ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು

ಬಿಗ್‍ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಮೊದಲ ದಿನವೇ ನಾಮಿನೇಷನ್ ನಡೆದಿದೆ. ಈ ಮೂಲಕವಾಗಿ ಬಿಗ್‍ಬಾಸ್ ಆಟ ಮೊದಲ ದಿನವೇ ರೋಚಕತೆಯನ್ನು ಪಡೆದುಕೊಂಡಿದೆ.

ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳು ಸಖತ್ ಗೇಮ್ ಪ್ಲ್ಯಾನ್‍ನೊಂದಿಗೆ ಹೋಗಿದ್ದಾರೆ ಎಂದು ತಿಳಿದಿತ್ತು. ಅದರೆ ನಾಮಿನೇಷನ್‍ಲ್ಲಿ ಸ್ಪರ್ಧಿಗಳು ಕೊಟ್ಟಿರುವ ಕಾರಣ ಮಾತ್ರ ಬಿಗ್‍ಬಾಸ್ ವೀಕ್ಷಕರ ನಿರೀಕ್ಷೆಗೂ ಮಿಗಿಲಾಗಿದೆ ಎನ್ನುವುದು ಮೊದಲ ದಿನದಲ್ಲೇ ತಿಳಿದು ಬಂದಿದೆ. ಇದನ್ನೂ ಓದಿ: ಮೊದಲ ದಿನವೇ DU,DS ಕಿತ್ತಾಟ ಶುರು

ನಾನು ನಿಮ್ಮ ಸ್ನೇಹಿತೆ ಅಲ್ಲ, ನೀವು ನನ್ನ ಗೆಳೆಯನಲ್ಲ. ಹಿಂದೆ ಒಂದು ರೀತಿ, ಮಂದೆ ಇನ್ನೊಂದು ರೀತಿ ಮಾತನಾಡುತ್ತೀಯಾ. ನನ್ನ ನಗೂ ಫೇಕ್ ಎಂದಿದ್ದೀಯಾ ನನಗೆ ಬೇಸರವಾಯಿತ್ತು. ನನಗೂ ಕುಟುಂಬ ಇದೆ ಹೀಗೆ ಮಾತನಾಡುವುದು ಸರಿ ಅಲ್ಲ. ನಾನು ನಿನ್ನ ಒಳ್ಳೆಯ ಸ್ನೇಹಿತ ಅನ್ಕೋಂಡಿದ್ದೆ. ಬಾಯಿಗೆ ಬಂದಾಗೆ ಮಾತನಾಡಬೇಡಿ. ದೃಢ ನಿರ್ಧಾರ ಒಂದೂ ಇಲ್ಲ, ಈ ಮನೆಗೆ ನೀನು ಬೇಡಾ, ಕ್ಯಾಮೆರಾ ಮುಂದೆ ಇದೆ ಎಂದರೆ ಏನಾದರೂ ಮಾತನಾಡುತ್ತೀರಾ ಎಂದೆಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ದೂರಿಕೊಂಡು ನಾಮಿನೇಟ್ ಮಾಡಿದ್ದಾರೆ.

ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್‍ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ. ಹೀಗಿರುವಾಗ ಯಾರು ಯಾರ ಸ್ನೇಹಿತರು, ಯಾರು ಕೇವಲ ಪರಿಚಯಸ್ಥರು ಅನ್ನೋದು ಇನ್ನು ಮುಂದಿನದಿನಗಳಲ್ಲಿ ತಿಳಿಯಲಿದೆ. ಬಿಗ್‍ಬಾಸ್ ಮೊದಲ ದಿನವೇ ತಮ್ಮ ಆಟವನ್ನು ಆರಂಭಿಸಿದ್ದಂತೂ ಪಕ್ಕವಾಗಿದೆ.

ಮೊದಲದಿನವೇ ನಾಮಿನೇಷನ್ ಬೆಂಕಿಯಲ್ಲಿ ಸ್ಪರ್ಧಿಗಳು ಸಿಲುಕಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಗೆ ತಾನು ಗೆಲ್ಲಬೇಕು ಎಂಬ ಹಂಬಲದೊಂದಿಗೆ ಎಂಟ್ರಿಕೊಟ್ಟ ಸ್ಫರ್ಧಿಗಳ ಆಲೋಚನೆ ಕೊಂಚ ವಿಭಿನ್ನವಾಗಿದೆ. ಎಲ್ಲರ ಕುರಿತಾಗಿ ತಿಳಿದುಕೊಮಡಿರುವ ಸ್ಪರ್ಧಿಗಳು ತಮ್ಮ ಮುಖವಾಡಗಳನ್ನು ಕಳಚಿ ಆಟವನ್ನು ಶುರು ಮಾಡಿದ್ದಾರೆ. ಈ ಬಾರಿ ಸಖತ್ ಮನರಂಜೆನೆ ಸಿಗಲಿರುವುದು ಖಂಡಿತಾ ಹೌದು..

The post ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು appeared first on Public TV.

Source: publictv.in

Source link