ಬಿಗ್ ಬಾಸ್​ಗೆ ಎಂಟ್ರಿ ಕೊಟ್ರ ನಟ, ಉದ್ಯಮಿ ದರ್ಶ್ ಚಂದ್ರಪ್ಪ; ಲವ್ ಮಾಡೋದೆ ಇಲ್ಲ ಎಂದ ಸ್ಪರ್ಧಿ | Actor entrepreneur darsh chandrappa enters to Bigg Boss House as 6th contestant


ನಟ ದರ್ಶ್ ಚಂದ್ರಪ್ಪ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 6ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ನಟನೆ ಜತೆಗೆ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಆರಂಭ ಆಗಿದೆ. ಶನಿವಾರ ಸಂಜೆ ಬಿಗ್ ಬಾಸ್​ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಬಿಗ್ ಬಾಸ್​ ನಿರೂಪಣೆ ಮಾಡಿದ್ದಾರೆ. ನಟ ದರ್ಶ್ ಚಂದ್ರಪ್ಪ (Darsh Chandrappa) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 6ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ನಟನೆ ಜತೆಗೆ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದಾರೆ. ಅವರು ಬಿಗ್ ಬಾಸ್​ನಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ನಟನೆ ಪ್ಯಾಷನ್, ಜೀವನ ನಡೆಸೋಕೆ ಸ್ಟಾರ್ಟಪ್ ಆರಂಭಿಸಿದ್ದೇನೆ. 365 ದಿನವೂ ಆ್ಯಕ್ಟಿಂಗ್ ಮಾಡೋಕೆ ಅವಕಾಶ ಸಿಕ್ಕರೆ ನಾನು ನಟನೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮನೆಯಲ್ಲಿ ಇದ್ದರೂ ಉದ್ಯಮ ನಡೆಯುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ದರ್ಶ್​.

‘ಮಾಡೆಲಿಂಗ್ ಶುರು ಮಾಡಿದ್ದೆ. ಅದನ್ನು ಗಂಭೀರವಾಗಿ ತೆಗೆದುಕೊಂಡೆ. ನಂತರ ಆ್ಯಕ್ಟಿಂಗ್ ಶುರು ಮಾಡಿದೆ. ಧಾರಾವಾಹಿಯಲ್ಲಿ ನಟೋಸಿಕೆ ಚಾನ್ಸ್​ ಸಿಕ್ತು. ಕ್ಯಾಟ್​ಲಾಗ್ ಕಂಪನಿ ಮಾಡಿದ್ದೇನೆ. ಹಲವು ಆಫರ್ ಸಿಕ್ತು. ಈಗ ನಾನೇ ಸ್ಟಾರ್ಟಪ್​ ಶುರು ಮಾಡಿದ್ದೇನೆ. ಇದಕ್ಕೆ ನಾನು ಅಪ್ಪ-ಅಮ್ಮನಿಗೆ ಥ್ಯಾಂಕ್ಸ್ ಹೇಳಬೇಕು. ಅವರು ನನ್ನ ಮೇಲೆ ನಂಬಿಕೆ ಇಟ್ಟರು. ಎಲ್ಲಿ ಹೋದರು ಯಶಸ್ಸು ಗಳಿಸುತ್ತಾನೆ ಎಂಬ ನಂಬಿಕೆ ಅವರಿಗಿದೆ’ ಎಂದಿದ್ದಾರೆ ದರ್ಶ್.

TV9 Kannada


Leave a Reply

Your email address will not be published.