‘ಬಿಗ್ ಬಾಸ್ ಕನ್ನಡ ಸೀಸನ್​ 9’ರ ಪ್ರೋಮೋ ರಿಲೀಸ್; ಅಲ್ಲಿಯೂ ಕಾಫಿ ನಾಡು ಚಂದು ಫ್ಯಾನ್ಸ್ ಹಾವಳಿ  | Bigg Boss Kannada Season 9 to start soon Coffee Nadu Chandu Fans new demand to Colors Kannada


‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿ ಸೀಸನ್​ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಒಟಿಟಿ ಸೀಸನ್ ಶೀಘ್ರವೇ ಪೂರ್ಣಗೊಳ್ಳುತ್ತಿದೆ. ಅದಾದ ಬಳಿಕ ಟಿವಿ ಸೀಸನ್ ಶುರು ಆಗಲಿದೆ. ಒಟಿಟಿಯ ಕೆಲ ಸ್ಪರ್ಧಿಗಳು ದೊಡ್ಮನೆಗೆ ಕಾಲಿಡಲಿದ್ದಾರೆ. ಆ ಬಗ್ಗೆ ಈ ಮೊದಲೇ ಘೋಷಣೆ ಆಗಿದೆ. ಯಾರ್ಯಾರು ಒಟಿಟಿಯಿಂದ ಟಿವಿ ಸೀಸನ್​ಗೆ ಹೋಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕೂ ಮೊದಲು ‘ಬಿಗ್ ಬಾಸ್’ (Bigg Boss) ಟಿವಿ ಸೀಸನ್​ನ ಪ್ರೋಮೋ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಲ್ಲದೆ ಕಲರ್ಸ್ ಕನ್ನಡದ ಎದುರು ಹೊಸ ಬೇಡಿಕೆ ಒಂದನ್ನು ಇಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿ ಸೀಸನ್​ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ. ಅವರು ಯಾರು ಎಂಬುದು ಸದ್ಯದ ಕುತೂಹಲ. ಈಗ ಎಲ್ಲರೂ ಕಾಫಿ ನಾಡು ಚಂದುಗೆ ಅವಕಾಶ ನೀಡಿ ಎಂಬ ಕೋರಿಕೆ ಇಟ್ಟಿದ್ದಾರೆ.

‘ಬಿಗ್ ಬಾಸ್’ಗೆ ಚಂದು ಕಾಲಿಡಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಈಡೇರಿಲ್ಲ. ಚಂದು ಒಟಿಟಿ ಸೀಸನ್​ಗೆ ಬಂದಿಲ್ಲ. ಈ ಕಾರಣಕ್ಕೆ ಅವರು ಸೀಸನ್​ 9ರಲ್ಲಿ ಕಾಣಿಸಿಕೊಳ್ಳಲಿ ಎಂಬುದು ಅನೇಕರ ಕೋರಿಕೆ. ರಿಲೀಸ್ ಆದ ಹೊಸ ಪ್ರೋಮೋಗೆ ಅನೇಕರು ಈ ಬಗ್ಗೆ ಕಮೆಂಟ್ ಹಾಕಿದ್ದಾರೆ. ಈ ಮೂಲಕ ವೈರಲ್ ಯುವಕನ ಪರವಾಗಿ ನಿಂತಿದ್ದಾರೆ.

TV9 Kannada


Leave a Reply

Your email address will not be published.