ಬಿಗ್​ ಮನೆಯಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗೆ ಶಮಂತ್​ ಹೆಸರು ತಳುಕು ಹಾಕಿ ಕೊಂಡಿದೆ. ಒಂದು ರೀತಿಯಲ್ಲಿ ಮನೆಯ ಸ್ನೇಹ ಹಕ್ಕಿಗಳ ಹಾರಾಟಕ್ಕೆ ಪೆಟ್ಟು ಬಿದ್ದಿರುವುದಕ್ಕೆ ಪರೋಕ್ಷವಾಗಿ ಶಮಂತ್​ ಕಾರಣರಾಗಿದ್ದಾರೆ.

ಹೌದು, ಮೊದಲ ಇನ್ನಿಂಗ್ಸ್​ನಲ್ಲಿ ಶಮಂತ್​ ಬಗ್ಗೆ ಯಾರೂ ತೆಲೆಕೆಡಸಿಕೊಳ್ಳುತ್ತಿರಲಿಲ್ಲ. ಅವರನ್ನು ಒಂದು ರೀತಿ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನೋಡುತ್ತಿದ್ದರು. ಆದ್ರೇ, ಈಗ ಮನೆಯ ಸೆಂಟರ್​ ಪಾಯಿಂಟ್​ ಬ್ರೋ ಗೌಡ ಶಮಂತ್. ​

ಅಷ್ಟಕ್ಕೂ ಈಗ ಏನ್​ ಮಾಡಿದ್ರೂ ಶಮಂತ್ ಅಂತಿರಾ, ಇಲ್ಲಿ ಶಮಂತ್​ ಏನೂ ಮಾಡದಿರೊದೇ ವಿಶೇಷ ನೋಡಿ. ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲರೂ ತಮ್ಮದೇ ಕಂಫರ್ಟ್​ ಜೊನ್​ನಲ್ಲಿ ಜೊಡಿಯಾಗಿದ್ದರು. ಆದ್ರೇ, ಎಲ್ರೂ ಒಂದ್​ ರೌಂಡ್​ ಮನೆಗೆ ಹೋಗಿ ಬಂದಿದ್ದೇ ತಡ ಎಲ್ಲರ ಜೊತೆ ಮಿಂಗಲ್ ಆಗೋ ಪ್ರಯತ್ನದಲ್ಲಿದ್ದರು. ಇದೇ ಅವರ ಜೋಡಿ ಸ್ನೇಹಕ್ಕೆ ಮುಳುವಾಗಿದ್ದು, ಇದರಲ್ಲಿ ದಿವ್ಯಾ ಸುರೇಶ ಮತ್ತು ಲ್ಯಾಗ್​ ಮಂಜು ಹಾಗೂ ಪ್ರಿಯಾಂಕಾ ಮತ್ತು ಚಂದ್ರಚೂಡ್ ಅವರ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ.

ದಿವ್ಯಾ ಮತ್ತು ಮಂಜು ಮೊದಲ ಇನ್ನಿಂಗ್ಸ್​ನಲ್ಲಿ ಲವಲವಿಕೆಯ ಹಾರೋ ಹಕ್ಕಿಗಳಾಗಿದ್ದರು. ಕುಂತರು ನಿಂತರು ಒಬ್ಬರ ಜಪ ಮತ್ತೊಬ್ಬರು ಮಾಡುತ್ತಿದ್ದರು. ತಮ್ಮ ಮಧ್ಯದಲ್ಲಿ ಯಾರನ್ನೂ ಬಿಟ್ಟುಕೊಂಡಿರಲಿಲ್ಲ. ಎರಡನೇ ಇನ್ನಿಂಗ್ಸ್​ನ ಆರಂಭದಲ್ಲಿಯೇ ಚಂದ್ರಚೂಡ್​ ಅವರು ಮಾಡಿದ ಆರೋಪಗಳಿಗೆ ತತ್ತರಸಿಹೊಗಿದ್ದು ಗೊತ್ತಿರುವ ವಿಚಾರ. ಈ ನಡುವೇ ಇಬ್ಬರ ನಡುವೇ ಮತ್ತೊಂದು ವಿಚಾರ ಬಿರುಕು ಮೂಡಿಸಿದೆ. ಕ್ಯಾಪ್ಟನ್​ಶಿಪ್​ಗಾಗಿ ನಡೆದ ಟಾಸ್ಕ್​ನಲ್ಲಿ ದಿವ್ಯಾ ಶಮಂತ್​ಗೆ ಸಪೊರ್ಟ್​ ಮಾಡಿದ್ದು ಮಂಜನ ಮುನಿಸಿಗೆ ಕಾರಣವಾಗಿದೆ.
ಇನ್ನೂ, ಇನ್ನೊಂದು ಕಡೆ ಪ್ರಿಯಾಂಕಾ ಮೊದಲ ಇನ್ನಿಂಗ್ಸ್​ನಲ್ಲಿ ಯಾರ ಜೊತೆಯೂ ಮಿಂಗಲ್​ ಆಗಲಿಲ್ಲ ಎಂಬ ಆರೋಪದಿಂದ ಹೊರ ಬರಲು ಈ ಇನ್ನಿಂಗ್ಸ್​ನಲ್ಲಿ ಎಲ್ಲರ ಜೊತೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯವಾಗಿ ಶಮಂತ್​ ಜೊತೆ ಕ್ಲೋಸ್​ ಆಗಿದ್ದು ಚಂದ್ರಚೂಡ್​ ಅವರಿಗೆ ಅಸಹನೆ ಮೂಡಿಸುತ್ತಿದೆ.

ಒಟ್ನಲ್ಲಿ ಶಮಂತ್​ ಅವರ ತಪ್ಪಿಲ್ಲದಿದ್ದರೂ ಅವರ ಕಾರಣಕ್ಕೆ ಜಗಳ ಆಗುತ್ತಿರುವುದು ಸುಳ್ಳಲ್ಲಾ. ಇನ್ನೊಂದು ಪಾಸಿಟಿವ್ ವೇ ನಲ್ಲಿ ನೋಡಿದ್ರೇ ಶಮಂತ್​ ಈಗ ತುಂಬಾನೇ ಆಕ್ಟಿವ್​ ಆಗಿದ್ದಾರೆ. ಸಂಗೀತ ಸಂಯೋಜನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಇದು ಅವರಿಗೆ ಪ್ಲಸ್​ ಪಾಯಿಂಟ್​.

The post ಬಿಗ್ ಮನೆಯ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಬ್ರೋ ಗೌಡ appeared first on News First Kannada.

Source: newsfirstlive.com

Source link