ಬಿಗ್ ಬಾಸ್ ಮನೆಯಲ್ಲಿ ಬಂತು ಕಿಸ್​ ಶಬ್ದ; ಕೊಟ್ಟಿದ್ದು ಯಾರು, ತೆಗೆದುಕೊಂಡಿದ್ದು ಯಾರು? | Rakesh Adiga Kissed Jayshree Aradhya In Bigg Boss House Kannada


ಸೋನುಗೆ ಜಲಸ್ ಫೀಲ್ ಮಾಡಿಸೋಕೆ ಜಯಶ್ರೀಗೆ ರಾಕೇಶ್​ ಕಿಸ್ ಮಾಡಿದ್ದಾರೆ. ಇದನ್ನು ನೋಡಿ ಸೋನು ಸಾಕಷ್ಟು ಉರಿದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಂತು ಕಿಸ್​ ಶಬ್ದ; ಕೊಟ್ಟಿದ್ದು ಯಾರು, ತೆಗೆದುಕೊಂಡಿದ್ದು ಯಾರು?

ಜಯಶ್ರೀ-ರಾಕೇಶ್

ರಾಕೇಶ್ ಅಡಿಗ (Rakesh Adiga) ಹಾಗೂ ಸೋನು ಶ್ರೀನಿವಾಸ್ ಗೌಡ ‘ಬಿಗ್ ಬಾಸ್’ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ತಮ್ಮ ಮಧ್ಯೆ ಪ್ರೀತಿ ಇಲ್ಲ ಎಂಬುದನ್ನು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಈಗ ಸೋನು ಅವರನ್ನು ರಾಕೇಶ್ ಅವಾಯ್ಡ್ ಮಾಡೋಕೆ ಆರಂಭಿಸಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ರಾಕೇಶ್​ ಅವರನ್ನು ಪ್ರೀತಿಸುತ್ತಿಲ್ಲ ಎಂಬ ವಿಚಾರ ಸೋನುಗೆ (Sonu Srinivas Gowda) ಗೊತ್ತಿದೆ. ಹೀಗಿರುವಾಗಲೇ ‘ನಾನು ಸೋನುನ 100 ಪರ್ಸೆಂಟ್ ಲವ್ ಮಾಡ್ತೀನಿ’ ಎಂಬ ವಿಚಾರವನ್ನು ರಾಕೇಶ್ ಹೇಳಿಕೊಂಡಿದ್ದಾರೆ. ಇದರ ಜತೆ ಬಿಗ್ ಬಾಸ್ ಮನೆಯಲ್ಲಿ ಕಿಸ್ ಶಬ್ದ ಕೇಳಿದೆ! ಸೆಪ್ಟೆಂಬರ್ 15ರ ಎಪಿಸೋಡ್​ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಸೋನು ಅವರನ್ನು ಕಂಡರೆ ರಾಕೇಶ್​ಗೆ ಒಳ್ಳೆಯ ಭಾವನೆ ಇದೆ. ಫ್ರೆಂಡ್ ಆಗಿ ಸೋನು ಅವರನ್ನು ರಾಕೇಶ್ ತುಂಬಾನೇ ಕೇರ್ ಮಾಡುತ್ತಾರೆ. ಆದರೆ, ಸೋನು ಕೆಲವೊಮ್ಮೆ ಮಿತಿ ಮೀರುತ್ತಾರೆ. ರಾಕೇಶ್ ಬೇರೆಯವರ ಜತೆ ಮಾತನಾಡಿದರೆ ಸೋನು ಸಿಟ್ಟು ಮಾಡಿಕೊಳ್ಳುತ್ತಾರೆ. ಅವರು ಜಲಸ್ ಮಾಡಿಕೊಳ್ಳುವುದು ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ರಾಕೇಶ್ ಅವರು ಸೋನು ಜತೆ ಹಾರ್ಷ್ ಆಗಿ ಪ್ರತಿಕ್ರಿಯಿಸುತ್ತಾರೆ.

ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ಈ ವಿಚಾರವನ್ನು ಸೋಮಣ್ಣ ಮಾಚಿಮಾಡ ಬಳಿ ಮಾತನಾಡಿದ್ದಾರೆ ಸೋನು.

‘ರಾಕೇಶ್​ ಹಾಗೂ ನನ್ನ ಮಧ್ಯೆ ಫ್ರೆಂಡ್​ಶಿಪ್​ ಇದೆ. ಪ್ರೀತಿ ಇಲ್ಲ. ಅವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಆದಾರೂ ರಾಕೇಶ್ ಅವರನ್ನು ಕಂಡರೆ ನನಗೆ ಜಲಸ್ ಆಗುತ್ತದೆ. ಯಾಕೆ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಸೋನು. ನಂತರ ಇದೇ ವಿಚಾರದ ಬಗ್ಗೆ ರಾಕೇಶ್ ಜತೆ ಚರ್ಚೆ ಮಾಡಿದರು. ‘ನಾನು ಸೋನು ಅವರನ್ನು ಶೇ.100 ಪ್ರೀತಿ ಮಾಡ್ತೀನಿ. ಮನೆಯ ಎಲ್ಲರನ್ನೂ ನಾನು ಅಷ್ಟೇ ಪ್ರೀತಿ ಮಾಡುತ್ತೇನೆ’ ಎಂದು ರಾಕೇಶ್ ಅಡಿಗ ಸ್ಪಷ್ಟನೆ ನೀಡಿದ್ದಾರೆ.

TV9 Kannada


Leave a Reply

Your email address will not be published.