ಬಿಗ್​ ಬಾಸ್ ಅರ್ಧಕ್ಕೆ ತೊರೆದ ರಾಕೇಶ್ ಬಾಪಟ್​​-ಶಮಿತಾ ಶೆಟ್ಟಿ; ಏನಿದು ಸಮಾಚಾರ? | Shamita Shetty And Raqesh Bapat Out from Bigg Boss 15 due to Health


ಬಿಗ್​ ಬಾಸ್ ಅರ್ಧಕ್ಕೆ ತೊರೆದ ರಾಕೇಶ್ ಬಾಪಟ್​​-ಶಮಿತಾ ಶೆಟ್ಟಿ; ಏನಿದು ಸಮಾಚಾರ?

ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್

‘ಬಿಗ್​ ಬಾಸ್​ ಸೀಸನ್​ 15’ ಸಾಕಷ್ಟು ಕುತೂಹಲ ಸೃಷ್ಟಿಸುತ್ತಿದೆ. ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ಬಿಗ್​ ಬಾಸ್​ ಮನೆ ಒಳಗೆ ಇದ್ದಿದ್ದರಿಂದ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಗುತ್ತಿತ್ತು. ಇಬ್ಬರೂ ಕ್ಲೋಸ್​ ಆಗಿರೋದು ಅಭಿಮಾನಿಗಳಿಗೆ ಖುಷಿ ನೀಡಿತ್ತು. ಆದರೆ, ಅನಾರೋಗ್ಯ ಕಾರಣದಿಂದ ರಾಕೇಶ್​ ಬಾಪಟ್​ ಬಿಗ್​ ಬಾಸ್​ನಿಂದ ಹೊರ ನಡೆದಿದ್ದರು. ಈಗ ಶಮಿತಾ ಶೆಟ್ಟಿ ಪಾಳಿ. ಅವರು ಕೂಡ ಈ ವಾರ ಬಿಗ್​ ಬಾಸ್​ನಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಇದು ವೀಕ್ಷಕರಿಗೆ ಸಾಕಷ್ಟು ಬೇಸರ ಮೂಡಿಸಿದೆ.

ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ಬಿಗ್​ ಬಾಸ್​ ಒಟಿಟಿಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದರು. ಈ ಜೋಡಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಬೇಗ ಕನೆಕ್ಟ್​ ಆಗಿದ್ದರು. ಇವರ ಆಪ್ತತೆ ಬಿಗ್​ ಬಾಸ್​ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬಿಗ್​ಬಾಸ್​ ಒಟಿಟಿಯಿಂದ ಹೊರ ಬಂದ ನಂತರವೂ ಇವರು ಕ್ಲೋಸ್​ ಆಗಿಯೇ ಇದ್ದರು. ಈ ಜೋಡಿ ಮತ್ತೆ ಬಿಗ್​ ಬಾಸ್​ 15ರಲ್ಲಿ ಒಂದಾಗಿತ್ತು. ಬಂದ ದಿನವೇ ಕಿಸ್​ ಮಾಡಿಕೊಂಡಿದ್ದರು. ಆದರೆ, ಈಗ ಇಬ್ಬರೂ ಅರ್ಧದಲ್ಲೇ ಹೊರ ಬರುವಂತಾಗಿದೆ.

ವೈದ್ಯಕೀಯ ಕಾರಣಗಳನ್ನು ನೀಡಿ ರಾಕೇಶ್​ ಅವರು ಅರ್ಧದಲ್ಲೇ ಮನೆಯಿಂದ ಹೊರ ಬಂದಿದ್ದರು.  ಈಗ ಕೆಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಶಮಿತಾ ಶೆಟ್ಟಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಅನಾರೋಗ್ಯ ಕಾಡಿದೆಯಂತೆ. ಟಾಸ್ಕ್​ ವೇಳೆ ಅವರಿಗೆ ತೊಂದರೆ ಉಂಟಾಗಿದೆ. ಈ ಕಾರಣಕ್ಕೆ ಅವರು ಹೊರಹೋಗಿದ್ದಾರೆ. ಮೂಲಗಳ ಪ್ರಕಾರ ಮುಂದಿನವಾರ ಅವರು ಕಮ್​​ಬ್ಯಾಕ್​ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಕೇಶ್​ ಕಿಡ್ನಿಯಲ್ಲಿ ಕಲ್ಲಿದೆ. ಈ ಕಾರಣಕ್ಕೆ ಅವರಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ಅವರು ಮತ್ತೆ ಬಿಗ್​ ಬಾಸ್​ ಶೋಗೆ ಮರಳುತ್ತಾರೋ ಅಥವಾ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೋ ಎನ್ನುವುದು ತಿಳಿದಿಲ್ಲ. ಒಂದೊಮ್ಮೆ ಅವರು ಆಪರೇಷನ್​ಗೆ ಒಳಗಾದರೆ ಅವರು ಮತ್ತೆ ದೊಡ್ಮನೆ ಸೇರುವುದು ಅನುಮಾನ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತು ರಾಕೇಶ್​-ಶಮಿತಾ ರೊಮ್ಯಾನ್ಸ್​; ಮೊದಲ ದಿನವೇ ಕಿಸ್ಸಿಂಗ್​

TV9 Kannada


Leave a Reply

Your email address will not be published. Required fields are marked *