ಬಿಗ್ಬಾಸ್ ಸೀಸನ್-8 ಲೇಟ್ ಅಂಡ್ ಲೇಟೆಸ್ಟ್ ಆಗಿ ಬಂದ್ರು ಶೋ ಸಖತ್ ಆಗೀ ಮೂಡಿ ಬಂತು ಹಾಗೂ ಆದೆ ರೀತಿ ಭರ್ಜರಿಯಾಗಿ ಮುಗಿತು. ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ರೆ ಅರವಿಂದ್ ಕೆ.ಪಿ ಫಸ್ಟ್ ರನ್ನರ್ ಆಗಿ ಮಿಂಚಿದ್ರು. ಬಿಗ್ಬಾಸ್ ಸೀಸನ್ ಎಂಟು ಮುಗಿತಾಯಿದ್ದಂತೆ ಪ್ರೇಕ್ಷಕರು ಕೊಂಚ ಬೇಸರಗೊಂಡು ಶೋನ ಮಿಸ್ ಮಾಡೊಕೊಂಡ್ರು.
ಆದ್ರೆ ಅದರ ಹಿಂದೆ ಬಿಗ್ಬಾಸ್ ಮಿನಿ ಸೀಸನ್ ಕೂಡ ಅದ್ಭುತವಾಗಿ ಮೂಡಿಬಂತು.. ಹಾಗೂ ಒಂದೇ ವಾರ ಎಂದುಕೊಂಡಿದ್ದ ಶೋ 15 ದಿನಗಳ ಕಾಲ ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಿ ಎಂಡ್ ಆಯ್ತು. ಈ ಎರಡೂ ಮುಗಿದ್ಮೇಲೆ ಜನರಲ್ಲಿ ಪ್ರಶ್ನೆ ಮೂಡಿದ್ದು ಬಿಗ್ಬಾಸ್ ಸೀಸನ್-9 ಶುರುವಾಗೋದು ಯಾವಾಗ ಅಂತಾ.
ಬಿಗ್ಬಾಸ್ ಸೀಸನ್ 8 ಕೊರೊನಾ ಕಾರಣದಿಂದ ಮುಗಿಯೋದು ಲೇಟಾಯ್ತು. ಈ ಮುಂಚೆ ಅಕ್ಟೋಬರ್ನಲ್ಲಿ ಸೀಸನ್ 9 ಸ್ಟಾರ್ಟ್ ಆಗ್ಬಹುದು ಎನ್ನುವ ಸುದ್ದಿ ಎಲ್ಲೆಡೆ ಸದ್ದು ಮಾಡ್ತಾಯಿತ್ತು.. ಹಾಗಾಗಿ ಜನ ತಿಂಗಳು ಕಳೆದರು ಯಾಕೆ ಬಿಗ್ಬಾಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತಾ ನಿರಾಶೆ ಹೊಂದಿದ್ದರು.
ಅದಾದ ಬಳಿಕ ಬಿಗ್ ಬಾಸ್ ಹೊಸ್ಟ್ ಕಿಚ್ಚಾ ಸುದೇಪ್ ಇತ್ತಿಚೆಗಷ್ಟೆ ಅವ್ರ ಕೋಟಿಗೊಬ್ಬ-2 ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಬಿಗ್ಬಾಸ್ 2022 ಜನವರಿ ತಿಂಗಳಲ್ಲಿ ಭರ್ಜರಿಯಾಗಿ ಲಾಂಚ್ ಆಗಲಿದೆ ಎಂಬ ಸುಳಿವನ್ನು ಸುದೀಪ್ ನೀಡಿದ್ರು.. ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ರು.
ಕಲರ್ಸ್ ಕನ್ನಡದ ಕ್ಲಸ್ಟರ್ ಹೆಡ್ ಪರಮೇಶ್ವರ್ ಗುಂಡ್ಕಲ್ ಬಿಗ್ಬಾಸ್ ಯಾವಾಗ ಅನ್ನುವ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕಳೆದ ಬಾರಿ ಅಂದ್ರೆ ಬಿಗ್ಬಾಸ್ ಸೀಸನ್ 8ನ್ನು ಕೊರೊನ ಕಡಿಮೆಯಾಯ್ತು ಅನ್ನುವ ಮನೋಭಾವದಲ್ಲಿ ಶುರು ಮಾಡಿದ್ವಿ ಆದ್ರೆ ಬಿಗ್ಬಾಸ್ ಶುರುವಾದ ನಂತ್ರ ಕೊರೊನ ಹಾವಳಿ ಜಾಸ್ತಿಯಾಯ್ತು. 72 ದಿನಕ್ಕೆ ಕಂಟೆಸ್ಟೆಂಟ್ಗಳನ್ನಾ ಮನೆಯಿಂದ ಹೋರಕ್ಕೆ ಕರೆದ್ವಿ. ಬಳಿಕ ಕೊರೊನಾ ಕಡಿಮೆಯಾದ್ಮೇಲೆ ಸೆಕೆಂಡ್ ಇನ್ನಿಂಗ್ಸ್ನ ಶುರು ಮಾಡಿ 48 ದಿನಗಳ ಕಾಲ ಕಂಟೆಸ್ಟೆಂಟ್ಗಳು ದೊಡ್ಡ ಮನೆಯಲ್ಲಿದ್ದರು. 100 ದಿನದಲ್ಲಿ ಮುಗಯಬೇಕಿದ್ದ ಆಟ 120 ದಿನಕ್ಕೆ ಮುಗಿಯಿತು.
120 ದಿನದ ಬಿಗ್ಬಾಸ್ ಆಟ ಜೊತೆಗೆ ಎರಡು ಇನ್ನಿಂಗ್ಸ್ಗಳು ಒಂದು ರೀತಿಯ ಹಿಸ್ಟ್ರಿ ಕ್ರಿಯೇಟ್ ಮಾಡ್ತು. ಕಳೆದ ಬಾರಿಯ ರಿಸ್ಕ್ನ ಮತ್ತೆ ತೆಗೆದುಕೊಳ್ಳೊದು ಕೊಂಚ ಕಷ್ಟ ಹಾಗಾಗಿ ಈ ಬಾರಿ ಬಿಗ್ಬಾಸ್ ಸ್ವಲ್ಪ ಲೇಟ್ ಆಗಿಯೇ ಶುರುವಾಗಲಿದೆ. ಕೊರೊನಾ 3ನೇ ಅಲೆಯನ್ನು ನೋಡಿಕೊಂಡು ಬಿಗ್ಬಾಸ್ ಶುರುಮಾಡುವ ಪ್ಲಾನ್ ಇದೆ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.
ಒಟ್ಟಿನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಯಾವಾಗ ಅನ್ನುವ ಕುತೂಹಲಕ್ಕೆ ಪರಮೇಶ್ವರ್ ಗುಂಡ್ಕಲ್ ಬ್ರೇಕ್ ಹಾಕಿದ್ದು. ಸೀಸನ್ 9 ಯಾವಾಗ ಅನ್ನುವ ಪ್ಲಾನ್ ಇಲ್ಲಾ.. ಆ ಬಗ್ಗೆ ನಾವೂ ಇನ್ನು ಯೋಚನೆ ಮಾಡಿಲ್ಲಾ.. ಎಂದು ಕ್ಲಾರಿಟಿ ಕೊಟ್ಟಿದ್ದಾರೆ.