ಬೆಂಗಳೂರು: ಬಿಜೆಪಿಯು ರಾಹುಲ್ ಗಾಂಧಿ ಅವರ ಮಾತು ಕೇಳಿದ್ದರೆ, ಈ ಎರಡನೆಯ ಅಲೆಯಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಬಹುದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್.. ಲಸಿಕಾ ಅಭಿಯಾನದ ತಂತ್ರಗಾರಿಕೆಯನ್ನು ಭಾರತ ಇಂದಿಗೂ ಹೊಂದಿಲ್ಲ. ಪ್ರಮಾದಗಳನ್ನು ಸರಿಪಡಿಸಿಕೊಳ್ಳುತ್ತಿದೆ ಅಷ್ಟೇ. ನಾವುಗಳು ಚಿಂತನೆ ನಡೆಸಿದ್ದರೆ, ಬಿಜೆಪಿಯು ರಾಹುಲ್ ಗಾಂಧಿಯವರ ಮಾತು ಕೇಳಿದ್ದರೆ, ಈ ಎರಡನೆಯ ಅಲೆಯಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಬಹುದಿತ್ತು. ಮೂರನೇ ಅಲೆ ತಡೆಯಲು ಭಾರತ‌ ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

The post ಬಿಜೆಪಿ ರಾಹುಲ್ ಗಾಂಧಿ ಮಾತು ಕೇಳಿದ್ರೆ ಕೊರೊನಾದಿಂದ ಲಕ್ಷಾಂತರ ಜೀವಗಳನ್ನ ಉಳಿಸಬಹುದಿತ್ತು -ಡಿಕೆಎಸ್ appeared first on News First Kannada.

Source: newsfirstlive.com

Source link