ಬೆಂಗಳೂರು: ಬ್ಯಾಗ್ ಪ್ಯಾಕ್ ಮಾಡಿಕೊಂಡು ಬಿಗ್‍ಬಾಸ್ ಸ್ಪರ್ಧಿಗಳು ಬಿಗ್‍ಬಾಸ್ ಮನೆಗೆ ಮತ್ತೆ ಗ್ರ್ಯಾಂಡ್ ಎಂಟ್ರಿಕೊಡಲು ತಯಾರಿದ್ದಾರೆ. ಬಿಗ್‍ಬಾಸ್ ಅರ್ಧಕ್ಕೆ ನಿಂತಿರುವುದರಿಂದ ಕೊಂಚ ಬೇಸರವಾಗಿದ್ದ ವೀಕ್ಷಕರು ಮತ್ತೆ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿ ಸಖತ್ ಖುಷಿಯನ್ನು ತಂದಿದೆ.

ವೈಷ್ಣವಿ ತನ್ನ ಆನೆ, ಇರುವೆ ಡಬ್ಬಾ ಜೋಕ್‍ನೊಂದಿಗೆ ಮತ್ತೆ ಬಿಗ್‍ಬಾಸ್ ಮನೆಯಲ್ಲಿ ತನ್ನದ್ದೇ ಆಗಿರುವ ಶೈಲಿಯಲ್ಲಿ ಮನರಂಜನೆ ಕೊಡಲು ಸಿದ್ದರಾಗಿದ್ದಾರೆ. ದಿವ್ಯಾ ಉರುಡುಗ ಅರ್ಧದಲ್ಲೇ ನಿಂತಿರುವ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ.

ಚಿನ್ನು ಬಾಂಬ್ ನಾನು ಹೋಗಲ್ಲ, ನಿನ್ನ ಬಿಟ್ಟು ಬಿಗ್‍ಬಾಸ್ ಮನೆಗೆ ಹೋಗಲು ಇಷ್ಟ ಇಲ್ಲ ಎಂದು ಕ್ಯೂಟ್ ಆಗಿ ಹೇಳುತ್ತಾ ಶುಭಾ ಪೂಂಜಾ ಬಿಗ್‍ಬಾಸ್ ಮನೆಯಲ್ಲಿ ಮತ್ತೆ ತಮ್ಮದೇ ಆಗಿರುವ ಶೈಲಿಯಲ್ಲಿ ಮನರಂಜನೆ ಕೊಡಲು ಸಿದ್ಧರಾಗಿದ್ದಾರೆ. ಆಗಾಗಲೇ ಲಕ್ ನಿಂದ ಎಲಿಮಿನೇಷನ್‍ನಿಂದ ಬಚಾವ್ ಆಗುತ್ತಾ ಸ್ಪರ್ಧಿಗಳು, ವೀಕ್ಷಕರಿಗೆ ಅಚ್ಚರಿಯನ್ನುಂಟು ಮಾಡಿರುವ ಶಮಂತ್ ಮತ್ತೆ ಅದೇ ಲಕ್‍ನೊಂದಿಗೆ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ.

ಅರ್ಧ ಆಡಿರುವ ಆಟ, ಅರ್ಧಕ್ಕೆ ನಿಂತಿರುವ ಕನಸು ಹೀಗೆ ಅರ್ಧದಲ್ಲಿಯೇ ಹಲವು ಬಾರಿ ಲಕ್ ಕೈ ಕೊಟ್ಟಿರುವ ದಿವ್ಯ ಸುರೇಶ್ ಮತ್ತೆ ತಮ್ಮ ಲಕ್ ಪರೀಕ್ಷೆಗೆ ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದಾರೆ. ಸ್ಪೋರ್ಟಿವ್ ಆಗಿರುತ್ತೇನೆ ಎಂದು ಪಣತೊಟ್ಟು ರಘು ಬಿಗ್‍ಬಾಸ್ ಮನೆಗೆ ಬರಲು ಸಿದ್ದವಾಗಿದ್ದಾರೆ. ಅರವಿಂದ್ ಮತ್ತೆ ರಿಂಗ್ ಕಳೆದುಕೊಳ್ಳುವ ಸೀನ್ ಇಲ್ಲ ಎನ್ನುತ್ತಾ ಮತ್ತೇ ಅದೇ ನಗು ಮುಖದಿಂದ ದೊಡ್ಡಮನೆಗೆ ಎಂಟ್ರಿ ಕೊಡಲು ಎಲ್ಲಾ ತಯಾರಿ ನಡೆಸಿದ್ದಾರೆ.

ಟೀ ಮಾಡುವ ಹೊಸ ಆರ್ಟ್‍ನ ಕಲಿತುಕೊಂಡ ಪ್ರಶಾಂತ್ ಸಂಬರಗಿ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಆಗಾಗ ಮಾತಿನ ಚಮಕ್ ಕೊಡಲು ಗೇಮ್ ಪ್ಲ್ಯಾನ್‍ನೊಂದಿಗೆ ತಯಾರಿ ನಡೆಸಿ ಬಿಗ್‍ಬಾಸ್ ಮನೆಯನ್ನು ಪ್ರವೇಶಕ್ಕೆ ಸಿದ್ದರಾಗಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಕೆಲವು ತಪ್ಪುಗಳನ್ನು ಮಾಡಲ್ಲ ಅಂತ ತಮಗೆ ತಾವೇ ಕೆಲವು ಶರತ್ತುಗಳನ್ನು ಹಾಕಿಕೊಂಡು ತಯಾರಾಗಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಅರ್ಧಕ್ಕೆ ತಮ್ಮ ಪ್ರಯಾಣವನ್ನು ಮೊಟಕು ಗೊಳಿಸಿರುವ ಸ್ಪರ್ಧಿಗಳು ಮತ್ತೆ ತಮ್ಮ ಆಟವನ್ನು ಶುರು ಮಾಡಲು ಬರುತ್ತಿದ್ದಾರೆ. ಕೆಲವರು ತಮ್ಮ ಕನಸನ್ನು ಪೂರ್ತಿ ಮಾಡುವ ಹಂಬಲದಲ್ಲಿದ್ದಾರೆ. ಇನ್ನು ಕೆಲವರು ತಮ್ಮದೇ ಆಗಿರುವ ಲಕ್, ಜೋಕ್, ಗೇಮ್ ಪ್ಲ್ಯಾನ್, ಮುಗ್ಧತೆ, ಮಾತುಗಾರಿಕೆ, ಪ್ರೀತಿ, ಸ್ನೇಹದೊಂದಿಗೆ ಎಂಟ್ರಿಯನ್ನು ಕೊಡುತ್ತಿದ್ದಾರೆ. ಬಿಗ್‍ಬಾಸ್ ವೀಕ್ಷಕರು ಮತ್ತೆ ಅದೇ, ಕಿತ್ತಾಟ, ಜಗಳ ಮುನಿಸುಗಳ ಇರುವ ಬಿಗ್‍ಬಾಸ್‍ನಲ್ಲಿ ಸಕೆಂಡ್ ಇನ್ನಿಂಗ್ಸ್‍ನಲ್ಲಿ ಹೊಸತೇನು ಇರಲಿದೆ ಎಂದು ಎದರುರ ನೋಡುತ್ತಿದ್ದಾರೆ.

ಬಿಗ್‍ಬಾಸ್‍ನಲ್ಲಿ ಏನೆಲ್ಲಾ ಬದಲಾವಣೆಗಳು ಇರಲಿವೆ, ಯಾರೆಲ್ಲಾ ಮನೆಯಲ್ಲಿ ಹೊಸ ಆಟವನ್ನೂ ಶುರು ಮಾಡಲಿದ್ದಾರೆ. ಏನೆಲ್ಲಾ ಹೊಸ ಮಸಾಲೆಯನ್ನು ಬಿಗ್‍ಬಾಸ್ ತೆರೆಮೆಲೆ ತರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

The post ಬಿಗ್‍ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ನೀಡುತ್ತಿರುವ ಸ್ಪರ್ಧಿಗಳ ಹಿಂದಿನ ಉದ್ದೇಶವೇನು ಗೊತ್ತಾ? appeared first on Public TV.

Source: publictv.in

Source link