ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

ಬಿಗ್‍ಬಾಸ್ ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಮನೆಗೆ ತೆರಳಿ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆಡಲು ಬಿಗ್ ಮನೆಗೆ ಬಂದಿದ್ದಾರೆ. ಈ ಬಾರಿ ಮನೆಯೊಳಗೆ ಬರುವಾಗ ಕೆಲವರ ಬಗ್ಗೆ ಹಲವು ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು ಬಂದಿದ್ದಾರೆ. ಅದೇ ರೀತಿ ಇದೀಗ ಒಬ್ಬ ಸ್ಪರ್ಧಿ ದೊಡ್ಮನೆಗೆ ತಮ್ಮ ಬಟ್ಟೆಯನ್ನು ಒಗೆಯಲೆಂದೇ ತಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸ್ಪರ್ಧಿಗಳು ಎಂದಿನಂತೆ ಬರುವಾಗ ತಂದಿದ್ದ ಬಟ್ಟೆಗಳನ್ನು ಮನೆಯಲ್ಲಿ ತೆಗೆಯಲು ಪ್ರಾರಂಭಿಸಿದಾಗ ಹರಟೆಗಿಳಿದ ಮಂಜು, ಶುಭಾ, ದಿವ್ಯಾ ಸುರೇಶ್ ಮತ್ತು ನಿಧಿ ಈ ಕುರಿತು ಒಂದು ಚರ್ಚೆಗಿಳಿದಿದ್ದಾರೆ. ನಿಧಿ ಬಟ್ಟೆಗಳನ್ನು ತಂದು ಎಲ್ಲರಿಗೂ ಇದು ಚೆನ್ನಾಗಿ ಇದ್ಯಾ, ಇದು ಚೆನ್ನಾಗಿ ಇದ್ಯಾ ಎಂದು ತೋರಿಸುತ್ತಾರೆ ಹೊರತು ಹಾಕಿಕೊಳ್ಳುವುದಿಲ್ಲ. ಕೇವಲ ತೋರಿಸಲು ಮಾತ್ರ ತಂದಿದ್ದಾರೆ ಎಂದು ಮಂಜು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶುಭಾ ಕೂಡ ಹೌದು ಎಂದಿದ್ದಾರೆ.

ಮಂಜು ಅವರು ಮನೆಗೆ ಹೋದ ಬಳಿಕ ಅವರ ತಾಯಿ, ನಿಧಿ ಯಾವತ್ತು ಬಟ್ಟೆ ಒಗಿತಾನೆ ಇರುತ್ತಾರೆ ಎಂದಿದ್ದರಂತೆ. ಇದನ್ನು ಹೇಳಿಕೊಂಡ ಮಂಜು, ನಿಧಿ ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಅಂತ ಬಟ್ಟೆ ತಂದಂತಿದೆ. ಬಟ್ಟೆ ವಾಶ್ ಮಾಡುತ್ತಾರೆ ಅದನ್ನು ಯಾವತ್ತು ಧರಿಸಿದ್ದು ನಾನು ನೋಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿರಬೇಕು, ಯಾರನ್ನು ಆಯ್ಕೆ ಮಾಡುತ್ತೀರಿ- DU ಗೆ ಕಿಚ್ಚನ ಪ್ರಶ್ನೆ

ಶುಭಾ ಕೂಡ ನಿಧಿ ಬಟ್ಟೆ ಒಗೆಯೊಕೆ ಬಟ್ಟೆ ತಂದಿದ್ದಾಳೆ ಎಂದಿದ್ದಾರೆ. ಬಳಿಕ ಮಂಜು ಜೊತೆ ನಿಧಿ, ಈ ಬಟ್ಟೆ ಹೇಗಿದೆ ಎಂದು ಒಂದು ಬಟ್ಟೆಯನ್ನು ಹಿಡಿದುಕೊಂಡು ಕೇಳಿದ್ದಾರೆ. ಇದಕ್ಕೆ ಮಂಜು ಚೆನ್ನಾಗಿದೆ ಈ ಬಟ್ಟೆಯನ್ನು ಇನ್ನು ಹೋಗಿ ಒಗಿ ಅದರ ಕಲರ್ ಶೇಡ್ ಆಗುವವರೆಗೆ ಬಿಡಬೇಡ ನಿನ್ನ ಕಲರ್ ಬರುವ ವರೆಗೆ ಒಗಿತಾನೇ ಇರು ಎಂದು ಕಾಲೆಳೆದಿದ್ದಾರೆ.

The post ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ? appeared first on Public TV.

Source: publictv.in

Source link