ಗುರಗಾಂವ್: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇಂದು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಗುರಗಾಂವ್‌ನ ಮೆದಂತಾ ಆಸ್ಪತ್ರೆಯಲ್ಲಿ ಮುಲಾಯಂ ಸಿಂಗ್ ಯಾದವ್​​ ಅವರಿಗೆ ಮೊದಲ ಡೋಸ್​ ವ್ಯಾಕ್ಸಿನ್ ನೀಡಲಾಗಿದೆ.

ಬಿಜೆಪಿ ಲಸಿಕೆ ಪಡೆಯಲ್ಲ ಎಂದಿದ್ದ ಅಖಿಲೇಶ್​ ಯಾದವ್
ಈ ಹಿಂದೆ ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈ ರನ್ ನಡೆಯುವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ, ಮುಲಾಯಂ ಸಿಂಗ್ ಅವರ ಮಗ ಅಖಿಲೇಶ್ ಯಾದವ್, ಲಸಿಕೆಯನ್ನ ವಿರೋಧಿಸಿದ್ದರು. ನಾನು ಸದ್ಯಕ್ಕೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ನಂಬೋದಾದ್ರೂ ಹೇಗೆ..? ನಾವು ಬಿಜೆಪಿ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಆದ್ರೆ ಕಳೆದ ಮಾರ್ಚ್​​ನಲ್ಲಿ ಸ್ವತಃ ಅಖಿಲೇಶ್ ಯಾದವ್ ಅವರ ಕುಟುಂಬದ ಸದಸ್ಯರೇ ತೆರಳಿ ಲಸಿಕೆ ಪಡೆದುಕೊಂಡಿದ್ದರು.

ಮುಲಾಯಂ ಸಿಂಗ್ ಯಾದವ್ ಅವರ ಸಹೋದರಿ ಕಮ್ಲಾ ದೇವಿ ಹಾಗೂ ಅವರ ಪತಿ ಡಾ. ಅಂಜತ್ ಸಿಂಗ್ ಮಾರ್ಚ್​​ 1ರಂದು ಎಟವಾ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಚುಚ್ಚುಮದ್ದನ್ನು ಹಾಕಿಸಿಕೊಂಡರು. ಈಗ ಖುದ್ದು ಅಖಿಲೇಶ್​ ಯಾದವ್​​ರ ತಂದೆ ಕೂಡ ಲಸಿಕೆ ಪಡೆದಿದ್ದಾರೆ.

The post ‘ಬಿಜೆಪಿ’ ವ್ಯಾಕ್ಸಿನ್ ಪಡೆದ ಮುಲಾಯಂ ಸಿಂಗ್ ಯಾದವ್; ಈ ಹೆಸರು ಕೊಟ್ಟಿದ್ದು ಯಾರ್ ಗೊತ್ತಾ?! appeared first on News First Kannada.

Source: newsfirstlive.com

Source link