ಬಿಗ್ ಬಾಸ್ ಮನೆಯಿಂದ ಈ ವಾರ ಪ್ರಿಯಾಂಕಾ ತಿಮ್ಮೇಶ್ ಅವರು ಹೊರ ನಡೆದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಲ್ಲಿ ಎಲ್ಲರೊಂದಿಗೂ ಬೆರೆತು, ತುಂಬಾ ಸೈಲೆಂಟಾಗಿದ್ದರು. ಯಾರು ಏನೇ ಹೇಳಿದರೂ ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟಾಸ್ಕ್ ವೇಳೆ ಸಹ ತಮ್ಮದೇ ಛಾಪು ಮೂಡಿಸಿದ್ದರು.

ತುಂಬಾ ಸೈಲೆಂಟ್ ಆಗಿದ್ದ ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಚಕ್ರವರ್ತಿ ಅವರ ಜೊತೆ ಏರು ಧ್ವನಿಯಲ್ಲಿ ಜಗಳವನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಕ್ರವರ್ತಿ ಅವರ ಜೊತೆ ನಡೆದ ಜಗಳದಲ್ಲಿ ತಮ್ಮ ಉಗ್ರಾವತಾರವನ್ನು ತೋರಿಸಿದ್ದರು. ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿಬೀಳಿಸಿದ್ದರು.

ಟಾಸ್ಕ್ ವಿಚಾರವಾಗಿ ಅನ್ಯಾಯ ನಡೆದಾಗಲೆಲ್ಲ ಪ್ರಿಯಾಂಕಾ ಅವರು ಧ್ವನಿ ಎತ್ತಿದ್ದಾರೆ. ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ವೇಳೆ ಅರವಿಂದ್ ವಿರುದ್ಧ ಕಿಡಿಕಾರಿದ್ದರು. ಹೀಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ತುಂಬಾ ಆ್ಯಕ್ಟಿವ್ ಆಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದರು.

ಈ ಹಿಂದೆಯೇ ಪ್ರಿಯಾಂಕಾ ಅವರು ಮನೆಯಿಂದ ಹೊರನಡೆಯುವ ಸಂಭವವಿತ್ತು. ಆದರೆ ನಿಧಿ ಸಿಬ್ಬಯ್ಯ ಅವರು ಪ್ರಿಯಾಂಕಾ ಅವರನ್ನು ಸೇವ್ ಮಾಡಿದ್ದರು. ಹೀಗಾಗಿ ಮತ್ತುಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಮುಂದುವರಿದಿದ್ದರು. ಆದರೆ ಈ ವಾರ ಅವರು ಮನೆಯಿಂದ ಹೊರ ನಡೆದಿದ್ದಾರೆ.

The post ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ಔಟ್ appeared first on Public TV.

Source: publictv.in

Source link