ನವದೆಹಲಿ: ಪಕ್ಷದಿಂದ ಉಚ್ಛಾಟಿಸುವಾಗ ತಮ್ಮನ್ನ ಯಾರೊಬ್ಬರೂ ಮಾತನಾಡಿಸಿಲ್ಲ, ಒಂದೇ ಒಂದು ಮಾತು ಕೂಡ ಕೇಳಿಲ್ಲ ಎಂದು ಉತ್ತರಾಖಂಡ್ನ ಉಚ್ಛಾಟಿತ ಬಿಜೆಪಿ ನಾಯಕ ಹರಕ್ ಸಿಂಗ್ ರಾವತ್ ಕಣ್ಣೀರಿಟ್ಟಿದ್ದಾರೆ.
ಉತ್ತರಾಖಂಡ್ ವಿಧಾಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹರತ್ ಸಿಂಗ್ ರಾವತ್ ಹೇಳಿಕೆ ನೀಡಿದ್ದರು. ಇದೇ ವಿಚಾರವನ್ನ ಇಟ್ಟುಕೊಂಡು ಬಿಜೆಪಿ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹರತ್ ಸಿಂಗ್, ಅವರು (ಬಿಜೆಪಿ) ಉಚ್ಛಾಟಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ನನ್ನ ಜೊತೆ ಮಾತನಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರದೇ ಇದ್ದಿದ್ದರೆ, 4 ವರ್ಷಗಳ ಹಿಂದೆಯೇ ಪಕ್ಷಕ್ಕೆ ರಾಜೀನಾಮೆ ನೀಡಿರುತ್ತಿದ್ದೆ. ನನಗೆ ಮಂತ್ರಿಯಾಗಲು ಇಷ್ಟ ಇಲ್ಲ. ನಾನು ಬಯಸೋದು ಕೆಲಸ ಮಾಡಲು. ನಾನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಲು ಇಷ್ಟಪಡುತ್ತೇನೆ. ಕಾಂಗ್ರೆಸ್ಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
Congress Party will form government in Uttarakhand. I will work for Congress party – Uttarakhand BJP Minister Harak Singh Rawat pic.twitter.com/vs8OkZxp08
— Aaron Mathew (@AaronMathewINC) January 17, 2022