ರಾಕೆಶ್-ಶಮಿತಾ
ರಾಕೇಶ್ ಬಾಪಟ್ ಹಾಗೂ ಶಮಿತಾ ಶೆಟ್ಟಿ ಬಿಗ್ ಬಾಸ್ ಒಟಿಟಿಯಲ್ಲಿ ತುಂಬಾನೇ ಕ್ಲೋಸ್ ಆಗಿದ್ದರು. ಈ ಜೋಡಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಬೇಗ ಕನೆಕ್ಟ್ ಆಗಿದ್ದರು. ಇವರ ಆಪ್ತತೆ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬಿಗ್ಬಾಸ್ ಒಟಿಟಿಯಿಂದ ಹೊರ ಬಂದ ನಂತರವೂ ಇವರು ಕ್ಲೋಸ್ ಆಗಿಯೇ ಇದ್ದರು. ಈಗ ಈ ಜೋಡಿ ಮತ್ತೆ ಬಿಗ್ ಬಾಸ್ 15ರಲ್ಲಿ ಒಂದಾಗಿದೆ. ಇಬ್ಬರೂ ಮೊದಲ ದಿನವೇ ರೊಮ್ಯಾನ್ಸ್ ಶುರು ಮಾಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಬಿಗ್ ಬಾಸ್ 15 ಆರಂಭವಾಗಿತ್ತು. ಸಲ್ಮಾನ್ ಖಾನ್ ಅವರು ಗ್ರ್ಯಾಂಡ್ ಆಗಿ ಇದಕ್ಕೆ ಚಾಲನೆ ನೀಡಿದ್ದರು. ರಣವೀರ್ ಸಿಂಗ್ ಸೇರಿ ಕೆಲ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಬಾರಿ ಕಾಡಿನ ಥೀಮ್ನಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಶಮಿತಾ ಶೆಟ್ಟಿ ಅವರು ದೊಡ್ಮನೆಗೆ ಎಂಟ್ರಿ ಪಡೆದಿದ್ದರು. ಆದರೆ, ರಾಕೇಶ್ ಬಾಪಟ್ಗೆ ಈ ಅವಕಾಶ ಇರಲಿಲ್ಲ. ಈಗ ಬಿಗ್ ಬಾಸ್ ಮನೆ ಒಳಗೆ ವೈಲ್ಡ್ ಕಾರ್ಡ್ ಮೂಲಕ ಅವರು ಎಂಟ್ರಿ ಪಡೆದಿದ್ದಾರೆ. ಬಂದ ಮೊದಲ ದಿನವೇ ರಾಕೇಶ್ ಅವರು ಶಮಿತಾರನ್ನು ಹಗ್ ಮಾಡಿಕೊಂಡು ಕಿಸ್ ಮಾಡಿದ್ದಾರೆ.
ಕಲರ್ಸ್ ಟಿವಿ ಅವರು ಈ ಬಗ್ಗೆ ಪ್ರೋಮೋ ಹಂಚಿಕೊಂಡಿದೆ. ಕಾಡಿನ ಥೀಮ್ನಲ್ಲಿ ಬಿಗ್ ಬಾಸ್ ನಡೆಯುತ್ತಿರುವುದರಿಂದ ಕರಡಿ ವೇಶದಲ್ಲಿ ರಾಕೇಶ್ ಬಂದಿದ್ದಾರೆ. ಹೀಗಾಗಿ, ಶಮಿತಾಗೆ ಕರಡಿ ವೇಶದಲ್ಲಿರುವ ವ್ಯಕ್ತಿ ರಾಕೇಶ್ ಎಂದು ತಿಳಿದಿಲ್ಲ. ಹೀಗಾಗಿ, ಅವರು ನಾರ್ಮಲ್ ಆಗಿಯೇ ಇದ್ದರು. ಈ ವೇಳೆ ಮುಖವಾಡ ತೆಗೆದ ರಾಕೇಶ್ ಅವರು ಶಮಿತಾ ಅವರನ್ನು ಹಿಂದಿನಿಂದ ಹಗ್ ಮಾಡಿ, ಮುತ್ತುಕೊಟ್ಟಿದ್ದಾರೆ. ರಾಕೇಶ್ ನೋಡಿ ಶಮಿತಾ ನಿಜಕ್ಕೂ ಖುಷಿಪಟ್ಟಿದ್ದಾರೆ.
ಶಮಿತಾ ಮತ್ತು ರಾಕೇಶ್ ಬಿಗ್ ಬಾಸ್ ಮನೆಯಲ್ಲಿ ಒಂದಾಗಿರುವುದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ. ಇವರ ರೊಮ್ಯಾನ್ಸ್ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆ ಗೋಚರವಾಗಿದೆ. ಮುಂದಿನ ಎಪಿಸೋಡ್ನಲ್ಲಿ ಈ ಬಗ್ಗೆ ಗೊತ್ತಾಗಲಿದೆ.
ಇದನ್ನೂ ಓದಿ: Raj Kundra: ಶಿಲ್ಪಾ ಶೆಟ್ಟಿ ವರ್ತನೆಗೆ ತದ್ವಿರುದ್ಧವಾಗಿ ನಡೆದುಕೊಂಡ ರಾಜ್ ಕುಂದ್ರಾ; ಅನುಮಾನ ಹುಟ್ಟಿಸಿದೆ ಈ ನಡೆ