ತಾವು ಕಣ್ಣೀರಧಾರೆ ಹರಿಸಿ ಪಕ್ಷ ಕಟ್ಟಿದ್ದರೆ ಬಿಜೆಪಿಯವರು ಅಮಾಯಕ ಯುವಕರ ಹೆಣಗಳನ್ನು ಉರುಳಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಆ ಪಕ್ಷದ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ಇಂಥ ಟ್ವೀಟ್ ಮಾಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಬಿಜೆಪಿಯ ಟ್ವೀಟ್ ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ರಾಮನಗರದ (Ramanagara) ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರಸ್ವಾಮಿ ಅವರು ತಾವು ಕಣ್ಣೀರಧಾರೆ ಹರಿಸಿ ಪಕ್ಷ ಕಟ್ಟಿದ್ದರೆ ಬಿಜೆಪಿಯವರು ಅಮಾಯಕ ಯುವಕರ ಹೆಣಗಳನ್ನು ಉರುಳಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಆ ಪಕ್ಷದ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ಇಂಥ ಟ್ವೀಟ್ ಮಾಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.