
ಪ್ರಾತಿನಿಧಿಕ ಚಿತ್ರ
ಬಿಜೆಪಿ ಹೈಕಮಾಂಡ್ಗೆ ಪರಿಷತ್ ಅಭ್ಯರ್ಥಿ ಆಯ್ಕೆ ತಲೆನೋವು ಉಂಟು ಮಾಡಿದ್ದು, ಅದೊಂದು ಅಭ್ಯರ್ಥಿ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲಿ ಗೊಂದಲ ಉಂಟಾಗಿದೆ.
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಇಂದು ಮಧ್ಯಾಹ್ನ ಅಥವಾ ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದ್ದು, ನಾಲ್ಕು ಸ್ಥಾನಗಳಿಗೆ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ. ಬಿ.ವೈ. ವಿಜಯೇಂದ್ರ, ಎಂ. ರಾಜೇಂದ್ರ, ಲಕ್ಷ್ಮಣ ಸವದಿ, ನಿರ್ಮಲ್ ಕುಮಾರ್ ಸುರಾನಾ, ಗೀತಾ ವಿವೇಕಾನಂದ, ಕೇಶವಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಸಿದ್ಧರಾಜು, ಮಂಜಳಾ ಸೇರಿದಂತೆ ಹಲವು ಹೆಸರು ರೇಸ್ನಲ್ಲಿವೆ. ವಿಜಯೇಂದ್ರಗೆ ಟಿಕೆಟ್ ಸಿಗುವ ಬಗ್ಗೆ ಕುತೂಹಲ ಹೆಚ್ಚಿದೆ. ಕುಟುಂಬ ರಾಜಕಾರಣದ ಬಗ್ಗೆ ಆಗಾಗ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತಿರುವ ವರಿಷ್ಠರು, ಹೀಗಾಗಿ ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ರಾಜ್ಯ ಕೋರ್ ಕಮಿಟಿಯಿಂದ ಕೇಂದ್ರೀಯ ಚುನಾವಣಾ ಸಮಿತಿಗೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಲಾಗಿದೆ. 1:5 ರಂತೆ ನಾಲ್ಕು ಸ್ಥಾನಗಳಿಗೆ 20 ಹೆಸರುಗಳನ್ನು ಹೈಕಮಾಂಡ್ ತರಿಸಿಕೊಂಡಿದೆ.
ಬಿಜೆಪಿ ಹೈಕಮಾಂಡ್ಗೆ ತಲೆನೋವಾದ ಅದೊಂದು ಅಭ್ಯರ್ಥಿ ಆಯ್ಕೆ:
ಬಿಜೆಪಿ ಹೈಕಮಾಂಡ್ಗೆ ಪರಿಷತ್ ಅಭ್ಯರ್ಥಿ ಆಯ್ಕೆ ತಲೆನೋವು ಉಂಟು ಮಾಡಿದ್ದು, ಅದೊಂದು ಅಭ್ಯರ್ಥಿ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲಿ ಗೊಂದಲ ಉಂಟಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕೆ? ಬೇಡವೇ ಬಿ.ವೈ.ವಿಜಯೇಂದ್ರಗೆ ಸ್ಥಾನ ನೀಡಿದರೆ ಹೋಗುವ ಸಂದೇಶ ಏನು? ಬಿ.ವೈ.ವಿಜಯೇಂದ್ರಗೆ ಸ್ಥಾನ ನೀಡದಿದ್ದರೆ ಪರಿಣಾಮ ಏನಾಗಬಹುದು? ವಿಜಯೇಂದ್ರಗೆ ಸ್ಥಾನ ನೀಡದಿದ್ರೆ ಬಿ.ಎಸ್. ಯುಡಿಯೂರಪ್ಪ ಮುನಿಸಿಕೊಳ್ಳದೆ ಇರುವರೇ? ಬಿಜೆಪಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಸಿತುಪ್ಪವಾಗಿದ್ದಾರೆ. ಸದ್ಯ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮೇಲೆ ಬಾರ ಹಾಕಿ ಕುಳಿತಿದ್ದಾರೆ. ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.