
ವೈರಲ್ ಆದ ವಾಟ್ಸ್ ಅಪ್ ಚಾಟಿಂಗ್, ಬಿಜೆಪಿ ಮುಖಂಡ ಅನಂತರಾಜು
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸ್ಆ್ಯಪ್ ಚಾಟಿಂಗ್ ವೈರಲ್ ಆಗಿದೆ.
ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣ ದಿನಕ್ಕೊಂದು ದಿಕ್ಕಿಗೆ ತಿರುಗುತ್ತಿದೆ. ಸದ್ಯ ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವೈರಲ್ ಆದ ವಾಟ್ಸ್ಆ್ಯಪ್ ಚಾಟಿಂಗ್ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅನಂತರಾಜು ನನಗೆ ಮೋಸ ಮಾಡಿದ್ದಾನೆ.
ನನ್ನ ಮಾನ ಮರ್ಯಾದೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡತಿಗೆ ಕಳುಹಿಸಿದರೆ, ಅವಳೇ ಅನಂತರಾಜುನ ಸಾಯಿಸುತ್ತಾಳೆ. ಅಷ್ಟೊಂದು ಅಶ್ಲೀಲವಾಗಿದೆ ಆ ವಿಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡಬೇಕು.