Bigg Boss OTT kannada: ಕಿರಣ್ ಅವರು ಡ್ಯಾನ್ಸ್ ಜತೆಗೆ ಯೋಗ ಮಾಡುತ್ತಾರೆ. ಅನೇಕರಿಗೆ ಯೋಗ ಹೇಳಿಕೊಡುತ್ತಾರೆ. ಈ ಕಾರಣದಿಂದಲೂ ಅವರು ಅನೇಕರಿಗೆ ಪರಿಚಯ ಇದ್ದಾರೆ. ಅವರು ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ.

ಕಿರಣ್-ಸುದೀಪ್
Bigg Boss OTT Kannada Season 1: ಈ ಬಾರಿ ‘ಬಿಗ್ ಬಾಸ್ ಒಟಿಟಿ’ ಹಲವು ವಿಶೇಷತೆಗಳಿಗೆ ಸಾಕ್ಷಿ ಆಗುತ್ತಿದೆ. ಸಿನಿಮಾ, ಕಿರುತೆರೆ ಜತೆಗೆ ಸೋಶಿಯಲ್ ಮೀಡಿಯಾ ಸ್ಟಾರ್ಗಳನ್ನು ಇಲ್ಲಿಗೆ ಆಹ್ವಾನ ನೀಡಲಾಗಿದೆ. ಆ ಪೈಕಿ ಕಿರಣ್ ಯೋಗೇಶ್ವರ್ ಕೂಡ ಒಬ್ಬರು. ಇವರು ರಾಜಸ್ಥಾನ ಮೂಲದವರು. ಅವರು ‘ಬಿಗ್ ಬಾಸ್ ಒಟಿಟಿ’ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಕನ್ನಡ ಕೇಳಿ ಸುದೀಪ್ ಮೆಚ್ಚಿಕೊಂಡಿದ್ದಾರೆ.
‘ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕೆ ನಾನು ಈಗ ಇಲ್ಲಿಗೆ ಬಂದಿದ್ದೇನೆ. ನನಗೆ ನಂಬಲು ಆಗುತ್ತಿಲ್ಲ. ನನ್ನ ಫ್ಯಾಮಿಲಿ ಇರೋದು ಹಳ್ಳಿಯಲ್ಲಿ. ಸಿಟಿ ಲೈಫ್ ಗೊತ್ತಿರಲಿಲ್ಲ. ನನ್ನ ಫ್ಯಾಮಿಲಿ ಟಿಪಿಕಲ್ ರಾಜಸ್ಥಾನಿ. ಚಿಕ್ಕ ವಯಸ್ಸಲ್ಲೇ ಮದುವೆ ಮಾಡ್ತೀನಿ ಎಂದರು. ಅದಕ್ಕೆ 17ನೇ ವಯಸ್ಸಿಗೆ ಮನೆ ಬಿಟ್ಟು ಬಂದೆ. ಹೋಟೆಲ್ ಕೆಲಸ ಮಾಡಿದೆ’ ಎಂದು ಹೇಳಿದರು ಕಿರಣ್.
‘ನಾನು ಸೋಲೋ ಟ್ರಾವೆಲ್ ಶುರು ಮಾಡಿದೆ. ನಾನು ಡ್ಯಾನ್ಸಿಂಗ್ ಮೂಲಕ ಫೇಮಸ್ ಆಗಿದ್ದೀನಿ. ಸದ್ಯ ಬೆಂಗಳೂರಿನಲ್ಲಿ ಇದ್ದೇನೆ. ಭಾರತವನ್ನು ಸುತ್ತಾಡಿದ್ದೇನೆ. ಆರಂಭದಲ್ಲಿ ನನಗೆ ಕಾನ್ಫಿಡೆನ್ಸ್ ಇರಲಿಲ್ಲ. ಸಕ್ಸಸ್ ಬೆಸ್ಟ್ ರಿವೇಂಜ್ ಅನ್ನೋದು ನನ್ನ ನಂಬಿಕೆ. ತುಂಬಾ ಜನ ನನ್ನನ್ನು ಪಾರ್ಟಿಯಲ್ಲಿ ನೋಡಿದಾರೆ’ ಎಂದರು ಕಿರಣ್.