ಬಿಗ್‍ಬಾಸ್ ಸ್ಪರ್ಧಿಗಳಲ್ಲಿ ಕೆಲವರು ಇಂದು ಸೋಶಿಯಲ್ ಮೀಡಿಯಾಲ್ಲಿ ಲೈವ್ ಬಂದಿದ್ದರು. ಆಗ ಹೀಗೆ ಮಾತನಾಡುತ್ತಾ ಬಿಗ್‍ಬಾಸ್ ಪ್ರಾರಂಭವಾಗುವ ಕುರಿತಾಗಿ ಕೆಲವು ಸುಳಿವುಗಳನ್ನು ಕೊಟ್ಟಿದ್ದಾರೆ. ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತೇ ಎಂಬ ಸುದ್ದಿಯನ್ನು ಕೇಳಿ ವೀಕ್ಷಕರ್ ಸಖತ್ ಖುಷಿಯಾಗಿದ್ದಾರೆ.

ಬಿಗ್‍ಬಾಸ್ ಸ್ಪರ್ಧಿಗಳಲ್ಲಿ ಶುಭಾ ಪೂಂಜಾ, ವೈಷ್ಣವಿ, ಅರವಿಂದ್ ಇಂದು ಖಾಸಗಿವಾಹಿನಿಯ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದಿದ್ದರು. ಆಗ ಪ್ರೇಕ್ಷಕರು ಕೇಳಿರುವ ಕೆಲವು ಪ್ರಶ್ನೆಗಳಿವೆ ತುಂಬಾ ಪ್ರೀತಿಯಿಂದ ಸುಂದರವಾಗಿ ಉತ್ತರಿಸಿದ್ದಾರೆ.

ಬಿಗ್‍ಬಸ್ ಮನೆಯಲ್ಲಿ ನಿಮ್ಮ ಆಟವನ್ನು ನೋಡಿ ಸಂತೋಷವಾಯಿತ್ತು. ಬಿಗ್‍ಬಾಸ್ ಮನೆಯಲ್ಲಿ ನೀವು ಏನು ಮಾಡಬಾರದಿತ್ತು? ಯಾರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರಾ? ಯಾರು ನಿಮ್ಮ ಪ್ರೀತಿ ಪಾತ್ರರು ಬಿಗ್‍ಬಾಸ್ ಮನೆಯಲ್ಲಿ.. ಹೀಗೆ ಕೆಲವು ಪ್ರಶ್ನೆಗಳು ಬಂದಿದೆ. ಬಿಗ್‍ಬಾಸ್ ಮತ್ತೇ ಪ್ರಾರಂಭವಾಗುತ್ತಾ? ಎಂದು ಹಲವವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ವೈಷ್ಣವಿ ಸರಿಯಾದ ನ್ಯಾಯವನ್ನು ಈ ಜರ್ನಿಗೆ ಒದಗಿಸುತ್ತಾರೆ ಬಿಗ್‍ಬಾಸ್ ಎನ್ನುವ ನಂಬಿಕೆ ನಮಗೆ ಇದೆ ಎಂದು ವೈಷ್ಣವಿ ಹೇಳಿದ್ದಾರೆ.

ಇದೇ ಪ್ರಶ್ನೆಗೆ ಉತ್ತರಿಸಿದ ಶುಭಾ ಬಿಗ್‍ಬಾಸ್ ಮತ್ತೇ ಶುರುವಾಗುತ್ತೆದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಬಿಗ್‍ಬಾಸ್ ಶೋ ಮುಂದುವರೆಸುವುದಕ್ಕೇ ತುಂಬಾ ಕಷ್ಟ ಪಟ್ಟಿದ್ದಾರೆ. ಎಲ್ಲರ ಆರೋಗ್ಯ ಮುಖ್ಯವಾಗಿದೆ. ಆದರೆ ಖಂಡಿತವಾಗಿಯೂ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಶುಭಾ ಬಿಗ್‍ಬಾಸ್ ಮತ್ತೆ ಆರಂಭವಾಗುವುದರ ಕುರಿತಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ಬಿಗ್‍ಬಾಸ್ ಮನೆಗೆ ಮತ್ತೆ ನೀವು ವಾಪಾಸ್ ಬರಹುದು ಆದರೆ ಈ ಕ್ಷಣ ಹೀಗೆ ಇರುವುದಿಲ್ಲ. ಹಾಗಾಗಿ ಇನ್ನುಳಿದ ಕೆಲವು ಸಮಯವನ್ನು ಬಿಗ್‍ಬಾಸ್ ಮನೆಯಲ್ಲಿ ಬದುಕಿ ಎಂದು ಹೇಳುವ ಮೂಲವಾಗಿ ಕಣ್ಮಣಿ ಕೂಡಾ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಈ ಅಪೂರ್ಣವಾದ ಪ್ರಯಾಣ ನಮಗೆ ಪರಿಪೂರ್ಣತೆಯನ್ನು ತಂದಿದೆ. ಆರೋಗ್ಯ ಮುಖ್ಯವಾಗಿದೆ. ಬಿಗ್‍ಬಾಸ್ ಈ ನಿರ್ಧಾರ ಮೆಚ್ಚುಗೆ ತಂದಿದೆ ಎಂದು ಹೇಳುತ್ತಾ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತಾ? ಕಾದುನೋಡಬೇಕಿದೆ.

The post ಬಿಗ್‍ಬಾಸ್ ಮತ್ತೆ ಮುಂದುವರಿಯುತ್ತಾ? – ಶುಭಾ, ವೈಷ್ಣವಿ ಹೇಳಿದ್ದು ಏನು? appeared first on Public TV.

Source: publictv.in

Source link