ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್‌ಗೆ ಬಿಗ್‌ ಓಪನಿಂಗ್ ಸಿಕ್ಕಿದೆ. ಅದು ಎಂಥಾ ಓಪನಿಂಗ್‌ ಅಂದ್ರೆ ಅಬ್ಬಬ್ಬಾ! ಅದನ್ನ ಜಡೆ ಜಗಳದ ಆರಂಭ. ಹೌದು, ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್‌ ಫಸ್ಟ್ ಡೇ ಇಬ್ಬರು ಮಹಿಳಾ ಸ್ಪರ್ಧಿಗಳ ನಡುವೆ ಫೈಟ್ ನಡೀತು. ಅದು ದಿವ್ಯಾ ವರ್ಸಸ್‌ ದಿವ್ಯಾ ನಡುವೆ.

ಕಿಚ್ಚ ಸುದೀಪ್‌ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗಗೆ ಒಂದು ಟಾಸ್ಕ್ ಕೊಟ್ಟರು. ಅದೇನೂ ಅದ್ರೆ, ಇಬ್ಬರಿಗೂ ಬಿಂದಿ ಕೊಡಲಾಗಿತ್ತು. ಯಾರು ಮೊದಲು ಹಣೆಗೆ ಬಿಂದಿ ಇಡುತ್ತಾರೋ ಅವ್ರೇ ಈ ಟಾಸ್ಕ್‌ನಲ್ಲಿ ವಿನ್ನರ್ ಆಗ್ತಾರೆ. ಇಬ್ಬರನ್ನ ಬೀಳ್ಕೊಡುಗೆ ಕೊಟ್ಟ ಕಿಚ್ಚ ಸುದೀಪ್ ಆಲ್ ದಿ ಬೆಸ್ಟ್ ಹೇಳಿದರು. ಆದ್ರೆ, ಮನೆಗೆ ಹೋದ ದಿವ್ಯಾದ್ವಯರು ಟಾಸ್ಕ ಆರಂಭಿಸಿದರು.


ಈ ಟಾಸ್ಕ್‌ನ ಇಬ್ಬರು ಸೀರಿಯಸ್ ಆಗಿ ತೆಗೆದುಕೊಂಡಿದ್ದರ ಪರಿಣಾಮ ಅಗ್ರೇಸಿವ್‌ ಆಗಿ ನಡೆಯಿತು. ಲೀವಿಂಗ್ ಏರಿಯಾದಲ್ಲಿ ಇಬ್ಬರು ಕದನಕ್ಕಿಳಿದರು. ಕೊನೆಗೆ ಗೆದ್ದವರು ದಿವ್ಯಾ ಸುರೇಶ್‌. ದಿವ್ಯಾ ಉರುಡುಗ ಮೊದಲ ಟಾಸ್ಕ್‌ನಲ್ಲಿಯೇ ಸೋತಿದ್ದಾರೆ.

The post ಬಿಗ್​​ಬಾಸ್ ಸೆಕೆಂಡ್‌ ಇನ್ನಿಂಗ್ಸ್‌ ಮೊದಲ ದಿನವೇ ಇದೆಂಥ ದೃಶ್ಯ; ಜಂಗೀ ಕುಸ್ತಿ ಆಡಿದ್ಯಾರು? appeared first on News First Kannada.

Source: newsfirstlive.com

Source link