ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್ | Salman Khan Angry on Pratik Sehajpal and used Beep word


ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್

ಪ್ರತೀಕ್​-ಸಲ್ಮಾನ್​

ಹಿಂದಿ ಬಿಗ್​ ಬಾಸ್ 15ನೇ (Bigg Boss 15)ಸೀಸನ್​ ಆರಂಭಗೊಂಡು ಹಲವು ದಿನಗಳು ಕಳೆದಿವೆ. ಮನೆಯಲ್ಲಿರುವ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಎಲಿಮಿನೇಟ್​ ಆಗುತ್ತಿದ್ದಾರೆ. ಇದರ ಜತೆಗೆ ಸಾಕಷ್ಟು ವಿವಾದಗಳನ್ನು ಕೂಡ ಈ ಶೋ ಸೃಷ್ಟಿ ಮಾಡುತ್ತಿದೆ. ಈ ಬಾರಿಯ ಬಿಗ್​ ಬಾಸ್​ ಕಾಡಿನ ಥೀಮ್​ನಲ್ಲಿ ಮೂಡಿ ಬಂದಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಪ್ರತೀ ವೀಕೆಂಡ್​ನಲ್ಲಿ ಸಲ್ಮಾನ್​ ಖಾನ್​ (Salman Khan) ನಿರೂಪಣೆ ಗಮನ ಸೆಳೆಯುತ್ತಿದೆ. ಎಲ್ಲಾ ಪರಿಸ್ಥಿತಿಗಳನ್ನು ಅವರು ಕೂಲ್​ ಆಗಿ ನಿರ್ವಹಿಸುತ್ತಾರೆ. ಆದರೆ, ಈ ವಾರ ಸಲ್ಮಾನ್​ ಖಾನ್ ತಮ್ಮ ಟೆಂಪರ್​ ಕಳೆದುಕೊಂಡಿದ್ದಾರೆ. ಪ್ರತೀಕ್​ ಸೆಹಜ್​ಪಾಲ್​ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಬೀಪ್​ ಶಬ್ದಗಳನ್ನು ಕೂಡ ಬಳಕೆ ಮಾಡಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.

ಈ ವಾರದ ಪ್ರೋಮೋವನ್ನು ಬಿಗ್​ ಬಾಸ್ ಸೋಶಿಯಲ್​ ಮೀಡಿಯಾ​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ತುಂಬಾನೇ ಸಿಟ್ಟಾಗಿದ್ದರು. ಇದಕ್ಕೆ ಕಾರಣವಾಗಿದ್ದು ಪ್ರತೀಕ್​ ಅವರು. ರಾಜೀವ್​ ಅವರನ್ನು ತುಂಬಾನೇ ಕೆಟ್ಟದಾಗಿ ಹೀಯಾಳಿಸಿದ್ದರು ಪ್ರತೀಕ್​. ಇದು ಸಲ್ಮಾನ್​ ಖಾನ್​ಗೆ ಸಿಟ್ಟು ತರಿಸಿದೆ.

‘ಪ್ರತೀಕ್, ನೀವು ಬೇರೆಯವರ ಬಗ್ಗೆ ಹಾಸ್ಯ ಮಾಡೋಕೆ​ ಇದು ಕಾಮಿಡಿ ಶೋ ಎಂದುಕೊಂಡಿದ್ದೀರಾ? ನಾನು ಯಾವಾಗಲೂ ನನ್ನ ಗೆರೆಯನ್ನು ದಾಟಿಲ್ಲ. ರಾಜೀವ್​​ಗೆ ನೀವು ಏನು ಹೇಳೋಕೆ ಹೊರಟಿರಿ?’ ಎಂಬಿತ್ಯಾದಿ ಪ್ರಶ್ನೆಗಳನ್ನು ತುಂಬಾನೇ ಸಿಟ್ಟಿನಿಂದ ಕೇಳಿದರು ಸಲ್ಮಾನ್​ ಖಾನ್​. ಇದಕ್ಕೆ ಸಮಜಾಯಿಷಿ ನೀಡೋಕೆ ಬಂದರು ಪ್ರತೀಕ್​. ಆಗ ಸಲ್ಲು ಸಿಟ್ಟು ಮತ್ತಷ್ಟು ಹೆಚ್ಚಾಯಿತು. ಸಲ್ಲು ಬೀಪ್​ ಶಬ್ದ ಬಳಕೆ ಮಾಡಿದರು. ಮುಂದುವರಿದು, ‘ನಿಮಗೆ ನಿಮ್ಮ ಗಡಿ ಏನು ಎಂಬುದು ಗೊತ್ತಿಲ್ಲ.  ನಾನು ನಿಮ್ಮ ಬಗ್ಗೆ ತಮಾಷೆ ಮಾಡಲು ಪ್ರಾರಂಭಿಸಬೇಕೇ? ಹಾಗೆ ಮಾಡಿದರೆ ನೀವು ಎರಡು ಸೆಕೆಂಡುಗಳಲ್ಲಿ ಅಳಲು ಪ್ರಾರಂಭಿಸುತ್ತೀರಿ’ ಎಂದರು ಸಲ್ಮಾನ್​ ಖಾನ್​.

‘ನಾನು ನಿಮ್ಮೊಂದಿಗೆ ಇರಬೇಕಿತ್ತು. ನಾನು ನಿಮ್ಮನ್ನು ಯಾವ ಗತಿಗೆ ತರುತ್ತಿದ್ದೆ ಎಂಬುದನ್ನು ಯೋಚಿಸಿ. ನಾನು ಅಲ್ಲಿದ್ದಿದ್ದರೆ ಮನೆ ಬಿಟ್ಟು ಕಳುಹಿಸಿ ಎಂದು ನೀವು ಬೇಡಬೆಕಿತ್ತು. ಆ ಪರಿಸ್ಥಿತಿಗೆ ನಿಮ್ಮನ್ನು ತರುತ್ತಿದ್ದೆ’ ಎಂದಿದ್ದಾರೆ ಸಲ್ಲು.

ಇದನ್ನೂ ಓದಿ: Salman Khan: ಸೆಲ್ಫಿ ಗೆದುಕೊಳ್ಳಲು ಬಂದ ಅಭಿಮಾನಿ ಬಗ್ಗೆ ಸಿಟ್ಟಾದ ಸಲ್ಮಾನ್​ ಖಾನ್ ಮಾಡಿದ್ದೇನು ನೋಡಿ

TV9 Kannada


Leave a Reply

Your email address will not be published. Required fields are marked *