ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಿದೆ. ಮನೆಮಂದಿ ಬಿಗ್‍ಬಾಸ್ ನಿಡಿದ ಆಟವನ್ನು ಆಡುತ್ತಿದ್ದಾರೆ. ಆದರೆ ಮನೆಯಲ್ಲಿ ಸ್ಪರ್ಧಿಯೋಬ್ಬರು ಚಪ್ಪಲಿಯನ್ನೂ ಕದ್ದಿದ್ದಾರೆ. ಈ ವಿಚಾರವಾಗಿ ಮಂಜು ಮನೆ ಮಂದಿಗೆ ತಿಳಿಸಿದ್ದಾರೆ.

ನಮ್ಮ ಮನೆಗೆ ಚಪ್ಪಲಿ ಕದಿಯುವವರು ಬಂದಿದ್ದಾರೆ. ಬಿಗ್‍ಬಾಸ್ ಮನೆಗೆ ಬಂದರೂ ಕೂಡಾ ಬಿಟ್ಟಿಲ್ಲವಲ್ಲ ಅವರ ಬುದ್ಧಿನಾ? ನನಗೆ ಅರ್ಥವಾಗುತ್ತಿಲ್ಲ ಬಿಗ್‍ಬಾಸ್ ಮನೆಗೆ ಬಂದೂ ಇಂತಹ ಕೆಲಸವನ್ನು ಮಾಡಿದ್ದಾರೆ. ಅಲ್ಲ ಏನು ಹೇಳಬೇಕು ಅವರಿಗೆ ಎಂದು ಮಂಜು ಮನೆ ಮಂದಿ ಎದುರು ಹೇಳಿದ್ದಾರೆ. ಈ ವೇಳೆ ರಘು ಯಾರು ಇರಬಹುದು ಎಂದು ಹೇಳಿದ್ದಾರೆ. ನಾಚಿಕೆಯಾಗಲ್ಲವಾ ಅವರಿಗೆ ಎಂದು ರಘು ಹೇಳಿದ್ದಾರೆ.

ಆಗ ಮಂಜು ಹೌದು, ಆದರೆ ಅವರಿಗೆ ನಾಚಿಕೆ ಆಗುತ್ತಿಲ್ಲ. ನನ್ನ ಪ್ರಕಾರದ ಅವರಿಗೆ ನಾಚಿಕೆ ಆಗಲೇಬೇಕು. ಯಾರು ಈ ಕೆಲಸ ಮಾಡಿರಬಹುದು ಎಂದು ಮಂಜು ಶುಭಾ ಎದುರು ಬಂದು ಹೇಳಿದ್ದಾರೆ. ಆಗ ಶುಭಾ ನನ್ನ ಬಳಿ ಚೆಂದ ಚೆಂದ ಶೂ ಇದೆ. ನಿನ್ನ ಚಪ್ಪಲಿ ಕಪ್ಪೆ ತರ ಇದೆ ಎನ್ನುತ್ತಾ ಎದ್ದು ಹೋಗುತ್ತಾರೆ. ಮಂಜು ಶುಭಾ ಅವರನ್ನು ಹಿಂಬಾಲಿಸಿ ಹೋಗುತ್ತಾರೆ.

ಆಗ ಶುಭಾ ನನ್ನ ಕಬೋರ್ಡ್ ಬಳಿ ಬರಬೇಡ ಎಂದು ಮಂಜುಗೆ ಹೋಗು ಎಂದು ಗದರಿಸಿದ್ದಾರೆ. ಅಲ್ಲೇ ಇರುವ ವೈಷ್ಣವಿಗೆ ಕಳ್ಳತನ ವಿಚಾರ ತಿಳಿಯದೇ ಇದೇನಾ ನಿಮ್ಮ ಚಪ್ಪಲಿ ಎಂದು ಕೊಟ್ಟಿದ್ದಾರೆ. ಆಗ ಶುಭಾ ವೈಷು ನೀನು ಚಪ್ಪಲಿ ಕದ್ಯಾ ಅದು ಇವನ ಚಪ್ಪಲಿ ಎಂದು ವೈಷ್ಣವಿಯ ಮೇಲೆ ಹೇಳಿ ತಮಾಷೆ ಮಾಡಿದ್ದಾರೆ.

ಮಂಜು ಕೂಡಾ ಶುಭಾಳ ಮೇಕಪ್ ಕಿಟ್ ತೆಗೆದುಕೊಂಡು ಹೋಗಿದ್ದಾರೆ. ಆಗ ಶುಭಾ ಮಂಜು ಬಟ್ಟೆಯನ್ನು ಎತ್ತುಕೊಂಡಿದ್ದಾರೆ. ಹೀಗೆ ಮಂಜು, ಶುಭಾ ತಮಾಷೆ ಮಾಡಿದ್ದಾರೆ. ಈ ಸೀನ್ ಮಾತ್ರ ಸಖತ್ ಮಜವಾಗಿತ್ತು. ಶುಭಾ ಮಗುವಿನಂತೆ ಮಾಡುವುದಕ್ಕೂ ಮಂಜು ಅವರಿಗೆ ಕಿಟಲೆ ಮಾಡುವುದಕ್ಕೂ ಸಖತ್ ಮಜವನ್ನೂ ಕೊಟ್ಟಿದೆ.

The post ಬಿಗ್‍ಬಾಸ್ ಮನೆಗೆ ಬಂದ್ರೂ ಚಪ್ಪಲಿ ಕದಿಯುವ ಬುದ್ಧಿ ಬಿಡದ ಸ್ಪರ್ಧಿ..! appeared first on Public TV.

Source: publictv.in

Source link