ಬಿಗ್‍ಬಾಸ್ ಮನೆಯಲ್ಲಿರುವ ಸ್ಪರ್ಧಿ ಶಮಂತ್‍ಗೆ ಹಲವು ದಿನಗಳಿಂದ ಒಂದು ಬೇಡಿಕೆಯನ್ನು ಬಿಗ್‍ಬಾಸ್ ಬಳಿ ಇಡುತ್ತಿದ್ದರು. ಬಾ.. ಗುರು ಸಾಂಗ್ ಅನ್ನು ವೇಕ್ ಅಪ್ ಸಾಂಗ್ ಪ್ಲೇ ಮಾಡಿ ಎಂದು ಬಿಗ್‍ಬಾಸ್ ಬಳಿ ಮನವಿ ಮಾಡುತ್ತಿದ್ದರು. ಆದರೆ ಇಂದು ಸಾಂಗ್ ಪ್ಲೇ ಮಾಡಿರುವ ಹಿಂದಿನ ರಹಸ್ಯ ಸ್ಪರ್ಧಿಗಳಿಗೆ ತುಂಬಾ ಬೇಸರವನ್ನುಂಟು ಮಾಡಲಿದೆ.

71ನೇ ದಿನಕ್ಕೆ ಬಿಗ್‍ಬಾಸ್ ಶಮಂತ್ ಬೇಡಿಕೆಯನ್ನು ಈಡೇರಿಸಿದ್ದಾರೆ. ಸಾಂಗ್ ಹಾಕುತ್ತಿದ್ದಂತೆ ಶಮಂತ್‍ಗೆ ತುಂಬಾ ಆಶ್ಚರ್ಯವಾಗಿದೆ. ನನ್ನದೇ ಹಾಡಾ ಎಂದು ಒಮ್ಮೆ ಗೊತ್ತಾಗದೆ ನೋಡಿದ್ದಾರೆ. ಬಾ ಗುರು..ಸಾಂಗ್ ಪ್ಲೇ ಆಗುತ್ತಿದ್ದಂತೆ ಶಮಂತ್ ಎದ್ದು ಡಾನ್ಸ್ ಮಾಡಲು ಶುರು ಮಾಡಿದ್ದಾರೆ. ಸಾಂಗ್ ಪ್ಲೇ ಆಗಿರುವುದಕ್ಕೆ ಶಮಂತ್ ಸಂತೋಷ ಇಮ್ಮುಡಿಯಾಗಿದೆ. ಬಾ.. ಗುರು.. ಬಾ.. ಬಾರು ಎನ್ನುವುದಕ್ಕೆ ಸ್ಪರ್ಧಿಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ತುಂಬಾ ಚೆನ್ನಾಗಿದೆ ಎಂದು ಮನೆಮಂದಿ ಶಮಂತ್‍ನನ್ನು ಹೊಗಳಿದ್ದಾರೆ. ನಾನು ಸಾಂಗ್ ಬರುವುದಿಲ್ಲ ಎಂದು ಅಂದುಕೊಂಡು ಮಲಗಿದ್ದೆ. ಆದರೆ ಇಂದು ಪ್ಲೇ ಮಾಡಿರುವುದು ತುಂಬಾ ಸಂತೋಷವಾಗಿದೆ. ಹೇಳಲು ಪದಗಳೆ ಬರುತ್ತಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಒಮ್ಮೆ ನನ್ನ ಸಾಂಗ್ ಪ್ಲೇ ಆಗಬೇಕು ಎನ್ನುವ ಆಸೆ ಇತ್ತು ಕಣ್ಮಣಿ ಈಡೇರಿಸಿದ್ದೀಯಾ ತುಂಬಾ ಸಂತೋಷವಾಗಿದೆ ಎಂದು ಶಮಂತ್ ಕ್ಯಾಮೆರಾ ಮುಂದೆ ನಿಂತುಕೊಂಡು ಹೇಳಿದ್ದಾರೆ.

ಕಣ್ಮಣಿ 5 ದಿನಗಳಲ್ಲಿ ಒಂದೊಂದು ಹಾಡು ನೀವು ಕ್ರೀಯೇಟ್ ಮಾಡಿ ಹಾಡಿದರೆ ಶಮಂತ್ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಇದೀಗ ಶಮಂತ್ ಬೇಡಿಕೆ ಈಡೇರಿಸಿದೆ ಎನ್ನುವ ಸಮತೋಷವಿದೆ. ಆದರೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಇಂದು ಬಿಗ್‍ಬಾಸ್ ಮನೆಯಲ್ಲಿ ನಡೆಯಲಿರುವ ಮಹತ್ತರವಾದ ಬದಲಾವಣೆಯ ಕುರಿತಾಗಿ ತಿಳಿದರೆ ಸಖತ್ ಬೇಸರವಾಗುವುದು ಖಂಡಿತಾ ಹೌದು.

The post ಬಿಗ್‍ಬಾಸ್‍ ಮನೆಯಲ್ಲಿ ಶಮಂತ್ ಬೇಡಿಕೆ ಇಡೇರಿಸಿದ ಕಣ್ಮಣಿ appeared first on Public TV.

Source: publictv.in

Source link