ಬಿಜೆಪಿ ಇತಿಹಾಸದಲ್ಲಿ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು: ಆರ್ ಧ್ರುವನಾರಾಯಣ | Congress Leader R Dhruvanarayan slams Nalin Kumar Kateel BJP Karnataka Politics


ಬಿಜೆಪಿ ಇತಿಹಾಸದಲ್ಲಿ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು: ಆರ್ ಧ್ರುವನಾರಾಯಣ

ನಳಿನ್ ಕುಮಾರ್ ಕಟೀಲು, ಆರ್ ಧ್ರುವನಾರಾಯಣ

ಚಾಮರಾಜನಗರ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಪಿಟೀಲ್ ಬಾರಿಸಲು ಲಾಯಕ್​ ಎಂದು ನಳಿನ್ ಕುಮಾರ್ ಕಟೀಲು ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಇತಿಹಾಸದಲ್ಲಿ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ಕಟೀಲು. ಬಿಜೆಪಿಯ ದುರ್ಬಲ ರಾಜ್ಯಾಧ್ಯಕ್ಷ ಅಂದ್ರೆ ಕಟೀಲು ಒಬ್ಬನೇ ಎಂದು ಧ್ರುವನಾರಾಯಣ ಹೇಳಿಕೆ ನೀಡಿದ್ದಾರೆ. ದೇಶಕ್ಕಾಗಿ ಪ್ರಾಣಕೊಟ್ಟ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇವರ ಬಗ್ಗೆ ಕಟೀಲು ಬಹಳ ಹಗುರವಾಗಿ ಮಾತನಾಡುತ್ತಾರೆ. ಪಂಜಾಬ್ ಖಲಿಸ್ತಾನ್ ಆಗುವುದನ್ನು ತಪ್ಪಿಸಲು ಹೋಗಿ ಹತ್ಯೆ ಆಗಿತ್ತು. ತಮ್ಮ ಅಂಗರಕ್ಷಕರಿಂದಲೇ ಇಂದಿರಾ ಗಾಂಧಿ ಕೊಲೆಯಾದರು. ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆಗೆ ಮುಂದಾಗಿ, ಪ್ರಧಾನಿಯಾಗಿದ್ದಾಗಲೇ ರಾಜೀವ್​ ಗಾಂಧಿ ಬಲಿಯಾದರು. ಇತಿಹಾಸ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಚಾಮರಾಜನಗರದಲ್ಲಿ ಅವರು ಹೇಳಿಕೆ ನೀಡಿದ್ದಾರೆ.

ಗೌರವಧನ ನೀಡುವಂತೆ ಕಿರಿಯ ವೈದ್ಯರ ಧರಣಿ ವಿಚಾರವಾಗಿ ಧರಣಿ ಸ್ಥಳಕ್ಕೆ ಕಾಂಗ್ರೆಸ್ ನಾಯಕ ಆರ್. ಧ್ರುವನಾರಾಯಣ ಭೇಟಿ ನೀಡಿದ್ದಾರೆ. ಚಾಮರಾಜನಗರದ ಯಡಪುರ ಬಳಿಯ ಸಿಮ್ಸ್​ ಆಸ್ಪತ್ರೆಗೆ ಬೀಗ ಹಾಕಿ ಧರಣಿ ನಡೆಸುತ್ತಿದ್ದಾರೆ. ಧರಣಿ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಆರ್​. ಧ್ರುವನಾರಾಯಣ ಬೆಂಬಲ ನೀಡಿದ್ದಾರೆ. ಕೊವಿಡ್ ವೇಳೆ ಕೆಲಸ ಮಾಡಿದ್ದ ವೈದ್ಯರಿಗೆ ಗೌರವಧನ ನೀಡುವುದಾಗಿ ಹೇಳಲಾಗಿತ್ತು. 6 ತಿಂಗಳ ಗೌರವಧನ ನೀಡುವುದಾಗಿ ಆದೇಶ ಮಾಡಿತ್ತು. ಆದರೆ ಈವರೆಗೆ ಹಣ ನೀಡದಿರುವುದು ಸೂಕ್ತ ಕ್ರಮವಲ್ಲ. ತಕ್ಷಣ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಸರ್ಕಾರಕ್ಕೆ ಕೆಪಿಸಿಸಿ ಕಾಱಧ್ಯಕ್ಷ ಧ್ರುವನಾರಾಯಣ ಆಗ್ರಹಿಸಿದ್ದಾರೆ.

ಸರ್ಕಾರ ಕಿರಿಯ ವೈದ್ಯರಿಗೆ ಗೌರವಧನ ನೀಡದ ಆರೋಪದಲ್ಲಿ ಕೊರೊನಾ ವೇಳೆ ಕೆಲಸ ಮಾಡಿದ ಗೌರವಧನಕ್ಕೆ ಒತ್ತಾಯ ಕೇಳಿಬಂದಿದೆ. ರಾಜ್ಯ ಸರ್ಕಾರದ ವಿರುದ್ಧ ಕಿರಿಯ ವೈದ್ಯರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲು ಓರ್ವ ಭಯೋತ್ಪಾದಕ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಇದನ್ನೂ ಓದಿ: ಕಾಂಗ್ರೆಸ್​ನ​ವರ ಅವಧಿಯಲ್ಲಿ ಭಯೋತ್ಪಾದನೆ ಆರಂಭವಾಗಿದೆ: ನಳಿನ್ ಕುಮಾರ್ ಕಟೀಲ್

TV9 Kannada


Leave a Reply

Your email address will not be published. Required fields are marked *