಚ ಸುದೀಪ್​ ಅವರ ಅನುಪಸ್ಥಿಯಲ್ಲಿ ಕಳೆದ ಎರಡು ವಾರಗಳ ವಾರಾಂತ್ಯದ ಸಂಚಿಕೆ ನಡೆದಿದೆ. ಜೊತೆಗೆ ಎಲಿಮನೇಷನ್​​ ಪ್ರಕ್ರಿಯೆ ಕೂಡಾ ನಡೆದಿದ್ದು, ಕಿಚ್ಚ ಇಲ್ಲದ ಮೊದಲ ವಾರದಲ್ಲಿ ವಿಶ್ವನಾಥ್​ ಎಲಿಮನೇಟ್​ ಆದ್ರು.. ಬಳಿಕ ಎರಡನೇ ವಾರದಲ್ಲಿ ರಾಜೀವ್​ ಎಲಿಮನೇಟ್​ ಆದರು.

ಇದೀಗ ಕಿಚ್ಚನಿಲ್ಲದ ಮೂರನೇ ವಾರದಲ್ಲಿ ಯಾರು ಬಿಗ್​ಬಾಸ್​ ಮನೆಯಿಂದ ಹೊರ ಬರಲಿದ್ದಾರೆ ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಆದ್ರೆ ಈ ವಾರ ಮ್ಯಾಕ್ಸಿಮಮ್​ ಎಲಿಮನೇಷನ್​ ಇರಲ್ಲ. ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.. ಪ್ರತಿ ವಾರದಂತೆ ಈ ವಾರವೂ ಬಿಗ್​ಬಾಸ್​ ನಾಮಿನೇಷನ್​ ಪ್ರಕ್ರಿಯೆ ನೆಡೆದಿದೆ.. ನಿನ್ನೆಯ ಸಂಚಿಕೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ನಡೆದಿದೆ. ಆದ್ರೆ, ವೋಟಿಂಗ್ ಲೈನ್‌ಗಳು ತೆರೆದಿಲ್ಲ. ಹೀಗಾಗಿ ನಾಮಿನೇಷನ್‌ ಇರೋದು ಬಹುತೇಕ ಡೌಟ್‌.

ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಗಳನ್ನ ಮನೆಯಿಂದ ಹೊರ ಕಳುಹಿಸೋದು ಜನರ ವೋಟಿಂಗ್ ಆಧಾರದಲ್ಲಿ. ಹೀಗಾಗಿ ಜನರಿಗೆ ವೋಟ್ ಹಾಕಲು ಅವಕಾಶವೇ ಇಲ್ಲದಿರೋದರಿಂದ ಈ ವಾರ ಎಲಿಮನೇಷನ್‌ ನಡೆಯುವ ಸಾಧ್ಯತೆ ಇಲ್ಲ.

The post ಬಿಗ್​​ಬಾಸ್ ಮನೆಯಲ್ಲಿ ನಾಮಿನೇಷನ್​ ನಡೆದಿದ್ರೂ ಈ ವಾರ ನೋ ಎಲಿಮನೇಷನ್​.. appeared first on News First Kannada.

Source: newsfirstlive.com

Source link