ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸಂಭ್ರಮ

ಬಿಗ್‍ಬಾಸ್ ಫೈನಲ್‍ಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮನೆಯಲ್ಲಿ ಸ್ಪರ್ಧಿಗಳು ಗೇಮ್ ಪ್ಲ್ಯಾನಿಂಗ್, ಎಲಿಮಿನೇಷನ್ ಇದೆಲ್ಲ ಯೋಚನೆಯನ್ನು ಬಿಟ್ಟು ಸ್ಪರ್ಧಿಗಳು ಮಂಜು ಮದುವೆಯ ಕುರಿತಾಗಿ ಮಾತನಾಡಿದ್ದಾರೆ.

ಶುಭಾ, ಅರವಿಂದ್, ಮಂಜು, ವೈಷ್ಣವಿ, ದಿವ್ಯಾ ಸುರೇಶ್, ಚಕ್ರವರ್ತಿ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಮಂಜು ಬಳಿ ಶುಭಾ, ನಿನ್ನ ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ್ದಾರೆ. ಈ ವೇಳೆ ಮಂಜು ತುಂಬಾ ನಾಚಿಕೆ ಮಾಡಿಕೊಂಡಿದ್ದಾರೆ.

ನನಗೆ ನಿನ್ನ ಮದುವೆ ನೋಡಬೇಕು ಎಂದು ಅನ್ನಿಸುತ್ತಿದೆ. ನಾನು ನಿನ್ನ ಮದುವೆಗೆ ಬಂದಾಗ ನಾನು ನಿಂಗೆ ಗಿಫ್ಟ್ ಕೊಡುವುದಿಲ್ಲ. ಬದಲಾಗಿ ನಿನ್ನ ಮದುವೆಯಾಗುವ ಹುಡುಗಿಗೆ ಕೊಡುತ್ತೇನೆ. ಹಾಗೇ ಒಂದು ನಿಮಿಷ ಮೌನಾಚರಣೆ ಮಾಡಿ, ತಾಯಿ ನಿನ್ನ ಬಾಳು ನಿನಗೆ ಪ್ರೀತಿ, ಇವನ ಕೈಯಲ್ಲಿ ಸಿಕ್ಕಾಕಿಕೊಂಡು ಹೇಗೆ ಬದುಕುತ್ತಿಯಾ ಅಂತ ಹೇಳಿ ಬರುತ್ತೇನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆದರೆ ಮಂಜು ಮಾತ್ರ ಚಕ್ರವರ್ತಿ ಅವರ ಮಾತಿಗೆ ಯಾವುದೇ ರಿಯ್ಯಾಕ್ಷನ್ ನೀಡದೆ ಸುಮ್ಮನೆ ಕುಳಿತಿದ್ದಾರೆ.

ನಾನು ಮಂಜು ಮದುವೆಯಾಗುವ ಹುಡುಗಿಯನ್ನು ನೋಡಬೇಕು. ಅವಳಿಗೆ ಸಾಧ್ಯವಾದಷ್ಟು ಫಿಟ್ಟಿಂಗ್ ಇಟ್ಟು ಬರುತ್ತೇನೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಇದೇ ವೇಳೆ ಶುಭಾ ಇಲ್ಲ, ನಾನು ಮಂಜು ಹುಡುಗಿ ನೋಡಲು ಜೊತೆಯಲ್ಲಿಯೇ ಹೋಗುತ್ತೇನೆ ಎಂದಿದ್ದಾರೆ. ಆಗ ಚಕ್ರವರ್ತಿ ನಾನು ಬಿಗ್‍ಬಾಸ್ ಸೀಸನ್ 8 ಅವರು ಎಲ್ಲರೂ ಸೇರಿ ಮಂಜು ಹುಡುಗಿ ನೋಡಲು ಹೋಗೋಣ ಎಂದಿದ್ದಾರೆ. ಆಗಲೂ ಮಂಜು ಮಾತ್ರ ಚಕ್ರವರ್ತಿ ಅವರ ಮಾತಿ ಸುಮ್ಮನೇ ತಲೆ ಅಲ್ಲಾಡಿಸಿ ಕುಳಿತಿದ್ದಾರೆ.

ನಾನು ಬರುತ್ತೇನೆ ಚಂಪು ಹುಡುಗಿ ನೋಡಲು ಎಂದು ಶುಭಾ ಹೇಳಿದಾಗ, ಮಂಜು ನಾನು ನಿನ್ನ ಹುಡುಗಿ ನೋಡಲು ಕರೆದುಕೊಂಡು ಹೋಗುತ್ತೇನೆ. ಆದರೆ ವಾಪಸ್ ಬರುವಾಗ ನಿನ್ನ ಅಲ್ಲೇ ಬಿಟ್ಟು ಬರುತ್ತೇನೆ. ಯಾಕೆಂದ್ರೆ ನೀನು ಅಲ್ಲೇ ಇದ್ದು ಎಲ್ಲಾ ಹೇಳಿ ಬಾ ಎಂದು ಹೇಳಿ ತಮಾಷೆ ಮಾಡಿದ್ದಾರೆ.

ಆಗ ದಿವ್ಯಾ ಹೊಂದಿಕೊಂಡು ಹೋಗಬೇಕು, ಲಕ್ಷಣವಾಗಿರಬೇಕು ಹುಡುಗಿ ಎಂದು ಹೇಳಿದ್ದಾರೆ. ಆಗ ಶುಭಾ ನಾನು ನಿನ್ನ ಹುಡುಗಿ ಬಳಿ ನಿನ್ನ ಕುರಿತಾಗಿ ಏನೂ ಹೇಳುವುದಿಲ್ಲ, ಯಾರಿಗೆ ಗೊತ್ತು ನಿನ್ನ ನೋಡಿ ಇಷ್ಟ ಆಗದೇ ಇರಬಹುದು. ನಾನು ನಿನ್ನ ಜೊತೆಗೆ ಬಂದರೆ ಹುಡುಗಿ ನಿನ್ನ ಒಪ್ಪಿಕೊಳ್ಳಬಹುದು. ಹೀಗಾಗಿ ನಾನು ಬರುತ್ತೇನೆ ಎಂದು ಶುಭಾ ಹೇಳಿದಾಗ ಮಂಜು ಶಾಕ್ ಆಗಿದ್ದಾರೆ. ಅಲ್ಲೇ ಜೊತೆಯಲ್ಲೇ ಇದ್ದ ವೈಷ್ಣವಿ, ದಿವ್ಯಾ ಜೋರಾಗಿ ನಕ್ಕಿದ್ದಾರೆ.

ಚಕ್ರವರ್ತಿ ಮಂಜು ಹುಡುಗಿಯ ಸುಳಿವು ಕೋಡುತ್ತಾರಾ ಎಂದು ಮತ್ತೆ ಮತ್ತೆ ಕೇಳಿದ್ದಾರೆ. ಯಾವ ತರ ಹುಡುಗಿ ಇರಬೇಕು ಎಂದು ನೀನು ಹೇಳುವುದಿಲ್ಲವಾ ಎಂದು ಕೇಳಿದ್ದಾರೆ. ಆಗ ಮಂಜು ಈಗ ಯಾಕೇ ಬಿಡಪ್ಪ ನೀನು ಮದುವೆ ಬರುತ್ತಿಯಲ್ಲ ಆಗ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಇಲ್ಲ ನಾನು ಹುಡುಗಿ ನೋಡಲೇ ಬರುತ್ತೇನೆ ಎಂದಿದ್ದಾರೆ. ಆಗ ಮಂಜು ಬೇಡ ಬೇಡ.. ನೀನು ಮದುವೆ ಬಾ ಎಂದು ಹೇಳಿ ತಮಾಷೆ ಮಾಡಿದ್ದಾರೆ.

 

ಬಿಗ್‍ಬಾಸ್‍ಮನೆಯಲ್ಲಿ ಇಷ್ಟು ದಿನ, ಜಗಳ, ಮುನಿಸು, ಕಿತ್ತಾಟಗಳನ್ನು ನೋಡಿ ಬೇಸರವಾಗಿರುವ ವೀಕ್ಷಕರಿಗೆ ಮಂಜು ಮದುವೆಯ ಕುರಿತಾಗಿ ಮಾತನಾಡುತ್ತಾ ಮನೆಮಂದಿ ಕೊಂಚ ಸಮಯ ತಮಾಷೆಯಾಗಿ ಕಾಲಕಳೆದಿರುವುದು ಸಖತ್ ಮನರಂಜನೆಯನ್ನು ಕೊಟ್ಟಿದೆ.

The post ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸಂಭ್ರಮ appeared first on Public TV.

Source: publictv.in

Source link