’ಬಿಜೆಪಿ ನಾಯಕರು ಬರ್ಲಿ.. RSS ಕುರಿತು ಚರ್ಚಿಸಲು ನಾನ್​ ರೆಡಿ’-ಹೆಚ್​.ಡಿ.ಕುಮಾರಸ್ವಾಮಿ

ರಾಮನಗರ: ಆರ್​ಎಸ್​ಎಸ್ ಕುರಿತು ಮಾತನಾಡಿರುವ ಬಗ್ಗೆ ನಾನು ಸಾರ್ವಜನಿಕವಾಗಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಆರ್​ಎಸ್​ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ನಾನು ಬದ್ಧನಾಗಿದ್ದು ಆ ವಿಚಾರವಾಗಿ ನಾನು ಸಾರ್ವಜನಿಕವಾಗಿ ಚರ್ಚಿಸಲು ರೆಡಿ. ಬಿಜೆಪಿ ಹಾಗೂ ಆರ್​ಎಸ್​ಎಸ್ ನಾಯಕರು ಬರಲಿ ಅವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಾಗಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಹೆಚ್​ಡಿಕೆ ಸವಾಲ್​ ಹಾಕಿದ್ದಾರೆ.

ಆರ್​ಎಸ್​ಎಸ್ ಪ್ರಚಾರಕರೇ ಒಬ್ಬ ಲೇಖಕರ ಮುಂದೆ ಹೇಳಿರುವುದನ್ನ ನಾನು ಹೇಳಿದ್ದೇನೆ.. ಹೀಗಾಗಿ ನಾನು ವಾಸ್ತವತೆಯ ಆಧಾರದಲ್ಲಿ ಮಾತನಾಡಿದ್ದೇನೆ ಅಷ್ಟೇ. ಹೀಗಾಗಿ ನಾನು ಆ ಕುರಿತು ಚರ್ಚಿಸಲು ರೆಡಿ ಎಂದಿದ್ದಾರೆ. ಜೊತೆಗೆ ನಮ್ಮ ಪಕ್ಷವನ್ನ 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನ ಮಾಡಿದ್ದೇನೆ.. ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕಾರ್ಯಾಗಾರಗಳನ್ನ ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ:ಅಕಸ್ಮಾತ್ RSS ಇರದಿದ್ರೆ ಭಾರತ ಪಾಕಿಸ್ತಾನ ಆಗುತ್ತಿತ್ತು -ಮಾಜಿ ಸಿಎಂ ಜಗದೀಶ್ ಶೆಟ್ಟರ್

ಇದನ್ನೂ ಓದಿ:‘ಈ ಮನುಷ್ಯ ಹೇಗೆ ಸಾಲ ಮನ್ನಾ ಮಾಡ್ತಾನೆ ಎಂದು ಅನ್ನಿಸಿತ್ತು’- ಹೆಚ್​ಡಿಕೆ ಬಗ್ಗೆ ಮಾಜಿ ಪ್ರಧಾನಿ ಮಾತು

The post ’ಬಿಜೆಪಿ ನಾಯಕರು ಬರ್ಲಿ.. RSS ಕುರಿತು ಚರ್ಚಿಸಲು ನಾನ್​ ರೆಡಿ’-ಹೆಚ್​.ಡಿ.ಕುಮಾರಸ್ವಾಮಿ appeared first on News First Kannada.

News First Live Kannada

Leave a comment

Your email address will not be published. Required fields are marked *