ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್ | Pramod Muthalik on Hidutva Hindu Congress BJP Karnataka Politics Conversion


ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)

ಬಾಗಲಕೋಟೆ: ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ ಮಾಡಿದ್ದೇನೆ. ಹಿಂದುತ್ವ ಹೋರಾಟ ಮಾತ್ರ ಮಾಡುತ್ತೇನೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು (ನವೆಂಬರ್ 9) ಹೇಳಿಕೆ ನೀಡಿದ್ದಾರೆ. ಬಿಜೆಪಿ ಈಗ ಕಲಬೆರಕೆ ಪಕ್ಷ. ಇವತ್ತು ಬಿಜೆಪಿಗೆ ಶೇಕಡಾ 60 ರಿಂದ 70 ರಷ್ಟು ಮಂದಿ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ‌. ಕಮ್ಯುನಿಸ್ಟ್​ರು ಬಂದಿದ್ದಾರೆ. ಶೇಕಡಾ 30 ರಿಂದ 40 ರಷ್ಟು ಮಾತ್ರ ಬಿಜೆಪಿಯವರು ಇದ್ದಾರೆ‌‌ ಎಂದು ಮುತಾಲಿಕ್ ಹೇಳಿದ್ದಾರೆ.

ಕಾಂಗ್ರೆಸ್​ನವರಿಗೆ ಹಿಂದುತ್ವ ಇಲ್ಲ. ಅವರಿಗೆ ಬರಿ ಲೂಟಿ ಮಾಡಬೇಕು ಅನ್ನೋದಿದೆ. ಇಲ್ಲಿವರೆಗೆ ಕಾಂಗ್ರೆಸ್ ನವರು ಟೆರರಿಸ್ಟ್ ಗಳನ್ನೇ ಬೆಳೆಸಿದ್ದಾರೆ‌‌. ಅಂಥವರು ಇಂದು ಬಿಜೆಪಿಯಲ್ಲಿದ್ದಾರೆ‌. ಅವರಿಗೆ ಹಿಂದುತ್ವ, ಧರ್ಮ, ದೇಶ, ಸಂಸ್ಕೃತಿ, ಮಾನ, ಮರ್ಯಾದೆ ಏನೂ ಇಲ್ಲ. ಬಿಜೆಪಿ ಇಂದು ಓರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ ಎಂದು ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.

ಮತಾಂತರದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಬೇಕು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಈ ವಿಚಾರ ಚರ್ಚೆಗೆ ತಂದ್ರು. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದ ಶೇಕಡಾ 99 ರಷ್ಟು ಕ್ರಿಶ್ಚಿಯನ್ನರು ಮತಾಂತರ ಆದವರು. ಒತ್ತಾಯ, ಆಸೆ, ಆಮಿಷಗಳಿಂದ ಮತಾಂತರ ಆಗಿದ್ದಾರೆ. ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ. ಅವರನ್ನು ಗೋವಾಗೆ ಕರೆದುಕೊಂಡು ಹೋಗಿ ಮತಾಂತರ ಮಾಡುತ್ತಾರೆ. ನವೆಂಬರ್ 12 ರಂದು ಮುಖ್ಯಮಂತ್ರಿ ಬಳಿ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಪುನೀತ್ ರಾಜ್​ಕುಮಾರ್​ಗೆ ಪದ್ಮಶ್ರೀ ನೀಡಬೇಕು
ನಟ ಪುನೀತ್ ರಾಜ್‌ಕುಮಾರ್‌ಗೆ ಪದ್ಮಶ್ರೀ ನೀಡಬೇಕು. ಪುನೀತ್ ಸಿನಿಮಾಗಳಲ್ಲಿ ಸಮಾಜಕ್ಕೆ ಮೆಸೇಜ್ ನೀಡ್ತಿದ್ರು. ಹೀಗಾಗಿ ನಟ ಪುನೀತ್‌ಗೆ ಪದ್ಮಶ್ರೀ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗದಗದ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ; ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ: ಪ್ರಮೋದ್ ಮುತಾಲಿಕ್

ಇದನ್ನೂ ಓದಿ: ನನಗೆ ರಾಜಕೀಯ ಸಹವಾಸವೇ ಬೇಡ, ಇರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ -ಪ್ರಮೋದ್ ಮುತಾಲಿಕ್

TV9 Kannada


Leave a Reply

Your email address will not be published. Required fields are marked *