ಬಿಜೆಪಿ ಟಾಪ್ ಎಕ್ಸಿಕ್ಯುಟಿವ್ ಲಿಸ್ಟ್’​ನಿಂದ ವರುಣ್ ಗಾಂಧಿ, ಮನೇಕಾ ಗಾಂಧಿ ಔಟ್.. ಯಾಕೆ..?

ನವದೆಹಲಿ: ಭಾರತೀಯ ಜನತಾ ಪಾರ್ಟಿ ತಮ್ಮ ನಾಯಕರಾದ ವರುಣ್ ಗಾಂಧಿ ಹಾಗೂ ಅವರ ತಾಯಿ ಮನೇಕಾ ಗಾಂಧಿಯನ್ನ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಪಟ್ಟಿಯಿಂದ ಕೈಬಿಡಲಾಗಿದೆ.

ಇತ್ತೀಚೆಗೆ ನಡೆದ ಲಖೀಂಪುರ್ ಖೇರಿ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಒದಗಿಸುವಂತೆ ಒತ್ತಾಯ ಹಾಕಿದ್ದರು. ಅಲ್ಲದೇ ಇತ್ತೀಚೆಗೆ ರೈತರ ಪ್ರತಿಭಟನೆಗೂ ಬೆಂಬಲ ನೀಡಿ ಟ್ವೀಟ್​​ಗಳನ್ನು ಮಾಡಿದ್ದರು. ಈ ಬೆನ್ನಲ್ಲೇ ವರುಣ್ ಗಾಂಧಿ ಹಾಗೂ ಮನೆಕಾ ಗಾಂಧಿಯನ್ನ ಟಾಪ್ ಎಕ್ಸಿಕ್ಯುಟಿವ್ ಲಿಸ್ಟ್​ನಿಂದ ಹೊರಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕೃಷಿ ಕಾನೂನು ವಿರೋಧಿಸಿ ಹೋರಾಟ: ರೈತರ ಪರ ಬ್ಯಾಟ್ ಬೀಸಿದ ಬಿಜೆಪಿ ಸಂಸದ ವರುಣ್ ಗಾಂಧಿ

ವರುಣ್ ಗಾಂಧಿ ಲಖೀಂಪುರ್ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದರು.

ಇವರ ಜೊತೆಗೆ ವಿನಯ್ ಕತಿಯಾರ್, ವಿಜಯ್ ಕುಮಾರ್ ಮಲ್ಹೋತ್ರಾ, ಸುಬ್ರಮಣಿಯನ್ ಸ್ವಾಮಿ, ಸುರೇಶ್ ಪ್ರಭು, ಕಿರಿಟ್ ಸೊಮಯ್ಯಾ ಅವರನ್ನಯ ಪಟ್ಟಿಯಿಂದ ಹೊರಗಿಡಲಾಗಿದೆ.

ಹೊಸದಾಗಿ ಪಟ್ಟಿ ಸೇರಿಕೊಂಡವರು..

ಜ್ಯೋತಿರಾಧಿತ್ಯ ಸಿಂದಿಯಾ

ಸ್ಮೃತಿ ಇರಾನಿ

ಭಾಗೀರತಿ ದೇವಿ

ನಿತ್ಯಾನಂದ್ ರೈ

ಸರೋಜ ಪಾಂಡೆ

ಮೀನಾಕ್ಷಿ ಲೇಖಿ

ಅಶ್ವಿನಿ ವೈಷ್ಣವ್

ಮನೋಜ್ ತಿವಾರಿ

ಪುರುಷೋತ್ತಮ್ ರುಪಾಲ

ಮನ್ಷುಕ್ ಮಾಂಡವಿಯಾ

ಭೂಪೇಂದ್ರ ಯಾದವ್

ಅನುರಾಗ್ ಥಾಕೂರ್

ಪ್ಲಲ್ಹಾದ್ ಜೋಶಿ

ವಿ ಮುರಳೀಧರನ್

ವಿನಯ್ ಸಹಸ್ರಬುದ್ಧೆ

ಹರ್​ದೀಪ್ ಸಿಂಗ್ ಪುರಿ

ಜಿ ಕೃಷ್ಣಾರೆಡ್ಡಿ

ದಿನೇಶ್ ತ್ರಿವೇದಿ

ಸ್ವಪನ್ ದಾಸ್​ಗುಪ್ತಾ

News First Live Kannada

Leave a comment

Your email address will not be published. Required fields are marked *