ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್​​ ಅವರಿಗೆ ಜೀವ ಬೆದರಿಕೆ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವೈರಲ್​​ | BJP leader Yashpal Suvarna and Pramod Muthalik life threatened Posts gone viral in Instagram


ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್​​ ಅವರಿಗೆ  ಜೀವ ಬೆದರಿಕೆ;  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವೈರಲ್​​

ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಮತ್ತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಶಿರಚ್ಛೇದ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳು ಹರದಾಡುತ್ತಿದ್ದು ಈ ಕುರಿತು ಉಡುಪಿಯಲ್ಲಿ ದೂರು ದಾಖಲಾಗಿದೆ

ಬೆಂಗಳೂರು: ಬಿಜೆಪಿ (BJP) ನಾಯಕ ಯಶ್ಪಾಲ್ ಸುವರ್ಣ (Yashpal Suvarna) ಮತ್ತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಅವರ ಶಿರಚ್ಛೇದನ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳು ಹರದಾಡುತ್ತಿದ್ದು ಈ ಕುರಿತು ಉಡುಪಿಯಲ್ಲಿ ದೂರು ದಾಖಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಉಡುಪಿ ಕಾಲೇಜು ಆಡಳಿತ ಮಂಡಳಿ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಸಂದೇಶಗಳು, ಕರೆಗಳು ಬರುವುದು ಸಾರ್ವಜನಿಕ ಜೀವನದಲ್ಲಿ ಸರ್ವೇಸಾಮಾನ್ಯ. ನಾವು ರಾಷ್ಟ್ರಕ್ಕಾಗಿ ಕೆಲಸ ಮಾಡುವಾಗ ದೇಶ ವಿರೋಧಿ ಸಂಘಟನೆಗಳು ಅಥವಾ ದೇಶದ್ರೋಹಿಗಳು ಇಂತಹ ಬೆದರಿಕೆಗಳನ್ನು ಹಾಕುತ್ತಾರೆ.  ನಾನು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಇದು ಜೀವನದ ಒಂದು ಭಾಗ, ನಾವು ನಮ್ಮ ಕೆಲಸವನ್ನು ಸಂವಿಧಾನದ ಮಿತಿಯಲ್ಲಿ ಮಾಡುತ್ತಿದ್ದೇವೆ. ನಾವು ನಮ್ಮ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನು ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ; ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಕೇಸು

“ನಾನು Instagram ಪೋಸ್ಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಆದಾಗ್ಯೂ, ಸಮಸ್ಯೆಯ ಹಿಂದೆ ಇರುವ ಸ್ಥಳೀಯ ಜನರು ಯಾರೆಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ನಾವು ಅದನ್ನು ಕಂಡುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ಮಂಗಳವಾರ ಉಪ್ಪಿನಂಗಡಿ ಪಟ್ಟಣದ ಕಾಲೇಜು ಸಿಬ್ಬಂದಿ ಎಚ್ಚರಿಕೆ ನೀಡಿದ ನಂತರವೂ ತರಗತಿಯಲ್ಲಿ ಹಿಜಾಬ್ ಧರಿಸಲು ಪ್ರಯತ್ನಿಸಿದ 24 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಹಿಜಾಬ್ ಧರಿಸಲು ಅವಕಾಶ ನೀಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ ಎಲ್ಲಾ ರೀತಿಯ ವಿವಾದಗಳು ಬಗೆಹರಿದಿವೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ: ಆರಗ ಜ್ಞಾನೇಂದ್ರ

ನೋಟಿಸ್ ಸ್ವೀಕರಿಸಿದ ವಿದ್ಯಾರ್ಥಿಗಳು ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ಬಾಹ್ಯ ಅಂಶಗಳೊಂದಿಗೆ ಸಹಕರಿಸಿದರು ಮತ್ತು ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ವಿರೋಧಿಸಿದರು ಎಂದು ನೋಟಿಸ್​ನಲ್ಲಿ  ಉಲ್ಲೇಖಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.