ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಇದೀಗ ಸಚಿವ ಸಿ.ಪಿ ಯೋಗೇಶ್ವರ್ ಅವರು ರಾತ್ರೋರಾತ್ರಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಹೋಗಿ ಬಂದಿದ್ದರು. ಇದೀಗ ನಿನ್ನೆ ಸಿಪಿ ಯೋಗೇಶ್ವರ್ ಅವರು ದಿಢೀರ್ ದೆಹಲಿಗೆ ಹಾರಿದ್ದಾರೆ. ಪರೀಕ್ಷೆ ಬರೆದು ರಿಸಲ್ಟ್‍ಗೆ ಕಾಯ್ತಿದ್ದೇವೆ ಎಂದಿದ್ದ ಯೋಗೇಶ್ವರ್, ಇಂದು ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆಗಳಿವೆ. ವರದಿ ಸಲ್ಲಿಕೆ ಬಳಿಕ ನಾಯಕತ್ವ ಬದಲಾವಣೆ ಸೆಕೆಂಡ್ ಇನ್ನಿಂಗ್ಸ್ ಶುರುನಾ ಎಂಬ ಪ್ರಶ್ನೆ ಎದ್ದಿದೆ.

ಅರುಣ್ ಸಿಂಗ್ ಅವರು ಬಿಎಸ್‍ವೈ ಪರವಾಗಿದ್ದಾರೆ ಅಂತ ಕೆಲವು ಶಾಸಕರು ದೂರಿದ್ದರು. ಕೆಲ ಶಾಸಕರು, ಸಚಿವರು ತಮ್ಮ ಆಪ್ತರಲ್ಲಿ ಅತೃಪ್ತಿ ಹೊರ ಹಾಕಿದ್ದರು. ಇತ್ತೀಚೆಗೆ ಬಿಎಸ್‍ವೈ ಪರವಾಗಿಯೇ ವರದಿ ನೀಡಿದ್ದ ಅರುಣ್ ಸಿಂಗ್, ಯೋಗೇಶ್ವರ್ ಸೇರಿ ಹಲವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.

ಅರುಣ್ ಸಿಂಗ್ ವರದಿ ಬೆನ್ನಲ್ಲೇ ವರಿಷ್ಠರಿಗೆ ದೂರು ನೀಡುವ ಪ್ರಯತ್ನ ಸಾಧ್ಯತೆ ಇದೆ. ಹೀಗಾಗಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಸಿಪಿಸಿ ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಡಿ.ರೂಪ ಮತ್ತೆ ಅಸಮಧಾನ

The post ಬಿಜೆಪಿಯಲ್ಲಿ ಮುಗಿದಿಲ್ಲ ನಾಯಕತ್ವ ಗೊಂದಲ- ರಾತ್ರೋರಾತ್ರಿ ದೆಹಲಿಗೆ ಸಿಪಿವೈ ದೌಡು appeared first on Public TV.

Source: publictv.in

Source link