ವಿಶ್ವ ಟೆಸ್ಟ್​ ಚಾಂಪಿಯಮ್​ಶಿಪ್​​ ಫೈನಲ್ ಪಂದ್ಯಕ್ಕೆ, ಕೌಂಟ್​ಡೌನ್ ಶುರುವಾಗಿದೆ. ಜೂನ್​​​ 18ರಿಂದ ಆರಂಭಗೊಳ್ಳುವ ಈ ಫೈನಲ್​ ಪಂದ್ಯಕ್ಕೆ, ಒಂದು ತಿಂಗಳು ಬಾಕಿ ಇದೆ. ಆದ್ರೆ ಅಭಿಮಾನಿಗಳ ಚಿತ್ತ ಮಾತ್ರ ಟೆಸ್ಟ್​ ಚಾಂಪಿಯನ್​ಶಿಪ್​ ಮೇಲೆಯೇ ನೆಟ್ಟಿದೆ. ಇದಕ್ಕೆ ಕಾರಣ, ವಿಶ್ವ ಟೆಸ್ಟ್​ ಕ್ರಿಕೆಟ್​​ನ ಮದಗಜಗಳ ಕಾದಾಟ. ಅಷ್ಟೇ ಅಲ್ಲ..! ಘಟಾನುಘಟಿ ಆಟಗಾರರ ಕಾದಾಟಕ್ಕೂ ವೇದಿಕೆ ಆಗಿದೆ.

ಅದ್ರಲ್ಲೂ ಉಭಯ ತಂಡಗಳ ಗೇಮ್​​ ಚೇಜಿಂಗ್ ಪ್ಲೇಯರ್ಸ್ ಅಂತಾನೇ ಗುರುತಿಸಿಕೊಂಡಿರುವ ಇಬ್ಬರು ವಿಕೆಟ್​ ಕೀಪರ್​ಗಳ ಮುಖಾಮುಖಿ, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ..

ಇಂಗ್ಲೆಂಡ್​​ನಲ್ಲಿ ನಡೆಯಲಿದೆ ವಾಟ್ಲಿಂಗ್, ಪಂತ್ ಫೈಟ್…!
ಕಿವೀಸ್​ನ ಮಧ್ಯಮ ಕ್ರಮಾಂಕದ ಶಕ್ತಿಯಾಗಿರುವ ವಾಟ್ಲಿಂಗ್​ಗೆ, ಇಂಗ್ಲೆಂಡ್ ಪ್ರವಾಸ ನಿಜಕ್ಕೂ ಅಗ್ನಿಪರೀಕ್ಷೆಯ ಸರಣಿಯಾಗಿದೆ. ಇಂಗ್ಲೆಂಡ್ ಪ್ರವಾಸದ ಬಳಿಕ ಕ್ರಿಕೆಟ್​ಗೆ ಗುಡ್​​ಬೈ ಹೇಳಲು ನಿರ್ಧರಿಸಿರುವ ವಾಟ್ಲಿಂಗ್, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್ ಗೆಲ್ಲೋ ಛಲದಲ್ಲಿದ್ದಾರೆ. ಇತ್ತ ಅತ್ಯದ್ಬುತ ಫಾರ್ಮ್​ನಲ್ಲಿರುವ ರಿಷಭ್ ಪಂತ್, 4 ವರ್ಷಗಳ ಬಳಿಕ ಮತ್ತೊಮ್ಮೆ ಇಂಗ್ಲೆಂಡ್​​ನಲ್ಲಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಹಾಗಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಫೈನಲ್​ ಪಂದ್ಯ, ವಾಟ್ಲಿಂಗ್​ ವರ್ಸಸ್​ ಪಂತ್ ಫೈಟ್​ಗೆ ಸಾಕ್ಷಿಯಾಗ್ತಿದೆ.

ಉಭಯ ತಂಡಗಳ ಗೆಲುವಿಗೆ ಇವರೇ ನಿರ್ಣಾಯಕ..!
ಯೆಸ್..! ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​​ ಪಂದ್ಯವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಉಭಯ ತಂಡಗಳ ಗೆಲುವು, ವಿಕೆಟ್​ ಕೀಪರ್​ಗಳ ಮೇಲೆಯೇ ನಿಂತಿದೆ. ಅನುಭವಿ ವಾಟ್ಲಿಂಗ್ ಒಂದು ಕಡೆಯಾದರೆ, ರೈಸಿಂಗ್ ಸ್ಟಾರ್​ ರಿಷಭ್ ಪಂತ್, ಟೆಸ್ಟ್ ಪಾದಾರ್ಪಣ ನೆಲದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಕೆಟ್ ಕೀಪಿಂಗ್ ಆ್ಯಂಡ್ ಬ್ಯಾಟಿಂಗ್​​ನಲ್ಲಿ ಅಬ್ಬರಿಸುವ ಇವರೇ, ತಂಡದ ಗೆಲುವಿನಲ್ಲಿ ನಿರ್ಣಾಯಕ ಎನಿಸಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಉಭಯ ಆಟಗಾರರು
ವಾಟ್ಲಿಂಗ್ ಪಂತ್
03 ಪಂದ್ಯ 03
284 ರನ್ 162
56.80 ಸರಾಸರಿ 27.00
01 ಶತಕ 01

ಸೌತ್​ಹ್ಯಾಂಫ್ಟನ್​​ನಲ್ಲಿ ಟಫ್ ಫೈಟ್​ ಗ್ಯಾರಂಟಿ..!
ಇಂಗ್ಲೆಂಡ್​​ ನೆಲದಲ್ಲಿ ಕಿವೀಸ್​ನ ವಾಟ್ಲಿಂಗ್ ಅಂಕಿ ಅಂಶಗಳೂ ಮುಂದಿದ್ರೂ, ಯಂಗ್ ರಿಷಭ್ ಪಂತ್ ಟಫ್ ಕಾಂಪಿಟೇಷನ್ ನೀಡಲಿದ್ದಾರೆ. ವೃತ್ತಿ ಜೀವನದ ಉತ್ತುಂಗ ಫಾರ್ಮ್​ನಲ್ಲಿರುವ ಪಂತ್, ಅನುಭವಿ ವಾಲ್ಟಿಂಗ್​​ಗೆ ಸಡ್ಡು ಹೊಡೆಯೋದು ಗ್ಯಾರಂಟಿ.. ಬ್ಯಾಟಿಂಗ್ ಆ್ಯಂಡ್ ವಿಕೆಟ್ ಕೀಪಿಂಗ್​ನಲ್ಲಿ ಈ ಇಬ್ಬರ ಅಂಕಿಅಂಶಗಳೂ, ಇದನ್ನೇ ಹೇಳುತ್ತಿವೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಉಭಯ ಆಟಗಾರರ ಸಾಧನೆ
ವಾಟ್ಲಿಂಗ್                       ಪಂತ್
73             ಪಂದ್ಯ          20
3773            ರನ್          1358
38.11         ಸರಾಸರಿ       45.26
267            ವಿಕೆಟ್           82

ಇಂಗ್ಲೆಂಡ್​ನಲ್ಲಿ ಪಂತ್ ಮಾಡಲಿದ್ದಾರಾ ಕಮಾಲ್..?
4 ವರ್ಷಗಳ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿರುವ ಪಂತ್​ ಮೇಲೆ, ನಿರೀಕ್ಷೆಯ ಹೆಚ್ಚಾಗಿದೆ. 2018ರಲ್ಲಿ ಇಂಗ್ಲೆಂಡ್​​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪಂತ್, ಮೊದಲ ಪಂದ್ಯದಲ್ಲೇ 11 ಕ್ಯಾಚ್ ಪಡೆಯುವುದರೊಂದಿಗೆ ಕಮಾಲ್ ಮಾಡಿದ್ದರು. ಅಷ್ಟೇ ಅಲ್ಲ..! ಇಂಗ್ಲೆಂಡ್​ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇಷ್ಟೇಲ್ಲಾ ದಾಖಲೆಯ ಜೊತೆಗೆ ಈಗ ಅಮೋಘ ಫಾರ್ಮ್​ನಲ್ಲಿರೋ ಪಂತ್, ಈ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಎಂಬ ಕುತೂಹಲ ಮೂಡಿಸಿದೆ.

ಒಟ್ನಲ್ಲಿ..! ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ನ ಫೈನಲ್ ಫೈಟ್, ಅನುಭವಿ ವಾಟ್ಲಿಂಗ್ ಆ್ಯಂಡ್ ರೈಸಿಂಗ್ ಸೂಪರ್​ ಸ್ಟಾರ್​ ರಿಷಭ್ ಪಂತ್ ಕಾದಾಟಕ್ಕೆ ಸಾಕ್ಷಿಯಾಗ್ತಿದ್ದು, ಯಾರ ಕೈ ಮೇಲಾಗ್ತಿದೆ ಅನ್ನೋದನ್ನ ಕಾದುನೋಡಬೇಕಷ್ಟೇ..

The post ಬಿಜೆ ವಾಟ್ಲಿಂಗ್‌ V/S ರಿಶಭ್ ಪಂತ್- WTCನಲ್ಲಿ ನಡೆಯಲಿದೆ ವಿಕೆಟ್ ಕೀಪರ್ಸ್ ಫೈಟ್..! appeared first on News First Kannada.

Source: newsfirstlive.com

Source link