ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಪೊಲೀಸ್​ ಠಾಣೆ  ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೇಖಾ | BJP Leader Antaraju Suicide Case Reakha Attempt to Suicide in front of police station in Bengaluru


ಬಿಜೆಪಿ  ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಪೊಲೀಸ್​ ಠಾಣೆ  ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೇಖಾ

ಬಿಜೆಪಿ ಮುಖಂಡ ಅನಂತಾರಜು ಆತ್ಮಹತ್ಯ ಪ್ರಕರಣ

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸ್​ ಠಾಣೆ  ಎದುರೇ ರೇಖಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಬೆಂಗಳೂರು:  ಬಿಜೆಪಿ (BJP) ಮುಖಂಡ ಅನಂತರಾಜು (Antaraju) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸ್​ ಠಾಣೆ  ಎದುರೇ ರೇಖಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಬಿಬಿಎಂಟಿಸಿ (BMTC) ಬಸ್‌ಗೆ ಅಡ್ಡವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ರೇಖಾ, ಸುಮಾ ವಿರುದ್ಧ ಬೆದರಿಕೆ ಸಂಬಂಧ ದೂರು ನೀಡಲು ಆಗಮಿಸಿದ್ದರು.  ಆದ್ರೆ ದೂರು ಕೊಡಲು ಬಂದರೆ ನನ್ನನ್ನೇ ವಿಚಾರಣೆಗೆ ಅಂತಾ ಇರಿಸಿಕೊಳ್ತಾರೆ. ನ್ಯಾಯ ಸಿಗತ್ತೆ ಎಂದು ನನಗೆ ಅನಿಸೋದಿಲ್ಲ. ಠಾಣೆ ಯಿಂದ ಬಂದು ವಾಹನಕ್ಕೆ ಅಡ್ಡ ನಿಂತು ಆತ್ಮಹತ್ಯೆಗೆ ಯತ್ನಿಸಿಸಿದ್ದರು. ಅದೃಷ್ಟವಶಾತ್  ಸ್ನೇಹಿತನಿಂದ ಸುಮಾ ರಕ್ಷಣೆ ಮಾಡಲಾಯ್ತು.ರೇಖಾ, ಮೃತ ಬಿಜೆಪಿ ಮುಖಂಡ ಅನಂತರಾಜು ಸ್ನೇಹಿತೆಯಾಗಿದ್ದಾರೆ.

ಮೇ 12 ರಂದು ಹೆರೋಹಳ್ಳಿ ವಾರ್ಡ್ ನ ನಿವಾಸಿ, ಬಿಜೆಪಿ ಮುಖಂಡ ಅನಂತರಾಜು(46) ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಬಿಜೆಪಿ ನಾಯಕನ  ಹಣ, ಅಂತಸ್ತು, ಊರಲ್ಲಿ ಒಳ್ಳೆ ಹೆಸರು, ಜನರ ಬೆಂಬಲ ಎಲ್ಲಾ ಜತೆಗಿದ್ದ ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ರು. ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ರು. ದಿಢೀರ್ ಎಂದು ಉಸಿರು ಚೆಲ್ಲಿದ ನಾಯಕನಿಗೆ, ಏರಿಯಾ ಜನರೆಲ್ಲ ಕಣ್ಣೀರಿಟ್ಟಿದ್ರು. ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ, ಸಚಿವ ಎಸ್.ಟಿ.ಸೋಮಶೇಖರ್​ ಆಪ್ತನಾಗಿದ್ದವರು. ಕಮಲ ಪಾಳೆಯದಲ್ಲಿ ದೊಡ್ಡ ದೊಡ್ಡ ನಾಯಕರ ಜತೆ ಸ್ನೇಹ ಹೊಂದಿದ್ದರು. ಅನಂತರಾಜು ಸೂಸೈಡ್ ಹಿಂದೆ ಹನಿಟ್ರ್ಯಾಪ್ ಕಹಾನಿ ಇರೋದು ಹೊರಬಿದ್ದಿದೆ.

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿಗೆ ಇಡಿ ಸಮನ್ಸ್

ಹೇರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡನಾಗಿದ್ದ, ಅನಂತರಾಜ್ ಸಾವಿಗೆ ಹನಿಟ್ರ್ಯಾಪ್ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ, ಅನಂತರಾಜು ಪತ್ನಿ ಸುಮಾ, ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಕೆ.ಆರ್.ಪುರಂನ ರೇಖಾ, ವಿನೋದ್ ಮತ್ತು ಸ್ಪಂದನಾ ಎಂಬುವವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ವಿಷ್ಯ ಏನಂದ್ರೆ, ಅನಂತರಾಜ್ಗೆ ಕೆಲ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರೇಖಾ ಎಂಬಾಕೆ ಪರಿಚಯ ಆಗಿದ್ಳಂತೆ. ನಂತರ ಅದೇನಾಗಿದೆಯೋ ಏನೋ, ಅನಂತರಾಜ್ರ ಖಾಸಗಿ ಫೋಟೋ, ವಿಡಿಯೋಗಳನ್ನ ಪಡೆದು, ಹಣಕ್ಕಾಗಿ ರೇಖಾ ಡಿಮ್ಯಾಂಡ್ ಮಾಡುತ್ತಿದ್ಳಂತೆ. ಹಣ ನೀಡದಿದ್ರೆ ಪಕ್ಷದ ಮುಖಂಡರು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ರಂತೆ. ಸಾಕಷ್ಟು ಹಣ ಕೊಟ್ಟು ಬೇಸತ್ತಿದ್ದ ಅನಂತರಾಜು, ಪತ್ನಿ ಜತೆಗೂ ಈ ವಿಷ್ಯ ಹೇಳ್ಕೊಂಡಿದ್ರಂತೆ. ಆದ್ರೆ, ಮಾನಸಿಕವಾಗಿ ನೊಂದಿದ್ದ ಅವರು ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಪತ್ನಿ ದೂರು ನೀಡಿದ್ದಾರೆ.

ಇದನ್ನು ಓದಿ: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.

ಬಿಜೆಪಿ ಪಕ್ಷದ ಪ್ರಮುಖ ನಾಯಕ, ಸಚಿವರಿಗೂ ಆಪ್ತನಾಗಿದ್ದ ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಹನಿಟ್ರ್ಯಾಪ್ ಬ್ಲಾಕ್ಮೇಲ್ಗೆ ಹೆದರಿ ಮೇ 12ರಂದು ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಅನಂತರಾಜು ಪತ್ನಿ ದೂರು ಆಧರಿಸಿ ರೇಖಾ, ವಿನೋದ್, ಸ್ಪಂದನ ವಿರುದ್ಧ FIR ದಾಖಲಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *