ಬಿಗ್‍ಬಾಸ್ ಮನೆಯಲ್ಲಿ ಶುಭಾಗೆ ಬಿಗ್‍ಬಾಸ್ ನೀವು ಬೈತೀರಾ ಎಂದು ಶುಭಾ ಕಂಪ್ಲೇಂಟ್ ಮಾಡಿದ್ದಾರೆ. ಎಲ್ಲರ ಬಳಿ ಚೆನ್ನಾಗಿ ಮಾತನಾಡುತ್ತೀರಾ ಆದರೆ ನನ್ನ ಬಳಿ ಮಾತ್ರ ಮಾತನಾಡುವಾಗ ಕಚ್ಚಲು ಬರುತ್ತೀರಾ ಎಂದು ಹೇಳಿದ್ದಾರೆ.

ಬೇರೆಯವರಿಗೆ ಹೇಳುವಾಗ ನಿನ್ನ ಮೈಕ್ ಪರಿಶೀಲಿಸಿ, ಬ್ಯಾಟರಿ ಬದಲಾಯಿಸಿ ಎಂದು ನಿಧಾನವಾಗಿ ಸಾಫ್ಟ್ ಆಗಿ ಹೇಳುತ್ತೀರಾ. ಆದರೆ ನನ್ನ ಬಳಿ ಮಾತ್ರ ಕಚ್ಚುವ ಹಾಗೆ ಮತನಾಡುತ್ತೀರಾ. ಕಚ್ಚಲೇ ಬರುತ್ತೀರಾ ನನಗೆ ಅರ್ಥವೇ ಆಗುದಿಲ್ಲ. ನನಗೆ ಬೈತೀರಾ ಎಂದು ಶುಭಾ ಬಿಗ್‍ಬಾಸ್ ಕುರಿತಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಾನು ಏನು ಮಾಡಿದ್ದೇನೆ. ಬೇರೆಯವರಿಗೆ ಆದರೆ ಬೈಯ್ಯುವಿದಿಲ್ಲ ನನಗೆ ಮಾತ್ರ ಬೈತೀರಾ. ಕಚ್ಚುವುದ್ಯಾಕೆ? ನಾನು ಏನು ಮಾಡಿದ್ದೇನೆ? ಎಲ್ಲರ ಬಳಿ ಚೆನ್ನಾಗಿ ಮಾತನಾಡುತ್ತೀರಾ. ಅದೇ ನಾನು ಎಂದು ಬಂದಾಗ ಮಾತ್ರ ಎಷ್ಟು ಬೈತೀರಾ? ಎಂದು ಕಿಚನ್‍ನಲ್ಲಿ ಶಮಂತ್, ಚಕ್ರವರ್ತಿ ಬಳಿ ತಮಾಷೆಯಾಗಿ ಹೇಳಿದ್ದಾರೆ. ಶುಭಾ ಮುದ್ದ ಮುದ್ದಾಗಿ ಆ್ಯಕ್ಟ್ ಮಾಡುತ್ತಾ ಹೇಳಿರುವುದು ಸಖತ್ ಮಜವಾಗಿತ್ತು. ಶುಭಾ ಬಿಗ್‍ಬಾಸ್‍ಗೆ ಅವಾಜ್ ಹಾಕುತ್ತಾ ಮಾತನಾಡುತ್ತೀರುವುದನ್ನು ಕಂಡ ಸ್ಪರ್ಧಿಗಳು ಸಖತ್ ನಕ್ಕಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಹಲವು ಬಾರಿ ಶುಭಾ ಬಿಗ್‍ಬಾಸ್‍ಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಬಳಿ ಹಠವನ್ನು ಮಾಡಿದ್ದಾರೆ. ಬಿಗ್‍ಬಾಸ್ ಮನೆಯ ಕೆಲವು ರೂಲ್ಸ್ ಗಳನ್ನು ಬ್ರೇಕ್ ಮಾಡಿದ್ದಾರೆ. ಆಗ ಬಿಗ್‍ಬಾಸ್‍ಗೆ ಬನ್ನಿ ನೀವೆ, ನನಗೆ ಆಗಲ್ಲ ಎಂದು ಹೇಳುತ್ತಾ ಬಿಗ್‍ಬಾಸ್‍ಗೆ ಅವಾಜ್ ಹಾಕಿದ್ದರು. ಇದೀಗ ಬಿಗ್‍ಬಾಸ್ ಕುರಿತು ಇರುವ ಬೇಸರವನ್ನು ಹೊರಹಾಕಿದ್ದಾರೆ. ಬಿಗ್‍ಬಾಸ್ ತೆಗೆದುಕೊಳ್ಳಲಿರುವ ಇನ್ನೊಂದು ನಿರ್ಧಾರದ ಕುರಿತಾಗಿ ಶುಭಾಗೆ ತಿಳಿದರೆ ಅವರ ಉತ್ತರ ಏನಿರಬಹುದು ಎನ್ನುವುದು ಈಗಿರುವ ಕುತುಹೂಲವಾಗಿದೆ.

The post ಬಿಗ್‍ಬಾಸ್ ಈ ನಿರ್ಧಾರ ಶುಭಾಗೆ ಇಷ್ಟವಾಗಿಲ್ಲವಂತೆ appeared first on Public TV.

Source: publictv.in

Source link