ಬಿಗ್​ ಬಿ ಜೊತೆಗಿನ ಫೋಟೋ ಶೇರ್​ ಮಾಡಿದ ಬುಟ್ಟಬೊಮ್ಮಾ ಹೇಳಿದ್ದೇನು?

ಒಂದಿಲ್ಲೊಂದು ಕುತೂಹಲಕಾರಿ ವಿಚಾರಗಳೊಂದಿಗೆ ಸದಾ ಸುದ್ದಿಯಲ್ಲಿರುವ ಬಳುಕೊ ಬಳ್ಳಿ ಅಂದ್ರೆ ಅದು ಪೂಜಾ ಹೆಗ್ಡೆ. ನೆನ್ನೆ ತಾನೆ ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಫೊಸ್​ ಕೊಟ್ಟಿದ್ದ ಪೂಜಾ ಈಗ ಮತ್ತೊಂದು ಪೋಟೋವನ್ನ ಅಪ್​ಲೋಡ್​ ಮಾಡಿ ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದಾರೆ.

 

‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಯಶಸ್ಸಿನ ನಂತರ, ಪೂಜಾ ಹೆಗ್ಡೆ ಬಹು ನಿರೀಕ್ಷಿತ ”ರಾಧೆ ಶ್ಯಾಮ್” ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ಇನ್​ಸ್ಟಾಗ್ರಾಂನಲ್ಲಿ ಅಮಿತಾಬ್ ಬಚ್ಚನ್​ ಜೊತೆ ಇರುವ ಫೋಟೋವನ್ನು ಹಾಕಿಕೊಂಡಿದ್ದಾರೆ. ​ ಅಮಿತಾಬ್​ ಒಬ್ಬ ದಂತಕಥೆ ಅವರೊಂದಿಗೆ ಆ್ಯಕ್ಟಿಂಗ್​ ಮಾಡುವುದು ಒಂದು ಕನಸು, ನಾನು ಆ ಕನಸನ್ನು ನನಸು ಮಾಡಿಕೊಂಡಿದ್ದೇನೆ ಎಂದು ಈ ಹೇಳಿದ್ದಾರೆ.

ಇದನ್ನೂ ಓದಿ:‘ಸಿನಿಮಾ ಮಾಡೋಕೆ ಭಾಷೆ ಅಗತ್ಯವಿಲ್ಲ’ ಎಂದ ಸಮಂತಾ- ಬಾಲಿವುಡ್​​ಗೆ ಹಾರೋ ಸುಳಿವು ಕೊಟ್ರಾ?

ಸದ್ಯ ಪೂಜಾ ದಳಪತಿ ವಿಜಯ್ ಅವರ ”ಬೀಸ್ಟ್”, ಸಲ್ಮಾನ್ ಖಾನ್ ಅಭಿನಯದ ”ಭಾಯಿಜಾನ್” ಮತ್ತು ರಣವೀರ್ ಸಿಂಗ್ ಜೊತೆ ”ಸರ್ಕಸ್” ಸಿನಿಮಾಗಳಲ್ಲಿ ಪೂಲ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ಮಾಲ್ಡೀವ್ಸ್​ ಟ್ರಿಪ್​ನಲ್ಲಿ ಜಾಲಿ ಮೂಡಿಗೆ ಜಾರಿದ ‘ಬುಟ್ಟಬೊಮ್ಮಾ‘ ಪೋರಿ

News First Live Kannada

Leave a comment

Your email address will not be published. Required fields are marked *