ಬಿಗ್ ಬಾಸ್ 2ನೇ ಇನ್ನಿಂಗ್ಸ್ ಫುಲ್ ಕಿಕ್ಕೇರಿಸುತ್ತಿದ್ದು, ಸ್ಪರ್ಧಿಗಳು ರೊಚ್ಚಿಗೆದ್ದು, ಟಾಸ್ಕ್ ಗೆಲ್ಲಲೇಬೇಕೆಂಬ ಛಲ ಹಾಗೂ ಮನರಂಜನೆ ನೀಡಲೇಬೇಕೆಂದು ಪಣ ತೊಟ್ಟು ನಿಂತಂತೆ ಗಂಭಿರವಾಗಿ ಆಟವಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಬಿಗ್ ಬಾಸ್ 2ನೇ ಇನ್ನಿಂಗ್ಸ್ ಆರಂಭದ ದಿನವೇ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ನಡುವೆ ರಣರೋಚಕ ಫೈಟ್.

ಬಿಗ್ ಬಾಸ್ 2ನೇ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿದ್ದು, ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ ಆಟದ ವಿಚಾರವಾಗಿ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಮಧ್ಯೆ ಫುಲ್ ಜಡೆ ಜಗಳ ನಡೆದಿದ್ದು, ಇಬ್ಬರೂ ಬಿದ್ದು ಹೊರಳಾಡಿ, ಒಬ್ಬರಿಗೊಬ್ಬರ ಜಡೆ ಹಿಡಿದು ಫುಲ್ ಫೈಟ್ ಮಾಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದು, ಅಷ್ಟು ಗಂಭಿರವಾಗಿ ಫೈಟ್ ಮಾಡಿದ್ದನ್ನು ಕಂಡು ದಂಗಾಗಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಟೂ ವೀಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್

ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಒಬ್ಬರ ಮೇಲೊಬ್ಬರು ಬಿದ್ದು, ಜಡೆ ಹಿಡಿದು, ಹೊರಳಾಡಿ ತಮ್ಮ ಗೆಲುವಿಗಾಗಿ ಹೋರಾಡಿದ್ದಾರೆ. ಕೊನೆಗೂ ದಿವ್ಯಾ ಸುರೇಶ್ ಗೆದ್ದಿದ್ದಾರೆ. ಬಳಿಕ ಬಿಗ್ ಬಾಸ್ ದಿವ್ಯಾ ಸುರೇಶ್ ಅವರನ್ನು ಲೀಡರ್ಸ್ ತಂಡದ ನಾಯಕಿ ಎಂದು ಘೋಷಿಸುತ್ತಾರೆ. ಆದರೆ ಆಟದ ರೋಚಕತೆ ಕಂಡು ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಇದಕ್ಕಿದ್ದಂತೆ ಇಷ್ಟೊಂದು ಸ್ಪರ್ಧೆ ಎಂದು ಬಾಯ್ ಮೇಲೆ ಬೆರಳಿಟ್ಟಿದ್ದಾರೆ. ಈ ಆಟದ ಮೂಲಕವೇ ಇಬ್ಬರೂ ದಿವ್ಯಾ ಅವರು 2ನೇ ಇನ್ನಿಂಗ್ಸ್ ಫುಲ್ ಸ್ಟ್ರಾಂಗ್ ಇರುತ್ತೆ ಎಂಬುದರ ಸುಳಿವು ನೀಡಿದ್ದಾರೆ.

ಅಂದಹಾಗೆ ಇಷ್ಟೊಂದು ಗಂಭೀರ ಜಗಳ ಯಾಕಾಯ್ತು ಅಂತೀರಾ ಇಲ್ಲಿದೆ ನೋಡಿ ಮ್ಯಾಟ್ರು, ಎರಡನೇ ಇನ್ನಿಂಗ್ಸ್ ಮೊದಲ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಬಿಗ್ ಬಾಸ್ ವೇದಿಕೆಗೆ ಆಗಮಿಸಿದರು. ಕಿಚ್ಚ ಸುದೀಪ್ ದಿವ್ಯಾ ಅವರನ್ನು ಸ್ವಾಗತಿಸಿ, ಹರಟೆ ಬಳಿಕ ಎರಡು ಆಟಗಳನ್ನು ತಿಳಿಸಿದರು. ದಿವ್ಯಾ ಉರುಡುಗ ಬಳಿಕ ಎಂಟ್ರಿ ಕೊಡಲಿರುವ ಸ್ಪರ್ಧಿ ಯಾರು ಎಂದು ಗೆಸ್ ಮಾಡುವುದು. ಮತ್ತೊಂದು ಟೀಮ್ ಡಿವಿಷನ್ ಸಲುವಾಗಿ ಒಬ್ಬರ ಎದುರು ಮತ್ತೊಬ್ಬರು ಆಡುವ ಆಟ. ಮೊದಲನೇ ಆಟ ಗೆಸ್ ಮಾಡುವುದರಲ್ಲಿ ಜಯ ಗಳಿಸಿದರೆ ನೀವು ಯಾವಾಗ ಬೇಕಾದರೂ, ಬಿಗ್ ಬಾಸ್ ಮನೆಯೊಳಗೆ ತಿಂಡಿ ಅಥವಾ ನಿಮಗಿಷ್ಟವಾದ ಆಹಾರ ಪದಾರ್ಥವನ್ನು ಪಡೆಯಬಹುದು ಎಂದು ಹೇಳುತ್ತಾರೆ.

ಕಿಚ್ಚನ ಪ್ರಶ್ನೆಗೆ ದಿವ್ಯಾ ಉರುಡುಗ ಸರಿಯಾದ ಉತ್ತರ ನೀಡುತ್ತಾರೆ. ಅದರಂತೆ ಮುಂದಿನ ಸ್ಪರ್ಧಿಯಾಗಿ ದಿವ್ಯಾ ಸುರೇಶ್ ಬಿಗ್ ಬಾಸ್ ವೇದಿಕೆಗೆ ಆಗಮಿಸುತ್ತಾರೆ. ಆಗ ಸುದೀಪ್ ನೀವಿಬ್ಬರು ಮನೆಯೊಳಗೆ ಹೋದ ಮೇಲೆ ಒಂದು ಪಂದ್ಯ ನಡೆಯುತ್ತದೆ. ನಿಮ್ಮಿಬ್ಬರ ಕೈಗೆ ಬಿಂದಿ ಪಾಕೆಟ್‍ನ್ನು ಕೊಡಲಾಗುತ್ತದೆ. ಅದರಲ್ಲಿನ ಒಂದು ಬಿಂದಿಯನ್ನು ಎದುರಾಳಿಯ ಹಣೆಗೆ ಅಂಟಿಸಬೇಕು ಎಂದು ಹೇಳುತ್ತಾರೆ. ಯಾರು ಮೊದಲು ಎದುರಾಳಿಯ ಹಣೆಗೆ ಬಿಂದಿಯನ್ನು ಅಂಟಿಸುತ್ತಾರೋ ಅವರು ಪಂದ್ಯ ಗೆಲ್ಲುತ್ತಾರೆ ಎಂದು ಹೇಳಿ ಒಳಗೆ ಕಳುಹಿಸುತ್ತಾರೆ. ಬಳಿಕ ಮನೆಯ ಒಳಗೆ ರೋಚಕ ಫೈಟಿಂಗ್ ಬಳಿಕ ದಿವ್ಯಾ ಸುರೇಶ್ ಗೆಲುವು ಸಾಧಿಸಿದ್ದಾರೆ.

The post ಬಿಗ್ ಬಾಸ್ 2ನೇ ಇನ್ನಿಂಗ್ಸ್ ಮೊದಲ ದಿನವೇ DU,DS ಜಡೆ ಜಗಳಕ್ಕೆ ಕಾರಣವೇನು? appeared first on Public TV.

Source: publictv.in

Source link