‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ | Bigg Boss Kannada OTT Kichcha Sudeep Introduce New house to Audience


‘ಬಿಗ್ ಬಾಸ್​’ ಮನೆಗೆ ಸುದೀಪ್ ಹಾಗೂ ವಾಸುಕಿ ಆಗಮಿಸಿದ್ದಾರೆ. ಮನೆಯ ಗಾರ್ಡನ್​ ಏರಿಯಾ ಬಗ್ಗೆ ವಾಸುಕಿ ತಮ್ಮದೇ ವಿವರಣೆ ನೀಡಿದ್ದಾರೆ. ‘ಜಗತ್ತಿನಲ್ಲಿ ಅತಿ ಹೆಚ್ಚು ಯುದ್ಧಗಳು ಬಹುಶಃ ಇಲ್ಲಿಯೇ ನಡೆದಿರಬೇಕು’ ಎಂದು ಹೇಳಿ ನಕ್ಕಿದ್ದಾರೆ ವಾಸುಕಿ.

‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ

ಸುದೀಪ್​-ವಾಸುಕಿ

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಆಗಸ್ಟ್ 6ರಿಂದ ಹೊಸ ಸೀಸನ್ ಆರಂಭ ಆಗಲಿದೆ. ಈ ಬಾರಿ ಸ್ಪರ್ಧಿಗಳಾಗಿ ಯಾರೆಲ್ಲ ಬರಲಿದ್ದಾರೆ ಎಂಬ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇದೆ. ಇದಕ್ಕೆ ಆಗಸ್ಟ್ 6ರ ಸಂಜೆ 7 ಗಂಟೆಗೆ ಉತ್ತರ ಸಿಗಲಿದೆ. ‘ಬಿಗ್ ಬಾಸ್​ ಒಟಿಟಿ’ ಆರಂಭಕ್ಕೂ ಮೊದಲು ದೊಡ್ಮನೆ ಹೇಗಿದೆ ಎಂಬುದನ್ನು ತೋರಿಸಲಾಗಿದೆ. ಸುದೀಪ್ (Sudeep) ಹಾಗೂ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಮನೆ ಹೇಗಿದೆ ಎಂಬ ಝಲಕ್ ತೋರಿಸಲಾಗಿದೆ.

‘ಬಿಗ್ ಬಾಸ್​’ ಮನೆಗೆ ಸುದೀಪ್ ಹಾಗೂ ವಾಸುಕಿ ಆಗಮಿಸಿದ್ದಾರೆ. ಮನೆಯ ಗಾರ್ಡನ್​ ಏರಿಯಾ ಬಗ್ಗೆ ವಾಸುಕಿ ತಮ್ಮದೇ ವಿವರಣೆ ನೀಡಿದ್ದಾರೆ. ‘ಜಗತ್ತಿನಲ್ಲಿ ಅತಿ ಹೆಚ್ಚು ಯುದ್ಧಗಳು ಬಹುಶಃ ಇಲ್ಲಿಯೇ ನಡೆದಿರಬೇಕು’ ಎಂದು ಹೇಳಿ ನಕ್ಕಿದ್ದಾರೆ ವಾಸುಕಿ. ನಂತರ ‘ಬಿಗ್ ಬಾಸ್​​’ ಮನೆಯ ಒಳಗೆ ಇಬ್ಬರೂ ತೆರಳಿದ್ದಾರೆ. ಮೊದಲು ದೇವರ ಮನೆಗೆ ತೆರಳಿ ನಮಿಸಿದ್ದಾರೆ ಸುದೀಪ್ ಹಾಗೂ ವಾಸುಕಿ.

ಈ ಬಾರಿ ದೊಡ್ಮನೆಯಲ್ಲಿ ಒಂದು ಮೂರ್ತಿಯನ್ನು ಇರಿಸಲಾಗಿದೆ. ಆ ಮೂರ್ತಿ ಒಂದು ಕೈಯಲ್ಲಿ ಕಣ್ಣನ್ನು ಮುಚ್ಚಿಕೊಂಡಿದೆ, ಮತ್ತೊಂದು ಕೈ ಕತ್ತಿನ ಮೇಲಿದೆ. ಇದನ್ನು ನೋಡಿದರೆ ಸುದೀಪ್​​ಗೆ ತಮ್ಮನ್ನೇ ನೋಡಿದಂತೆ ಭಾಸವಾಗುತ್ತಿದೆಯಂತೆ. ಅದಕ್ಕೆ ಅವರು ವಿವರಣೆ ನೀಡಿದ್ದಾರೆ. ‘ಇಲ್ಲಿ ನಡೆಯೋದು ನನ್ನ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ, ಏನು ಗೊತ್ತಿಲ್ಲದ ರೀತಿಯಲ್ಲಿ ನಾನು ಇರಬೇಕು. ಇನ್ನು, ಕುತ್ತಿಗೆಯ ಭಾಗದಲ್ಲಿ ಇರುವ ಕೈ ಆನ್​​ಲೈನ್​ಲ್ಲಿ ವೀಕ್ಷಿಸುತ್ತಿರುವ ಜನರು ಹಾಗೂ ಒಳಗಿರುವ ಸ್ಪರ್ಧಿಗಳದ್ದು. ಅವರು ನನ್ನ ಕುತ್ತಿಗೆಗೆ ಕೈ  ಹಾಕಿಕೊಂಡಿರುತ್ತಾರೆ. ಈ ಮೂರ್ತಿಗೆ ಕೂದಲು ಮೀಸೆ ಇದ್ದಿದ್ದರೆ ನನ್ನ ರೀತಿಯೇ ಕಾಣುತ್ತಿತ್ತು. ತುಂಬಾ ಸಿಂಬಾಲಿಕ್ ಆಗಿದೆ’ ಎಂದರು ಸುದೀಪ್.

TV9 Kannada


Leave a Reply

Your email address will not be published. Required fields are marked *