‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು | Arjun Ramesh Became Bigg Boss OTT New captain Rakesh Adiga Best Performer


‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು

ಅರ್ಜುನ್-ರಾಕೇಶ್​-ಅಕ್ಷತಾ

‘ಬಿಗ್ ಬಾಸ್​ ಒಟಿಟಿ’ಯಲ್ಲಿ (Bigg Boss OTT) ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಎಲ್ಲಾ ಸ್ಪರ್ಧಿಗಳು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ವಾರಾಂತ್ಯಕ್ಕೆ ಎಲಿಮಿನೇಷನ್ ನಡೆಯಲಿದ್ದು, ಮನೆಯಿಂದ ಒಬ್ಬರು ಹೊರ ಹೋಗುವುದು ಖಚಿತ. ಹಲವರ ತಲೆಯಮೇಲೆ ಎಲಿಮಿನೇಷನ್​​ ತೂಗುಗತ್ತಿ ಇದೆ. ಈ ಮಧ್ಯೆ ಬಿಗ್​ ಬಾಸ್​ನಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಅರ್ಜುನ್​ ರಮೇಶ್, ರಾಕೇಶ್ ಅಡಿಗ ಅವರಿಗೆ ಪ್ರಮೋಷನ್ ಸಿಕ್ಕರೆ ಅಕ್ಷತಾಗೆ ಡಿಮೋಷನ್​ ಸಿಕ್ಕಿದೆ. ಇದರಿಂದ ಅಕ್ಷತಾ ಜೈಲು ಸೇರಿದ್ದಾರೆ. ವೀಕ್ಷಕರು ವೋಟಿಗ್ ಮಾಡೋಕೆ ಈ ಬೆಳವಣಿಗೆ ತುಂಬಾನೇ ಮುಖ್ಯವಾಗಲಿದೆ.

‘ಬಿಗ್ ಬಾಸ್​’ ಮನೆಗೆ ಸೇರಿದ ನಂತರದಲ್ಲಿ ಯಾರು ಹೇಗೆ ಪರ್ಫಾರ್ಮೆನ್ಸ್ ನೀಡುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ಡಲ್ ಆದರೂ ಜನರಿಂದ ವೋಟ್ ಬೀಳುವುದಿಲ್ಲ. ಈ ಬಾರಿ ಅಕ್ಷತಾ ಅವರು ಎಲ್ಲರ ಜತೆ ಬೆರೆತಿಲ್ಲ. ಹೀಗಾಗಿ, ಮನೆಯವರಿಂದ ಅವರಿಗೆ ಬೆಂಬಲ ಸಿಕ್ಕಿಲ್ಲ.

ಕ್ಯಾಪ್ಟನ್ ಆದ ಅರ್ಜುನ್

ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಇತ್ತು. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದರು. ಅತಿ ಹೆಚ್ಚು ಅಂಕ ಪಡೆದು ಅರ್ಜುನ್ ಅವರು ಕ್ಯಾಪ್ಟನ್ ಆದರು. ಈ ಮೂಲಕ ‘ಬಿಗ್​ ಬಾಸ್ ಒಟಿಟಿ’ಯ ಮೊದಲ ಸೀಸನ್​ನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಅರ್ಜುನ್ ಭಾಜನರಾದರು. ಅವರಿಗೆ ನಿದ್ರಿಸೋಕೆ ಈಗ ಕ್ಯಾಪ್ಟನ್ ರೂಂ ಸಿಕ್ಕಿದೆ.

ರಾಕೇಶ್ ಅತ್ಯುತ್ತಮ​

ವೀಕೆಂಡ್​ಗೂ ಮುನ್ನ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದವರು ಯಾರು ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲಿ ರಾಕೇಶ್​ಗೆ ಅತಿ ಹೆಚ್ಚು ವೋಟ್​ ಸಿಕ್ಕಿದೆ. ರಾಕೇಶ್ ಅವರು ಎಲ್ಲರ ಜತೆಗೂ ಬೆರೆತಿದ್ದಾರೆ. ತೊಂದರೆ ಆದಾಗ ಮಧ್ಯಸ್ಥಿಕೆ ವಹಿಸಿದ್ದಾರೆ. ತಂಡವನ್ನು ಅದ್ಭುತವಾಗಿ ಮನ್ನಡೆಸಿದ್ದಾರೆ. ಈ ಕಾರಣದಿಂದ ಅವರು ‘ಅತ್ಯುತ್ತಮ’ ಎಂಬ ಪಟ್ಟ ಗಳಿಸಿಕೊಂಡಿದ್ದಾರೆ.

ಅಕ್ಷತಾ ಕಳಪೆ

TV9 Kannada


Leave a Reply

Your email address will not be published. Required fields are marked *