ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೃದ್ಧರೊಬ್ಬರು ಹೃದಯಾಘಾರಕ್ಕೊಳಗಾಗಿ ನಿಧನರಾದರು | Elderly man who had taken part in BJP’s Janaspandana Program dies of heart attackಕಾರ್ಯಕ್ರಮ ನಡೆಯುವಾಗ ಕುಸಿದುಬಿದ್ದ ಸಿದ್ದಲಿಂಗಪ್ಪನವರನ್ನು ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು.

TV9kannada Web Team


| Edited By: Arun Belly

Sep 10, 2022 | 6:05 PM
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ (Doddaballapura) ಶನಿವಾರ ನಡೆದ ಬಿಜೆಪಿಯ ಅದ್ದೂರಿ ಜನಸ್ಪಂದನ (Janaspandana) ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಹೃದಯಾಘಾತಕ್ಕೊಳಗಾಗಿ (heart attack) ಮೃತಪಟ್ಟಿದ್ದಾರೆ. ಮೃತವ್ಯಕ್ತಿಯನ್ನು ತುಮಕೂರಿನ ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ಕಾರ್ಯಕ್ರಮ ನಡೆಯುವಾಗ ಕುಸಿದುಬಿದ್ದ ಸಿದ್ದಲಿಂಗಪ್ಪನವರನ್ನು ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು.

TV9 Kannada


Leave a Reply

Your email address will not be published.