ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಿರುವ ಅನ್‍ವಿಸಿಬಲ್ ಟಾಸ್ಕ್ ಅನ್ನು ಸ್ಪರ್ಧಿಗಳು ಸಖತ್ ಆಗಿಯೇ ಆಡುತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ಮಾತ್ರ ಕಕ್ಕಾಬಿಕ್ಕಿಯಾಗಿದ್ದಾರೆ. ಯಾವುದು ನಿಜ? ಯಾವುದು ಸುಳ್ಳು ಎಂದು ನಂಬಲಾಗದ ಸ್ಥಿತಿಯಲ್ಲಿ ಸಂಬರಗಿ ಕಕ್ಕಾಬಿಕ್ಕಿಯಾಗಿದ್ದಾರೆ.

ವಾರದ ಕಥೆಯಲ್ಲಿ ಸುದೀಪ್ ಪ್ರಶಾಂತ್ ನೀವು ಎಲಿಮಿನೇಷನ್ ಆಗಿದ್ದೀರಾ ಮನೆಯ ಮುಖ್ಯ ದ್ವಾರದ ಬಳಿ ಬನ್ನಿ ಎಂದು ಸೂಚಿಸಿದ್ದರು. ಆದರೆ ಇದಾದ ಕೆಲವು ಸಮಯದ ಬಳಿಕ ಪ್ರಶಾಂತ್, ನೀವು ಸೇವ್ ಆಗಿದ್ದೀರಾ ಎಂದು ಬಿಗ್‍ಬಾಸ್ ಒಂದು ಲೆಟರ್ ಕಳುಹಿಸಿದ್ದಾರೆ. ಆದರೆ ಇತ್ತ ಸ್ಪರ್ಧಿಗಳಿಗೆ ಮನೆಯೊಳಗೆ ಸಂಬರಗಿ ಬಂದಾಗ ನೀವು ಕಂಡು ಕಾಣದಂತೆ ವರ್ತಿಸಬೇಕು ಎಂದು ಸೂಚನೆ ನೀಡಿದ್ದರು.

ಪ್ರಶಾಂತ್ ಅವರಿಗೆ ಸೇಫ್ ಎಂದು ಕಳುಹಿಸಿರುವ ಲೆಟರ್ ನೋಡಿ ನಂಬಲು ಅಸಾಧ್ಯವಾಗಿತ್ತು. ಹಲವು ಬಾರಿ ಲೆಟರ್ ತೆಗೆದು ಓದಿದ್ದಾರೆ. ಮನೆಮಂದಿಗೆ ನಾನು ಮತ್ತೇ ವಾಪಸ್ ಬಂದಿದ್ದೇನೆ ಎಂದು ಹೇಳುತ್ತಾ ನಗುಮುಖದಿಂದ ಹೇಳಿದಾಗ ಸ್ಪರ್ಧಿಗಳು ಮಾತ್ರ ಏನೂ ಪ್ರತಿಕ್ರಿಯೆ ನೀಡದೆ ತಮ್ಮ ಆಟವನ್ನು ಆಡುತ್ತಾ ಬಿಗ್‍ಬಾಸ್ ನೀಡಿರುವ ಸೂಚನೆಯನ್ನು ಪಾಲಿಸುತ್ತಿದ್ದರು.

ಪ್ರಶಾಂತ್ ಅವರು ದಿವ್ಯಾ ಉರುಡುಗ, ಅರವಿಂದ್, ಚಕ್ರವರ್ತಿ, ವೈಷ್ಣವಿ ಹೀಗೆ ಹಲವರನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಸ್ಪರ್ಧಿಗಳು ಪ್ರಶಾಂತ್ ನಮಗೆ ಕಾಣುತ್ತಿಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ. ಸ್ಪಧಿಗಳ ಈ ವರ್ತನೆಯಿಂದ ಪ್ರಶಾಂತ್‍ಗೆ ಕೊಂಚ ಬೇಸರವಾಗಿದೆ. ಕಣ್ಣೀರು ಕೂಡಾ ಹಾಕಿದ್ದಾರೆ. ಮನೆ ಮಂದಿ ಒಟ್ಟಿಗೆ ಕುಳಿತು ಮಾತನಾಡುತ್ತಾರೆ, ಬಿಗ್‍ಬಾಸ್ ವೇಕಪ್ ಸಾಂಗ್‍ಗೆ ಒಟ್ಟಿಗೆ ಡಾನ್ಸ್ ಮಾಡಿದ್ದಾರೆ. ಆದರೆ ಪ್ರಶಾಂತ್ ಅವರಿಗೆ ಒಂಟಿತನ ಕಾಡುತ್ತಿದೆ. ಮನೆ ಮಂದಿಗೂ ಈ ವಿಚಾರವಾಗಿ ಬೇಸರವಾಗಿದೆ. ನಮಗೂ ಅವರನ್ನು ಮಾತನಾಡಿಸದೇ ಇರಲು ಆಗುತ್ತಿಲ್ಲ ಎಂದು ಮಾತನಾಡುಕೊಳ್ಳುತ್ತಿದ್ದಾರೆ. ಪ್ರಶಾಂತ್ ಸ್ಪರ್ಧಿಗಳ ಜೊತೆಗೆ ಮಾತನಾಡಲು ಕೆಲವು ಕೀಟ್ಲೆಗಳನ್ನು ಮಾಡುತ್ತಿದ್ದಾರೆ. ಆದರೆ ಸಖತ್ ಮಜವಾಗಿರುವ ಈ ಆಟದಲ್ಲಿ ಪ್ರಶಾಂತ್ ಅವರು ಪರದಾಡುವಂತಾಗಿದೆ.

The post ಬಿಗ್‍ಬಾಸ್‍ಗೆ ಆಟ – ಪ್ರಶಾಂತ್ ಸಂಬರಗಿಗೆ ಪರದಾಟ appeared first on Public TV.

Source: publictv.in

Source link