ಬಿಗ್ ಬಾಸ್ ಮನೆಯಿಂದ ನಿಧಿ ಔಟ್

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನ ಎರಡನೇ ವಾರ ಪಂಚರಂಗಿ, ಅಣ್ಣಾಬಾಂಡ್ ಚಿತ್ರದ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ.

ಮೊದಲ ವಾರ ಯಾರನ್ನು ಎಲಿಮಿನೇಟ್ ಮಾಡುವುದಿಲ್ಲ ಎಂದು ಹೇಳಿದ್ದ ಸುದೀಪ್ ಎರಡನೇ ವಾರ ಒಬ್ಬರನ್ನು ಎಲಿಮಿನೇಟ್ ಮಾಡಲಾಗುವುದು ಎಂದು ಮೊದಲೇ ಹೇಳಿದ್ದರು. ಆದರಂತೆ ಈ ಬಾರಿ ನಿಧಿ ಸುಬ್ಬಯ್ಯ ಮನೆಯಿಂದ ಔಟ್ ಆಗಿದ್ದಾರೆ.

ಎರಡನೇ ವಾರ ನಿಧಿ ಸುಬ್ಬಯ್ಯ ಬಹಳ ಸ್ಫೋರ್ಟಿವ್ ಆಗಿ ಟಾಸ್ಕ್ ಗಳನ್ನು ತೆಗೆದುಕೊಂಡಿದ್ದರು. ಟಾಸ್ಕ್ ನಲ್ಲಿ ನಲ್ಲಿ ಅರವಿಂದ್ ಕೆಪಿ ಜೊತೆ ಮನಸ್ತಾಪ ಮಾಡಿದ್ದರೆ ಬಳಿಕ ಶುಭ ಜೊತೆಗೂ ಮಾತಿನ ಜಗಳ ನಡೆದಿತ್ತು. ಅಂತಿಮವಾಗಿ ಶನಿವಾರದ ಎಪಿಸೋಡ್‍ನಲ್ಲಿ ಸುದೀಪ್ ಅರವಿಂದ್ ನಿಧಿ ಮತ್ತು ಶುಭಾ, ನಿಧಿಯವರನ್ನು ರಾಜಿ ಮಾಡಿಸಿದ್ದರು.

ಥರ ಥರ ಈ ಎತ್ತರ ಟಾಸ್ಕ್ ವೇಳೆ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯಪ್ರವೇಶ ಮಾಡಿದ್ದಕ್ಕೆ ಅರವಿಂದ್,”ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ಹೇಳಿದ್ದರು. ಈ ಹೇಳಿಕೆಗೆ ಗರಂ ಆಗಿದ್ದ ನಿಧಿ ಟಾಸ್ಕ್ ಮುಗಿದ ಬಳಿಕ, “ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್‍ನಲ್ಲಿ ಇಲ್ಲಿಗೆ ಬಂದಿರೋದು, ಗೆದ್ದು ತೋರಿಸು ಡಾಕರ್ ರ್ಯಾಲಿನಾ. ಲೂಸರ್ ಗೆಟ್ ಲಾಸ್ಟ್” ಎಂದು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಅರವಿಂದ್ ನಗುತ್ತಾ ಮುಂದಕ್ಕೆ ಸಾಗಿದ್ದರು. ಇದನ್ನೂ ಓದಿ: ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. “ಅರವಿಂದ್ ಅವರು ಉದ್ದೇಶ ಪೂರ್ವಕವಾಗಿ ಹೇಳಿಲ್ಲ. ಆಟದ ಸಂದರ್ಭದಲ್ಲಿ ಹೇಳಿದ್ದಾರೆ. ಬಳಿಕ ತಾನು ಹೇಳಿದ್ದು ತಪ್ಪು ಎಂದು ಭಾವಿಸಿ ನಿಧಿ ಬಳಿ ಕ್ಷಮೆ ಕೇಳಲು ಹೋಗಿದ್ದರು. ಆದರೆ ನಿಧಿ ಅರವಿಂದ್ ವಿರುದ್ಧವೇ ತಿರುಗಿ ಬಿದಿದ್ದರು. ಡಕಾರ್ ರೇಸ್‍ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆ. ಹೀಗಿರುವ ಅರವಿಂದ್ ಅವರಿಗೆ ಅವಮಾನ ಮಾಡಿದ್ದು ಭಾರತ ದೇಶಕ್ಕೆ ಅವಮಾನ ಮಾಡಿದಂತೆ” ಎಂದು ಅರವಿಂದ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು.

ಇತ್ತ ನಿಧಿ ಅಭಿಮಾನಿಗಳು, ಹೆಣ್ಣು ಮಗಳಿಗೆ ಅವಮಾನ ಮಾಡುವುದು ಸರಿಯಲ್ಲ. ನಿಧಿ ವರ್ತನೆ ಸರಿಯಾಗಿತ್ತು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ನಿಧಿ, ಅರವಿಂದ್ ಮಧ್ಯೆ ಯಾರು ಸರಿ? ಯಾರು ತಪ್ಪು ಎನ್ನುವುದು ದೊಡ್ಡ ಚರ್ಚೆ ಆಗಿತ್ತು. ಅಭಿಮಾನಿಗಳು ಸುದೀಪ್ ಅವರು ಈ ಬಗ್ಗೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದರು.

The post ಬಿಗ್ ಬಾಸ್ ಮನೆಯಿಂದ ನಿಧಿ ಔಟ್ appeared first on Public TV.

Source: publictv.in

Source link