‘ಬಿಗ್ ಬಾಸ್ ಒಟಿಟಿ’: ಡೇಂಜರ್ ಜೋನ್​ನಲ್ಲಿ 7 ಮಂದಿ; ಸೋನು ಶ್ರೀನಿವಾಸ್ ಗೌಡ ಬಚಾವ್​ | 7 People nominated In Bigg Boss Kannada OTT Sonu Srinivas Gowda Get a life


ಈ ವಾರ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ನಾಮಿನೇಟ್ ಆದರು. ಸೋಮಣ್ಣ ಅವರನ್ನು ಕ್ಯಾಪ್ಟನ್ ಜಶ್ವಂತ್ ಅವರು ನೇರವಾಗಿ ನಾಮಿನೇಟ್ ಮಾಡಿದರು.

‘ಬಿಗ್ ಬಾಸ್​ ಒಟಿಟಿ’ (Bigg Boss OTT) ಮೂರನೇ ವಾರಕ್ಕೆ ಕಾಲಿಟ್ಟಿದೆ. ವಾರದ ಮೊದಲ ದಿನ ಅಂದರೆ ಸೋಮವಾರ (ಆಗಸ್ಟ್ 22) ಎಲಿಮಿನೇಷನ್​ಗೆ ನಾಮಿನೇಷನ್​ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ 7 ಜನರ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಕಳೆದ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಚಾವ್ ಆಗಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ.

ಬಿಗ್ ಬಾಸ್ ಕಡೆಯಿಂದ ಎಲ್ಲರಿಗೂ ಒಂದು ಬಾಕ್ಸ್ ಕಳಿಸಲಾಗಿತ್ತು. ಆ ಬಾಕ್ಸ್​ನಲ್ಲಿ ಎರಡು ವಸ್ತು ಇತ್ತು. ಒಂದರಲ್ಲಿ ಕಣ್ಣಿನ ಚಿತ್ರ ಇತ್ತು, ಮತ್ತೊಂದು ಬಾಕ್ಸ್​ನಲ್ಲಿ ಕನ್ಫೆಷನ್ ರೂಮ್ ಎಂದು ಇತ್ತು. ಕಣ್ಣಿನ ಚಿತ್ರ ಇದ್ದವರು ಎಲ್ಲರ ಎದುರು ಸ್ಪರ್ಧಿಗಳನ್ನು ನಾಮಿನೇಟ್​ಗೆ ಮಾಡಬೇಕು. ಕನ್ಫೆಷನ್ ರೂಮ್ ಎಂದು ಬರೆದುಕೊಂಡಿದ್ದವರು ಕನ್ಫೆಷನ್ ರೂಮ್​ಗೆ ತೆರಳಿ ನಾಮಿನೇಟ್​ ಮಾಡಬೇಕು.

ಈ ವಾರ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ನಾಮಿನೇಟ್ ಆದರು. ಸೋಮಣ್ಣ ಅವರನ್ನು ಕ್ಯಾಪ್ಟನ್ ಜಶ್ವಂತ್ ಅವರು ನೇರವಾಗಿ ನಾಮಿನೇಟ್ ಮಾಡಿದರು. ಎರಡು ಹಂತದಲ್ಲಿ ನಾಮಿನೇಟ್​ ಪ್ರಕ್ರಿಯೆ ನಡೆಯಿತು.

ಮೂರನೇ ಹಂತದಲ್ಲಿ ನಾಮಿನೇಷ್​​​​ನಿಂದ ಒಬ್ಬರನ್ನು ಸೇವ್​ ಮಾಡುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ನಂದಿನಿ ಸೇವ್ ಆದರು. ಈ ಮೂಲಕ ಉದಯ್, ರೂಪೇಶ್, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ವೋಟ್ ಬಿದ್ದಿದ್ದು ಉದಯ್​ಗೆ. ಅವರು ಡಬಲ್​ ಗೇಮ್ ಆಡುತ್ತಾರೆ, ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಬಹುತೇಕರು ಅವರನ್ನು ನಾಮಿನೇಟ್ ಮಾಡಿದರು. ಈಗ ವೀಕ್ಷಕರಿಂದ ಯಾರು ಕಡಿಮೆ ವೋಟ್ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published.