‘ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಜೆಡಿಎಸ್​ ಕ್ವಾರಂಟೀನ್​​ನಲ್ಲಿದೆ’ ಎಂದ ಅರುಣ್ ಸಿಂಗ್

‘ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಜೆಡಿಎಸ್​ ಕ್ವಾರಂಟೀನ್​​ನಲ್ಲಿದೆ’ ಎಂದ ಅರುಣ್ ಸಿಂಗ್

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡಿರುವ ಅರುಣ್ ಸಿಂಗ್.. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕಾರ್ಯಕರ್ತರು ನಾವೆಲ್ಲ ಒಟ್ಟಿಗಿದ್ದೇವೆ. ಯಾವುದೇ ಸಮಸ್ಯೆ ನಮ್ಮಲ್ಲಿ ಇಲ್ಲ. ಒಟ್ಟಾಗಿ ಸರ್ಕಾರವನ್ನು ‌ಮುನ್ನಡೆಸುತ್ತೇವೆ. ಮೂರು ದಿನ ಪಕ್ಷದ ಕಾರ್ಯಕ್ರಮ ಇದೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ. ಪಕ್ಷದ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು.

ಮೃತ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಒಳ್ಳೆಯ ನಿರ್ಧಾರವಾಗಿದೆ. ಸಿಎಂ ಬದಲಾವಣೆ ಇಲ್ಲ. ಕಾಂಗ್ರೆಸ್​ ಸುಮ್ಮನೆ ಆರೋಪ ಮಾಡ್ತಿದೆ. ಜೆಡಿಎಸ್ ಕ್ವಾರಂಟೀನ್​ನಲ್ಲಿದೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ ಎಂದರು.

The post ‘ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಜೆಡಿಎಸ್​ ಕ್ವಾರಂಟೀನ್​​ನಲ್ಲಿದೆ’ ಎಂದ ಅರುಣ್ ಸಿಂಗ್ appeared first on News First Kannada.

Source: newsfirstlive.com

Source link