ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಾರ್ಟಿಯಿಂದ ಹೊರಗುಳಿದು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದ 300 ಕಾರ್ಯಕರ್ತರನ್ನು ಗಂಗಾಜಲದಿಂದ ಶುದ್ಧಿಗೊಳಿಸುವ ಮೂಲಕ ಮತ್ತೆ ಟಿಎಂಸಿಗೆ ಕರೆದುಕೊಂಡ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದ ಬಿರ್​​ಭುಮ್​ನಲ್ಲಿ ನಡೆದಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ 300 ಕಾರ್ಯಕರ್ತರು ತಮ್ಮನ್ನು ಪಕ್ಷಕ್ಕೆ ವಾಪಸ್ ಕರೆದುಕೊಳ್ಳುವಂತೆ ಬಿರ್​ಭುಮ್ ಟಿಎಂಸಿ ಕಚೇರಿಯ ಎದುರು ಉಪವಾಸ ಕೂತಿದ್ದರು ಎನ್ನಲಾಗಿದೆ. ಹೀಗೆ ಉಪವಾಸ ಕೂತಿದ್ದವರ ಮೇಲೆ ಗಂಗಾಜಲ ಹಾಕುವ ಮೂಲಕ ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.

ಇನ್ನು ಈ ವೇಳೆ ಹೇಳಿಕೆ ನೀಡಿರುವ ಓರ್ವ ಕಾರ್ಯಕರ್ತ ನಾವು ಬಿಜೆಪಿ ಸೇರಿಕೊಂಡು ನಮ್ಮ ಗ್ರಾಮಗಳ ಅಬಿವೃದ್ಧಿಗೆ ನಾವೇ ತೊಡಕಾಗಿದ್ದೆವು ಎಂದಿದ್ದಾರೆ.

The post ಬಿಜೆಪಿ ಬೆಂಬಲಿಸಿದ್ದ 300 ಕಾರ್ಯಕರ್ತರ ತಲೆ ಮೇಲೆ ಗಂಗಾಜಲ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ TMC appeared first on News First Kannada.

Source: newsfirstlive.com

Source link