ಬಿಜೆಪಿಯೊಂದಿಗೆ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧೆ, ಶೀಘ್ರದಲ್ಲೇ ಮೈತ್ರಿ ಘೋಷಣೆ: ಅಮರಿಂದರ್ ಸಿಂಗ್ | Punjab Lok Congress will contest in partnership with the BJP in Punjab election says Former Punjab CM Amarinder Singh


ಬಿಜೆಪಿಯೊಂದಿಗೆ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧೆ, ಶೀಘ್ರದಲ್ಲೇ ಮೈತ್ರಿ ಘೋಷಣೆ: ಅಮರಿಂದರ್ ಸಿಂಗ್

ಅಮರಿಂದರ್ ಸಿಂಗ್

ಚಂಡೀಗಡ:  ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh) ಅವರು ತಮ್ಮ ಐದು ದಶಕಗಳ ಪಕ್ಷವಾದ ಕಾಂಗ್ರೆಸ್‌ನಿಂದ ಹೊರಬಂದು ಒಂದು ತಿಂಗಳ ನಂತರ ಚಂಡೀಗಡದಲ್ಲಿ(Chandigarh) ಇಂದು ತಮ್ಮ ಹೊಸ ಪಕ್ಷದ ಕಚೇರಿಯನ್ನು ತೆರೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್, ತಮ್ಮ ಪಂಜಾಬ್ ಲೋಕ್ ಕಾಂಗ್ರೆಸ್ (Punjab Lok Congress) ಬಿಜೆಪಿಯ ಸಹಭಾಗಿತ್ವದಲ್ಲಿ ಪಂಜಾಬ್ ಚುನಾವಣೆಯಲ್ಲಿ(Punjab election) ಸ್ಪರ್ಧಿಸಲಿದೆ ಮತ್ತು ಶೀಘ್ರದಲ್ಲೇ ಮೈತ್ರಿ ಘೋಷಿಸಲಾಗುವುದು ಎಂದು ಹೇಳಿದರು. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಗೆ ಸೀಟು ಹಂಚಿಕೆ ಕುರಿತು ಮಾತುಕತೆಗಳನ್ನು ವಿವರಿಸಲು ಅವರು ನಿರಾಕರಿಸಿದ್ದಾರೆ. “ನಮ್ಮ ಪಕ್ಷ, ಸುಖದೇವ್ ದಿಂಡ್ಸಾ(Sukhdev Dhindsa) ಅವರ ಪಕ್ಷ ಮತ್ತು ಬಿಜೆಪಿ ಸೀಟು ಹಂಚಿಕೆಯ ವ್ಯವಸ್ಥೆಯನ್ನು ಹೊಂದಿರುತ್ತದೆ. ನಾನು ನಿಮಗೆ ನಿಖರವಾದ ಸಂಖ್ಯೆಯನ್ನು ಹೇಳಲಾರೆ” ಎಂದು ಕ್ಯಾಪ್ಟನ್ ಹೇಳಿದರು. “ನಾವು ತಾತ್ವಿಕ ಮೈತ್ರಿಯನ್ನು ಹೊಂದಿದ್ದೇವೆ”. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಆಯ್ಕೆಯನ್ನು ಎಲ್ಲ ಮೈತ್ರಿ ಪಕ್ಷಗಳು ನಿರ್ಧರಿಸುತ್ತವೆ ಎಂದಿದ್ದಾರೆ.

ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಅವರು ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಚುನಾವಣೆಯ ಮೊದಲು ಸಮಯ ಸಮಸ್ಯೆಯಲ್ಲ. 1980 ರಲ್ಲಿ ಚುನಾವಣೆಗೆ ಕೇವಲ 14 ದಿನಗಳ ಮೊದಲು ಲೋಕಸಭೆ ಚುನಾವಣೆಗೆ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಲಾಯಿತು. ನಾನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ ಎಂದಿದ್ದಾರೆ ಅಮರಿಂದರ್ ಸಿಂಗ್.

ಅಮರಿಂದರ್ ಸಿಂಗ್ ಅವರು ತಮ್ಮ ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು ಅವರ ಆಶಯಕ್ಕೆ ಒಲವು ತೋರಿ, ಪಕ್ಷವು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದ ವಾರಗಳ ನಂತರ ಅವರು ಕಾಂಗ್ರೆಸ್ ತೊರೆದಿದ್ದರು.ಅವರು ತಮ್ಮ ಹೊಸ ಪಕ್ಷವನ್ನ ಘೋಷಿಸುವ ಮೊದಲೇ, ಅವರು ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿಯೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದ್ದರು. ರೈತರು ಪ್ರತಿಭಟನೆ ನಡೆಸುತ್ತಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಮ್ಮೆಟ್ಟಿಸುವುದು ಅವರ ಒಂದು ಷರತ್ತು ಆಗಿತ್ತು ಎಂದು ಪತ್ರಿಕೆಗಳು ವರದಿ ಮಾಡಿದ್ದವು.’

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಆದರೆ ಸಂಸತ್ ನಲ್ಲಿ ತಮ್ಮ ಬೆಳೆಗೆ ಕನಿಷ್ಠ ಬೆಲೆಯನ್ನು ಖಾತರಿಪಡಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ರೈತರು ಹೇಳಿದ್ದಾರೆ.  ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗಿದೆ. ಉಳಿದ ಸಮಸ್ಯೆಗಳಿಗೆ ಪ್ರಧಾನಿ ಸಮಿತಿಯನ್ನು ಘೋಷಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗಾಗಿ (ಕೃಷಿ ಸಚಿವ ನರೇಂದ್ರ) ತೋಮರ್ ಸಂಸತ್ ನಲ್ಲಿ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ಈಗ ರೈತರು ಸರ್ಕಾರದ ಆ ಬದ್ಧತೆಯನ್ನು ಒಪ್ಪಿಕೊಳ್ಳಬೇಕು ಎಂದು ನಾನು ರೈತರಿಗೆ ಮನವಿ ಮಾಡಿರುವುದಾಗಿ ಸಿಂಗ್ ಹೇಳಿದರು.

TV9 Kannada


Leave a Reply

Your email address will not be published. Required fields are marked *