ಲಾವಿದರಲ್ಲಿನ ಟ್ಯಾಲೆಂಟ್ ಹೊರ ಹಾಕಲು ಬಿಗ್ ಬಾಸ್ ಮನೆ ಅತ್ಯತ್ತಮ ವೇದಿಕೆ. ಇದನ್ನು ಅರಿತುಕೊಂಡೇ ಹಲವು ಕಲಾವಿದರು ಬಿಗ್ ಬಾಸ್ ಮನೆಗೆ ಹೋಗಲು ಕಾಯುತ್ತಿರುತ್ತಾರೆ. ಹಾಸ್ಯ, ಸಂಗೀತ, ಸಾಹಿತ್ಯ ಹೀಗೆ ಹಲವು ಕ್ಷೇತ್ರದ ಕಲಾವಿದರು ತಮ್ಮ ಟ್ಯಾಲೆಂಟ್‍ನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಲು ಉತ್ತಮ ವೇದಿಕೆ. ಇದೀಗ ಶಮಂತ್ ಸಹ ಸಾಹಿತ್ಯ ರಚಿಸಿ, ಹಾಡು ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಸಹ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಶಮಂತ್ ಡೀಲ್ ಬೇಸರ ಮೂಡಿಸಿದೆ.

ಬಿಗ್ ಬಾಸ್ ಹಾಗೂ ಶಮಂತ್ ನಡುವೆ 5 ಹಾಡುಗಳನ್ನು ಮಾಡುವ ಡೀಲ್ ಆಗಿತ್ತು. ಅದರಂತೆ ಶಮಂತ್ 5 ಹಾಡುಗಳನ್ನು ಮಾಡಿದ್ದರು. ಬಳಿಕ ಬಾ ಗುರು ವೇಕ್ ಅಪ್ ಆಗೋಣ ಎಂದು ಶಮಂತ್ ಹೇಳಿದ್ದರು. ಆದರೆ ಬಿಗ್ ಬಾಸ್ ಬೆಳಗ್ಗೆ ವೇಕ್ ಅಪ್ ಸಾಂಗ್ ಪ್ಲೇ ಮಾಡಿರಲಿಲ್ಲ. ಹೀಗಾಗಿ ಯಾಕೆ ಪ್ಲೇ ಮಾಡಿಲ್ಲ ಎಂದು ಶಮಂತ್ ಬೇಸರಗೊಂಡಿದ್ದರು. ಹೀಗಾಗಿ ಕಣ್ಮಣಿ ಮೂಲಕ ಬಿಗ್ ಬಾಸ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಹೇಳಿರುವ ಕಣ್ಮಣಿ, ನೀವು 5 ಹಾಡು ಮಾಡಬೇಕೆಂದು ನಮ್ಮ ನಡುವೆ ಡೀಲ್ ಆಗಿತ್ತು. ನೀವು 5 ಹಾಡು ಮಾಡಿ, ಬಾ ಗುರು ವೇಕ್ ಅಪ್ ಆಗಬೇಕು ಎಂದು ಕೇಳಿದ್ದಿರಿ. ನೀವು ಹೇಳಿದಂತೆ ನಾವು ಸಾಂಗ್ ಡೌನ್‍ಲೋಡ್ ಮಾಡಿಕೊಂಡು, ಕೇಳ್ರಪ್ಪೋ ಕೇಳಿಯಿಂದ ಶುರು ಮಾಡಿ ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಆದರೆ ನೀವು ಹೇಳಿದವರ ಬಳಿ ಈ ಹಾಡಿನ ರೈಟ್ಸ್ ಇಲ್ಲ. ಬಿಗ್ ಬಾಸ್‍ನ್ನು ಕೋರ್ಟ್‍ಗೆ ಅಲೆಸಬೇಕೆಂದು ಪ್ರಶಾಂತ್ ಅವರ ಬಳಿ ಸಲಹೆ ಪಡೆದು ಹೀಗೆ ಹೇಳಿದಿರಾ ಎಂದು ಕಿಚಾಯಿಸಿದ್ದಾರೆ.

ಮುಂದುವರಿದು, ಅಷ್ಟು ಸುಲಭವಾಗಿ ಬಿಗ್ ಬಾಸ್‍ನ ಬಕ್ರಾ ಮಾಡಲು ಆಗಲ್ಲ, ಆದರೂ ಕೊಟ್ಟಿರುವ ಕೆಲಸವನ್ನು ಸರಿಯಾಗಿ ಮಾಡಿದ್ದಕ್ಕೆ ಬಿಗ್ ಬಾಸ್ ಏನೋ ಟ್ರೈ ಮಾಡುತ್ತಿದ್ದಾರೆ, ಆಗಬಹುದು ನೋಡೋಣ ಎಂದು ಕಣ್ಮಣಿ ಹೇಳಿದ್ದಾರೆ. ಅಲ್ಲದೆ ಎಲ್ಲ ಹಾಡುಗಳು ಚೆನ್ನಾಗಿದ್ದವು ಎಂದು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

The post ಬಿಗ್ ಬಾಸ್‍ನ್ನು ಕೋರ್ಟಿಗೆ ಅಲೆಸಬೇಕು ಅಂದುಕೊಂಡಿದ್ದೀರಾ- ಕಣ್ಮಣಿ ಪ್ರಶ್ನೆ appeared first on Public TV.

Source: publictv.in

Source link