ನವದೆಹಲಿ: ದೇಶ ಸದ್ಯ ದೊಡ್ಡಮಟ್ಟದಲ್ಲಿ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳು ತಮ್ಮೆಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಈ ಮಧ್ಯೆ ಜರ್ಮನಿ ಆಕ್ಸಿಜನ್ ವಿಚಾರದಲ್ಲಿ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ಕಷ್ಟಕಾಲದಲ್ಲಿ ಭಾರತದ ಸಹಾಯಕ್ಕೆ ಜರ್ಮನಿ ಬಂದಿದೆ.

ಜರ್ಮನಿ ಪ್ರತಿದಿನ 20 ಲಕ್ಷ ಲೀಟರ್ ಆಕ್ಸಿಜನ್ ಉತ್ಪಾದಿಸುವ ಆಕ್ಸಿಜನ್ ಉತ್ಪಾದನಾ ಪ್ಲಾಂಟ್​ನ್ನು ಭಾರತಕ್ಕೆ ನೀಡುತ್ತಿದೆ. ನಿನ್ನೆಯಷ್ಟೇ ಒಂದು ಭಾಗ ದೇಶಕ್ಕೆ ಬಂದಿಳಿದಿದ್ದು, ಇಂದು ಇನ್ನೊಂದು ಭಾಗ ಶೀಘ್ರವೇ ಬಂದಿಳಿಯಲಿದೆ.

ಈ ಬೃಹತ್ ಆಕ್ಸಿಜನ್ ಪ್ಲಾಂಟ್​ನ್ನು ಜರ್ಮನ್ ಏರ್ಫೋರ್ಸ್​ನ ಎ-400ಎಂ ಹೆಸರಿನ ವಿಮಾನ ಹೊತ್ತು ತಂದಿದೆ. ಇಂಥ ಬೃಹತ್ ಸಹಾಯ ಮಾಡುತ್ತಿರುವ ಜರ್ಮನಿಗೆ ಭಾರತ ಸರ್ಕಾರ ಧನ್ಯವಾದ ತಿಳಿಸಿದೆ.

The post ಬಿಗ್​ ರಿಲೀಫ್: ದಿನವೊಂದಕ್ಕೆ 20 ಲಕ್ಷ ಲೀಟರ್​ ಆಕ್ಸಿಜನ್ ತಯಾರಿಸುವ ಪ್ಲಾಂಟ್ ಕೊಟ್ಟ ಜರ್ಮನಿ appeared first on News First Kannada.

Source: newsfirstlive.com

Source link